ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕವಿತೆಯೆಂದರೆ ತಂತಿ ಕಂಪಿಸಿದ ಮೌನ' – ಜಯಶ್ರೀ

ಕವಿತೆ

ಜಯಶ್ರೀ ಬಿ ಕದ್ರಿ

ಕವಿತೆಯೆಂದರೆ ಹಾಗೆ
ಅಗಾಗ ಪಳ್ಳೆಂದು
ನಗುವ ಹೂವು
 
ಕವಿತೆಯೆಂದರೆ
ತಂತಿ ಕಂಪಿಸಿದ
ಮೌನ
ಕೋಲ್ಮಿಂಚು ಸುಳಿದಂತೆ
ಗುಡುಗು ಕಣ್ಣೀರು

ಕವಿತೆಯೆಂದರೆ ಮತ್ತೆ
ಮೌನಕೂ ಮಾತಿಗೂ
ಚೇತನವು
ಬೆಸೆವ
ಕೊಂಡಿ
 
ಕವಿತೆಯೆಂದರೆ ಹಾಗೆ
ನಿಶ್ಶಬ್ದಕೂ ಧ್ವನಿ ತುಂಬಿ
ಭೋರ್ಗರೆಯುವ
ಕಡಲು.
 
ಕವಿತೆಯೆಂದರೆ ಮತ್ತೆ
ಭವದ ಸಾಯುಜ್ಯಕ್ಕೆ
ಉರಿವ
ಹಣತೆ
 

‍ಲೇಖಕರು G

21 October, 2014

7 Comments

  1. mmshaik

    tumba chennaagide..

    • Anonymous

      Thank you Madam

  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ. ಬಿ.ಆರ್.ಎಲ್ ರವರ ‘ಪ್ರೀತಿಯೆಂದರೆ’ ನೆನಪಿಗೆ ಬಂತು.

  3. manjula madhav

    Kavite endare heege manadinda manake hariva sarite

  4. Anonymous

    Thank you Madam

  5. Anil Talikoti

    ‘ಭವದ ಸಾಯುಜ್ಯಕ್ಕೆ ಉರಿವ ಹಣತೆ’ — ತುಂಬಾ ಇಷ್ಟವಾದ ಸಾಲು

  6. AMU APPAJI

    ಕವಿತೆ ಉತ್ತಮವಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading