ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕುಡಿಯೊಡೆದ ಕನಸುಗಳಿಗೆ ನಾನು ತೊಟ್ಟಿಲು ತೂಗಿ…’ – ಶಾಂತಿ ಕೆ ಅಪ್ಪಣ್ಣ

ಶಾಂತಿ ಕೆ ಅಪ್ಪಣ್ಣ

ಹೊರಟು ನಿಂತ ಆ ಘಳಿಗೆಯಲ್ಲಿ
ಖಾಲಿ ಬಿಂದಿಗೆ ಮನಸು …
ತುಟಿಯ ಹೊಸ್ತಿಲಲಿ ನಿಂತ
ಅಯಾಚಿತ ಬಿಕ್ಕು….
ಕಣ್ಣ ಬಟ್ಟಲಲಿ ಸದ್ದಿಲ್ಲದೇ ಇಂಗಿತ್ತು ..
ಬಿಗುಮಾನದ ಕಣ್ಣ ಹನಿ
 
ಗುಲ್ಮೊಹರ್ ಮರದ ಅಡಿ
ಚಪ್ಪರದಂತೆ ನೆರಳು ..
ಹೆಣೆ ನಾಗರ ಜೋಡಿ..,
ಬೆಸೆದ ಬೆರಳು ..
ಗೌರಿಕೆರೆಯ ಮೌನದಂಡೆಯಲಿ
ಮಾತಿಗಿಳಿದ ಉಂಗುರದ ಹರಳು

ಕಲೆ : ವೆಂಕಟ್ರಮಣ ಭಟ್

ನನ್ನೆದೆಯ ಹಾಡು
ನಿನ್ನ ತುಟಿಯಲಿ ಹೊಮ್ಮಿ
ಕುಡಿಯೊಡೆದ ಕನಸುಗಳಿಗೆ
ನಾನು ತೊಟ್ಟಿಲು ತೂಗಿ
ಗಮ್ಯ ಮಹಾ ಶರಧಿ
ಬದುಕು ಬಣ್ಣದ ನದಿ
ಅರೆ ,ಬದಲಿಸಿತು ಹೇಗೆ ದಿಕ್ಕು ?
 
 
ನಾವೆ ಮುರಿದು ಹಾಯಿ ಹರಿದು
ಇಬ್ಬರ ತೀರದಲೂ ಸ್ಪಷ್ಟ
ಮೊಳೆತೆದ್ದ ಹಮ್ಮಿನ ಗೋಡೆ
ಕೆಡವಿ ಕೆಳಚೆಲ್ಲಿದರೆ ..
ಆಗಬಹುದು ಸೇತುವೆ ..
ಆದರೂ…..
ಅಹಂಕಾರದ ಬೇಲಿ ..
ದಾಟುವುದೆಷ್ಟು ಕಷ್ಟ
 

‍ಲೇಖಕರು avadhi

23 August, 2013

5 Comments

  1. Swarna

    “ಗುಲ್ಮೊಹರ್ ಮರದ ಅಡಿ ಚಪ್ಪರದಂತೆ ನೆರಳು .. ಹೆಣೆ ನಾಗರ ಜೋಡಿ..,ಬೆಸೆದ ಬೆರಳು ..”
    ಸೆಳೆದ ರೂಪಕ. ‘ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ‘
    ಚೆನ್ನಾಗಿದೆ

  2. hanumant

    so nice

  3. Shreepad Hegde

    Very good poem I have read recently. Hope to read some more good poem from the poet.

  4. Anonymous

    moletedda hammina gode, kedavi kelachellidare… aagabahude sethuve… Excellent!!!

  5. shanthi k a

    thanks all of you ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading