ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರಾಗೃಹದ ಖೈದಿ ಹೊರಗೋಡುವಂತೆ..

ಒಳಗಿನ ಕತ್ತಲು

12743541_831369716971834_4933379467499912297_n

ಸಂದೀಪ್ ಈಶಾನ್ಯ 

ಎಷ್ಟೋ ದಿನದ ಕತ್ತಲದು
ಮನೆಯ ಯಾವ ಮೂಲೆಯಲ್ಲೂ ಬೆಳಕಿಲ್ಲ
ಹತ್ತಿರದ ಅಡಿಗೆಮನೆಯಲ್ಲಿ ಎಂದೋ
ಸುಟ್ಟಿದ ಕರುಕುಲು ರೊಟ್ಟಿ
ಮಹಡಿಯ ಮೇಲೆ ಒಣಗಲು ತೂಗುಹಾಕಿದ
sheಒದ್ದೆ ಬಟ್ಟೆಯ ಮುಗ್ಗಲು ವಾಸನೆ
ಬಂದವನು ಸುಮ್ಮನೆ ಒಂದು ಕಿಟಕಿ
ತೆರವು ಮಾಡಿದೆ ಅಷ್ಟೇ
ಕಾರಾಗೃಹದ ಖೈದಿ ಹೊರಗೋಡುವಂತೆ
ಒಮ್ಮೆಲೆ ಬೆಳಕು ಮನೆಯನ್ನೆಲ್ಲ ಆವರಿಸಿಬಿಟ್ಟಿತು
ಮನೆಯ ಬೆಳಕಿಗೆ ಬಾಗಿಲು ಕಿಟಕಿ ಮೇಲಿನ ಹೆಂಚಾದರು ಉಂಟು
ಮನದ ಬೆಳಕಿಗೆ ಏನು?

ಕತ್ತಲು ಎಲ್ಲಿಲ್ಲ
ಹುಡುಕಲೆಂದು ಪೇದೆಯಂತೆ ತಪಾಸಣೆಗಿಳಿದೆ
ಅಟ್ಟದ ಮೇಲೆ
ಬಾಗಿಲ ಹಿಂದೆ
ಮಂಚದ ಕೆಳಗೆ
ಶಾಲೆಯ ಬ್ಯಾಗಿನ ಒಳಗೆ
ಪುಸ್ತಕದ ಹಾಳೆಯ ನಡುವೆ

ಎಲ್ಲಡೆಯಲ್ಲೂ ಕತ್ತಲ ಗೆರೆಯಿತ್ತು
ಆದರದು ರೋಧಿಸುತ್ತಿರಲಿಲ್ಲ ಸುಮ್ಮನೆ ನಸುನಗುತಿತ್ತು

ಸೋಮಾರಿ ಗಂಡನಿಗೆ ಹೆದರಿ
ಮಡದಿ ಮುಚ್ಚಿಟ್ಟ ಪುಡಿ ಚಿಲ್ಲರೆಯ
ಕಾವಲಿಗಿತ್ತು ಅಟ್ಟದ ಕತ್ತಲು

ಗೆಳೆಯ ಬರೆದ ಪ್ರೇಮ ಪತ್ರ ಕಂಡರೆ
ಬಿಡುವಳೆ ಅಮ್ಮ ಎಂದು ಪೊರಕೆ
ಬಚ್ಚಿಡುವ ಹುಡುಗಿಗೆ ಬಾಗಿಲ ಹಿಂದಿನ
ನಸುಕಿನ ಆಸರೆ

ಇಂದಿಗೆ ಸಾಕು ಇದು ನಾಳೆಯ ಸರದಿ
ಎಂದು ಅಪ್ಪ ತೆಗೆದಿಡುವ ಮದ್ಯದ ಸೀಶೆ
ರಾತ್ರಿ ಕಳೆಯುವುದು ಮಂಚದ ಕೆಳಗೆ

ಎದುರು ಮನೆಯ ಪೋರಿ ಕೊಡಿಸಿದ
ಕಡಲೆ ಮಿಠಾಯಿ ತಿಂದರೆ ಪಾಪಾ ಎಂದು
ತೆಗೆದಿಡುವ ಖಾಸಗಿ ಖಾತೆ ಶಾಲೆಯ ಬ್ಯಾಗು

ಎಂದಾದರು ಸರಿ ಒಂದು ಮರಿ ಹಾಕು
ಎಂದು ಬಂಧನದಲ್ಲಿಟ್ಟ ನವಿಲುಗರಿ
ನಸುನಗುತಿದೆೆ ಪುಸ್ತಕದ ಹಾಳೆಯ ನಡುವೆ

ಆಗೊಮ್ಮೆ ಅನಿಸಿದ್ದು
ಅರೇ ಈ ಕತ್ತಲು ಒಳ್ಳೆಯದೆ

ಕತ್ತಲಿಗೆ ಕೊನೆ ಕಾಣಲಿಲ್ಲ
ದಡದಿಂದ ದಡ ಕಾಣದ ಕಡಲಿನಂತೆ
ಮೈದಾನದೆಲೆಲ್ಲೊ ಅಳುತ್ತಿರುವ ನವಜಾತ ಶಿಶುವಿನಂತೆ
ನಡೆಯಲು ಊರುಗೋಲು ಹುಡುಕುವ ಮುದುಕನಂತೆ
ಅರಿವಾಯ್ತು ಇಂದು ಒಳಗಿನ ಕತ್ತಲಿಗೆ
ಮೊದಲುಂಟು ಕೊನೆಯಿಲ್ಲವಂತೆ

‍ಲೇಖಕರು Admin

13 May, 2016

2 Comments

  1. Sushrutha

    Aaha! 🙂

  2. Anonymous

    ಈ ಕವಿ ಸಹಜ. ಶೈಲಿ ಸರಳ. ಮೊದಲ ಇಪ್ಪತ್ತೆರಡು ಸಾಲುಗಳು ಆಪ್ಯಾಯಮಾನ. ಮನಸ್ಸಿಗೆ ತಂಗಾಳಿಯಂತೆ ಹಿತ, ಮುದ ನೀಡುವ ಕವಿತೆ. ಅಂತ್ಯವು ಚಂದವಾಗಿದೆ. ತನ್ನ ಅನುಭವಗಳನ್ನು ಯಾವುದೇ ಪಾಂಡಿತ್ಯ ಪ್ರದರ್ಶನಕ್ಕೆ ಅಥವಾ ಓದುಗರನ್ನು ಬೆಚ್ಚಿ ಬೀಳಿಸುವ ಕ್ರಿಯೆಗಳಿಂದ ಪಾರು ಮಾಡಿ ಚನ್ನಾಗಿ ದಾಟಿಸಿದ್ದಾರೆ ಎದೆಯ ಅಂಗಳಕ್ಕೆ. ಹಾಗಂತ ಇನ್ನು ಹೆಚ್ಚು ಹೆಚ್ಚು ಬರೆಯಬೇಡಿ ಹಿಂದೆ ಹಿಂದೆ, ಬರೆದರೆ ಆಗಾಗ,ಅನ್ನಿಸಿದಾಗ ಇಂಥವು ಹತ್ತಾರು ಸಾಕು.ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading