ಕಲಾಗ್ರಾಮದಲ್ಲಿ ‘ಸುಪಾರಿ ಕೊಲೆ’

‘ಶಿವಕುಮಾರ ಮಾವಲಿ’ಯವರ ಪತ್ತೇದಾರಿ ನಾಟಕ ‘ಸುಪಾರಿ ಕೊಲೆ’
ವಿನ್ಯಾಸ ಮತ್ತು ನಿರ್ದೇಶನ: ಚಂದ್ರ ಕೀರ್ತಿ
ರಂಗದ ಮೇಲೆ: ಅರುಣೇಶ್, ಲಕ್ಷ್ಮಿ, ಪ್ರವೀಣ್  
ಬೆಳಕು ವಿನ್ಯಾಸ: ರವಿ ಶಂಕರ್

ನಾಟಕದ ಬಗ್ಗೆ:

‘ಸುಪಾರಿ ಕೊಲೆ’ಯು ಒಂದು ಪತ್ತೇದಾರಿ ಮಾದರಿಯ, ಕುತೂಹಲ ಉಳಿಸಿಕೊಂಡು ಹೋಗುವ, ಕೊಲೆಯ ಕಾರಣ ಹುಡುಕುತ್ತಾ ಸಾಗುತ್ತಲೇ ಭಾವನಾತ್ಮಕತೆಗೆ ತೆರೆದುಕೊಳ್ಳುವ ನಾಟಕ. ಯಾರು ಯಾರನ್ನು ಕೊಲ್ಲಲು ಕಾರಣಗಳೇನಿದ್ದರೂ ಕೊಲ್ಲುವವರ ಮನಸ್ಥಿತಿ ,ಕೊಲ್ಲಲು ಕಾರಣವಾದ ಸ್ಥಿತಿ ಮತ್ತು ಪರಿಣಾಮಗಳ ಬಗ್ಗೆ ಪೋಲೀಸ್ ಮನಸ್ಥಿತಿ ಹೇಗೆ ವರ್ತಿಸುತ್ತದೆ ಎಂಬುದನ್ನು ಸೂಚ್ಯವಾಗಿ ಪ್ರದರ್ಶಿಸುವ ಈ ನಾಟಕ ಸುಪಾರಿ ಕಿಲ್ಲರ್ ಒಬ್ಬನಿಗೆ ಸಿಗುವ ವಿಚಿತ್ರ ಡೀಲ್ ನಿಂದ ರೋಚಕತೆಯನ್ನು ಕಾಪಾಡಿಕೊಳ್ಳುತ್ತದೆ. 

ಸುಪಾರಿ ಕಿಲ್ಲರ್ ಓರ್ವ ತಾನು ತೆಗೆದುಕೊಳ್ಳುವ ಕೊಲೆಯ ಡೀಲ್ ಗಳೊಂದಿಗೆ ಹೀಗೂ ವರ್ತಿಸಬಹುದಾ ಎಂಬ ಅನುಮಾನ,ವಿಲಕ್ಷಣತೆ ಎದುರಾಗುತ್ತಾ, ಆತ ಮುಖಾಮುಖಿಯಾಗುವ ಸನ್ನಿವೇಷ ಅವನಲ್ಲಿನ ಕೊಲೆಗಾರನನ್ನು ಪ್ರಶ್ನಿಸುತ್ತದೆ. ಹಣಕ್ಕಾಗಿ ಮಾಡುವ ಕೊಲೆಗಳ ಹಿಂದೆ ಎಂಥಾ ಕಾರಣಗಳಿರಬಹುದು ಎಂಬುದನ್ನು ಕೊಲೆಗಾರ ಗಣನೆಗೇ ತೆಗೆದುಕೊಳ್ಳಲಾರ ಎಂಬುದು ಅಲಿಖಿತ ನಿಯಮವಾದರೂ ಈ ಕತೆಯಲ್ಲಿ ಸುಪಾರಿ ತೆಗೆದುಕೊಂಡವನು ಒಂದು ಸಂಕೀರ್ಣ ಸನ್ನಿವೇಶಕ್ಕೆ ಎದುರಾದಾಗ ಮತ್ತಿನ್ನೇನೋ ಸತ್ಯಗಳು ಅನಾವರಣಗೊಳ್ಳುವುವು. 

ಟಿಕೇಟ್ ದರ : ರೂ.200

ಬನ್ನಿ, ಹಂತಕನನ್ನು ಪತ್ತೆಮಾಡಿ!

‍ಲೇಖಕರು Admin

October 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: