ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಂತರಾಜು ಕನಕಪುರ ಕವಿತೆ – ಭಾರ

ಕಾಂತರಾಜು ಕನಕಪುರ

ಭಾರ…
ನೀ ತೊರೆದು ಹೋದ ಮೇಲೆ
ನಿನ್ನೆಗಳು ಹೀಗೆ ಎಂದೂ
ನನ್ನ ಕಾಡಿರಲಿಲ್ಲ

ಹೀಗೇ…
ಒಮ್ಮೊಮ್ಮೆ
ಸುಮ್ಮನೆ ಕುಳಿತಿರುವಾಗ
ಒತ್ತಿ ಬರುತ್ತಿದ್ದ ದುಃಖಕ್ಕೆ
ಕಣ್ಣುಗಳು ಮಂಜಾಗುತ್ತಿದ್ದವಷ್ಟೇ…
ಕಂಬನಿ ಹರಿದು ಎಂದೂ
ಕೆನ್ನೆಗಳು ಕರೆಗಟ್ಟಿರಲಿಲ್ಲ

ಮನದ ಕೊಳದಲ್ಲಿ
ದುಃಖ ಮಡುಗಟ್ಟಿದ್ದರೂ
ಸಂಯಮದ ಕಟ್ಟೆಯೊಡೆದು
ಕೋಡಿಯಾಗಿ ಜಾಹೀರಾಗಿರಲಿಲ್ಲ

ಹುಣ್ಣಿಮೆಯ ಆಗಸಕ್ಕೆ
ಮೋಡ ಮುಸುಕಿದ್ದರೂ
ಚಂದಿರ ಬರುವನೆಂಬ ಭರವಸೆಯ
ಒರತೆ ಎಂದಿಗೂ ಬತ್ತಿರಲಿಲ್ಲ…

ಕವಿತೆ ಶಿಶುವಿನ ಪ್ರಸವ
ಯಾವತ್ತಿಗೂ ಪ್ರಾಯಾಸ ಎನಿಸದೆ
ಹೀಗೆ ಅವಧಿ ಪೂರ್ವ ಗರ್ಭಪಾತದ
ಊಹೆಯೇ ನನಗೆ ಇರಲಿಲ್ಲ…

ನೀ ಕೊಂದ ಸಂಬಂಧದ
ನೆನಪುಗಳೆಂಬ ಹೆಣಗಳನು
ಬದುಕಿಡೀ…
ನಾ ಹೊರಬೇಕೆನುವ
ಕಲ್ಪನೆಯೇ ನನಗಿರಲಿಲ್ಲ…

‍ಲೇಖಕರು Admin

28 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading