ಭವ್ಯ ಗೌಡ
ಫೋಟೋ: ರವಿ ಕುಲಕರ್ಣಿ
“ದಕ್ಕುವುದಿಷ್ಟೇ ದೇಹಕೆ,
ನೆಲಮಾಳಿಗೆಯ ಮಣ್ಣು,
ಕೊನೆಗೆ”
ಆತ್ಮವೊಂದು ಜಾಗೃತವಾಯಿತು,
ಚಿವುಟಿ ಹೇಳಿತು-
“ಸುಳಿದಾಡುವ ನನಗೆ ಕೊನೆಯೆಲ್ಲಿ?!
ನಿರಂತರ ಐಕ್ಯ
ಅನಂತದಲಿ;
ಕವಿತೆಯ ಸಾಲುಗಳಂತೆ,
ಅವುಗಳೊಳಗಿನ
ಅರ್ಥದಂತೆ”
ಇದು,ಸಾವಿನಾಚೆಯ ಬದುಕು
‘ಕವಿ’ತೆ ಬೆಳಗುವ ಬೆಳಕು

ಯಾವ ನಾಮದಿ ಕರೆದರೇನು..?
ಅಡ್ಡನಾಮಕೆ ಹರನಂತೆ
ಉದ್ದನಾಮಕೆ ಹರಿಯಂತೆ
ಇಟ್ಟ ನಾಮದ ದಿಕ್ಕು ಯಾವುದಾದರೇನು?!
‘ದೇ’ಹವಿಲ್ಲದವನು
‘ವ’ರ್ಣನೆಗೂ ಸಿಗದವನು
‘ರೂ’ಪವನೂ ತೋರದವನು
ಸರ್ವಶಕ್ತನು ಅವನು;
ಸರ್ವವ್ಯಾಪಿಯು ಅವನು.
ಸೃಷ್ಟಿಗೆಲ್ಲಾ ಒಬ್ಬನೇ ದೈವ ಅವನು
ಯಾವ ನಾಮದಿ ಕರೆದರೇನು
ಎಷ್ಟು ನಾಮದಿ ಮೆರೆಸಿದರೇನು
ತಿರುಗಿ ಬರುವವನು ಅವನೊಬ್ಬನೇ…
ಅವನೊಬ್ಬನೇ|





Very nice
good