ಕೆ ಟಿ ಗಟ್ಟಿಯವರಿಗೆ ಹೀಗೆ ಆಗಬಾರದಿತ್ತು..

ನಾನು ಪ್ರೊ. ಕೆ. ಟಿ. ಗಟ್ಟಿಯವರನ್ನು ಬಲ್ಲೆ;

ಮಂಗಳೂರಿನಲ್ಲಿದ್ದಾಗ ಅವರ ನಿಕಟ ಪರಿಚಯವೂ ಇತ್ತು.

ಪ್ರಾಮಾಣಿಕತೆ ಅವರ ವ್ಯಕ್ತಿತ್ವದಲ್ಲಿಯೇ ಹಾಸುಹೊಕ್ಕಾಗಿದೆ. ಅನೇಕಾನೇಕ ಉತ್ತಮ ಕಾದಂಬರಿಗಳನ್ನು ಬರೆದು ಸಾವಿರಾರು ಅಭಿಮಾನಿಗಳನ್ನು ಪಡೆದ, ಸರಕಾರವೇ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಸಾಹಿತಿಯೊಬ್ಬರು ತಮ್ಮ ಆದಾಯ ದೃಢೀಕರಣ ಪತ್ರವನ್ನು ಕೊಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಸರಕಾರಕ್ಕೂ ನಮಗೂ ಕೂಡಿಯೇ ನಾಚಿಕೆಯಾಗಬೇಕು.

ಪ್ರಾಯಃ, ಅವರು ಚಿಕಿತ್ಸಾ ಬಿಲ್‍ ಅನ್ನು ೭೦,೦೦೦/ ಅಥವಾ ಒಂದು ಲಕ್ಷಕ್ಕೆ ಕೊಟ್ಟಿದ್ದರೆ ಅದನ್ನು (ತಮ್ಮ ಕಮೀಶನ್ ಮುರಿದುಕೊಂಡು) ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪಾಸ್ ಮಾಡುತ್ತಿದ್ದರು ಎಂದು ಕಾಣುತ್ತದೆ.

ಸರಕಾರಕ್ಕೆ ಇದನ್ನು ತಿಳಿಯಪಡಿಸುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ. ತುಂಬಾ ನೋವಾಗುತ್ತಿದೆ.

-ಸಿ. ಎನ್. ರಾಮಚಂದ್ರನ್

ಶ್ರೀ ಗಟ್ಟಿಯವರಿಗೆ ಹೀಗೆ ಆಗಬಾರದಿತ್ತು.

ಹಿರಿಯ ನಾಗರಿಕರ ಮೇಲೆ ಈ ದೃಢೀಕರಣಪತ್ರದ ಹೊರೆಯನ್ನು ಹೊರಿಸುವುದು ಸರಿಯಲ್ಲ. ಕೂಡಲೇ ಮೇಲಧಿಕಾರಿಗಳು ಈ ಪ್ರಮಾದವನ್ನು ಸರಿಪಡಿಸಬೇಕು.

-ಕೆ.ವಿ. ತಿರುಮಲೇಶ್

 

 

 

ಕೆ. ಟಿ. ಗಟ್ಟಿ ಅವರು ನ್ಯಾಯಯುತವಾಗಿ ಸರಕಾರದಿಂದ ತಮಗೆ ಬರಬೇಕಾದ್ದನ್ನು ಮಾತ್ರ ಅಪೇಕ್ಷಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸರಕಾರವೇ ಅವರಿಂದ ದೃಢೀಕರಣ ಪತ್ರ ಕೇಳುವುದು ಮಾತ್ರ ಬರೀ ಅಸಮಂಜಸ.

ಸಿ. ಎನ್. ರಾಮಚಂದ್ರನ್ ಅವರಂದಂತೆ -ನಾಚಿಕೆಗೇಡು.

ಗಟ್ಟಿ ಅವರೋ ಸ್ಥಿತಪ್ರಜ್ಞರು; ನಿಸ್ಪೃಹರು.. ಇನ್ನೀಗ ಸರಕಾರ ಕೊಟ್ಟರೂ ತೆಗೆದುಕೊಳ್ಳುವವರು ಅವರಲ್ಲ. ಅಭಿಮಾನಧನರೂ , ಮಹಾಮಾನವರೂ ಆದ ಈ ಶಿಕ್ಷಣ ತಜ್ಞ, ವಿಚಾರವಾದಿ ಸಾಹಿತಿಶ್ರೇಷ್ಠರನ್ನು ನಮ್ಮ ವಿಶ್ವವಿದ್ಯಾಲಯಗಳು ಎಂದೋ  ಗೌರವ ಡಾಕ್ಟರೇಟ್ ನೀಡಿ ಗೌರವಿಸಬೇಕಿತ್ತು.

-ಶ್ಯಾಮಲಾ ಮಾಧವ 

ಕೆ ಟಿ ಗಟ್ಟಿ ಯವರು ನಟ ಕಮ್ ಸಚಿವರಾಗಿದ್ದಲ್ಲಿ ಅವರಿಗೆ ವಿದೇಶಿ ಚಿಕಿತ್ಸೆಯ ಭಾಗ್ಯ ಒಲಿಯುತ್ತಿತ್ತೇನೋ?

ಅವರು ಬರೆಹಗಾರರು ತಾನೇ? ಕನ್ನಡಕ್ಕೆ ‘ಕೊಡುಗೆ’ ನೀಡುವವರು

ಬಂಗಲೆಗಳಲ್ಲಿ ಐಷಾರಾಮಿ ಜೀವನ ನಡೆಸುವ ಚಿತ್ರನಟರು! ಬರೆಹಗಾರರು ಅಲ್ಲ ತಾನೇ?

-ಸತ್ಯಕಾಮ ಶರ್ಮ ಕಾಸರಗೋಡು 

‍ಲೇಖಕರು avadhi

March 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಈ ಪ್ರಕರಣವನ್ನು ಶ್ರೀ ಗಟ್ಟಿಯವರ ಪ್ರಾಮಾಣಿಕತನಕ್ಕೆ ತಳಕು ಹಾಕುವ ಪ್ರಯತ್ನ ನಡೆಯುತ್ತಿರುವುದು ಯಾಕೆಂದು ಅರ್ಥವಾಗುತ್ತಿಲ್ಲ. ವ್ಯವಸ್ಥೆಗೆ ಕಾನೂನಿನ ತಳಹದಿಯಿರುತ್ತದೆ. ನಡೆಯುವ ಕೆಲಸಗಳೆಲ್ಲ ಆ ಪ್ರಕಾರವೇ ನಡೆಯಬೇಕು. ಅದನ್ನು ಮೀರಬೇಕಾದರೆ ನಡುವಿನಲ್ಲಿ ಯಾರಾದರೂ ತಮ್ಮ ವಿವೇಚನಾಪೂರಿತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಪೂರಕ ಮಾಹಿತಿಗಳು ಬೇಕಾಗುತ್ತವೆ. ಅದನ್ನು ಕೇಳುವುದು ತಪ್ಪೇ? ಗಟ್ಟಿಯವರೂ ಆಡಳಿತದವರು ಕೇಳಿದ ಪೂರಕ ಮಾಹಿತಿ ಒದಗಿಸಲು ಸಾಧ್ಯವಿಲ್ಲದ ತನ್ನ ಪರಿಸ್ಥಿತಿಯನ್ನು ಹೇಳಿ ಆದರಿಂದ ರಿಯಾಯಿತಿ ಕೇಳಬಹುದಿತ್ತು. ವ್ಯವಸ್ಥೆ ವ್ಯಕ್ತಿಗಿMತ ಮೇಲಿನದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಹಾಗೊಂದು ವೇಳೆ ಕಾನೂನು ಮೀರಿದರೆ ಹಾಗೆ ಮೀರಿದವರ ಪರಿಸ್ಥಿತಿ ಹೇಗಾಗುತ್ತದೆ ಎನ್ನುವುದೂ ತಿಳಿದದ್ದೇ.
    ದೆಹಲಿಯಲ್ಲಿ ರಾಷ್ಟ್ರಪತಿಯಿಂದ ಸನ್ಮಾನಕ್ಕೊಳಗಾದ ಸಾಧಕನೊಬ್ಬ ಟಿವಿಯಲ್ಲಿ ನ್ಯೂಸ್ ಬಂದಿದೆ. ಪೇಪರಿನಲ್ಲಿ ಫೋಟೋ ಬಂದಿದೆ ನನ್ನ ಪ್ರಯಾಣ ಭತ್ಯೆಯನ್ನು ಬಿಲ್ ಇಲ್ಲದೇ ಸೆಟ್ಲ್ ಮಾಡಿ ಎಂದರೆ ಅದು ಸಾಧುವೇ.

    ನನಗೆ ಗಟ್ಟಿಯವರ ಬಗ್ಗೆ ಎಲ್ಲರಿಗಿರುವುದಕ್ಕಿಂತ ಹೆಚ್ಚಿನ ಅಭಿಮಾನವೇ ಇದೆ. ಆದರೆ ಕಾನೂನು ಒMದು ಇದೆ ಎನ್ನುವುದನ್ನು ಯಾರೂ ಮರೆಯಬಾರದು. ಹಾಗಿದ್ದಲ್ಲಿ ಗಟ್ಟಿಯವರ ಅಭಿಮಾನಿಗಳು ಯಾರಾದರೂ ಅವರ ಸಹಾಯಕ್ಕೆ ಮುನ್ದಾಗಬಹುದಿತ್ತಲ್ಲವೇ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: