ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈಗಳೆರಡೂ ಬೆಸೆದು…

ಡಾ. ಪ್ರೀತಿ ಕೆ ಎ

ನಿನ್ನ ಒಲವ ದೀಪವೊಂದು
ಸದಾ ಉರಿದಿದೆ
ಬದುಕು ಪೂರ್ತಿ ನನ್ನನ್ನು
ಬಿಡದೆ ಪೊರೆದಿದೆ

ಪ್ರೀತಿ, ಪ್ರಣಯ, ಪ್ರೇಮ, ಕಾಮಗಳಾಚೆಯೂ
ನಮ್ಮಿಬ್ಬರನ್ನು ಬಂಧಿಸಿಟ್ಟಿದೆ
ಮನಸ ಹಕ್ಕಿ ಎಲ್ಲೋ ಹಾರದಂತೆ
ನನ್ನ ತಡೆದಿದೆ

ಸುಂಯ್ಯನೆಂದು ಬೀಸಿದ ಹೊಸ ಗಾಳಿಗೆ
ಚೂರೂ ಬಳುಕದೆ
ಧೋ ಎಂದು ಸುರಿದ ಮಳೆಗೆ
ಒಂದಿನಿತೂ ಅಳುಕದೆ

ಬತ್ತಿಯೆಂದೂ ಕಿರಿದಾಗದೆ
ತೈಲವೆಂದೂ ಸೋರಗೊಡದೆ
ದೀಪ ಬೆಳಕು ಚೆಲ್ಲಿದೆ
ನಿನ್ನೊಲವ ಗಂಧವೊಂದು ಹಬ್ಬಿ ನಿಂತಿದೆ

ನನ್ನ ನಿನ್ನ ಕೈಗಳೆರಡೂ
ಒಂದಕ್ಕೊಂದು ಬೆಸೆದು ನಿಂತು
ದೀಪವೆಂದೂ ಆರದಂತೆ
ತಬ್ಬಿ ಹಿಡಿದಿದೆ

‍ಲೇಖಕರು Avadhi

22 January, 2021

1 Comment

  1. Nagraj Harapanhalli

    ಚೆಂದ ಒಲವು
    ಅದು ಆರದ ದೀಪ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading