ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಂಪನ

ದಾದಾಪೀರ್ ಜೈಮನ್

ಹೂವು ಹೆಣ್ಣು, ಗಂಡು ಭಾಷೆ, ಮಾಯೆ ಹೆಣ್ಣು, ಮುಕ್ತಿ ಗಂಡು
ದುಡಿವ ಅಪ್ಪ ಹಡೆವ ಅಮ್ಮ ಕುಣಿವ ನವಿಲು ಹಾಡುವ ಕೋಗಿಲೆ
ಎಲ್ಲಾ ಗೋಲಿ ಗುಂಡುಗಳನು ಎರಡೂ ಕೈಗಳ ಬಟ್ಟಲೊಳಗೆ ಹಿಡಿದು
ಗುಳು ಗುಳು ಗುಳು ಗುಳು ಗುಳಾಯಿಸಿಬಿಟ್ಟೆ
ಒಳಗಿನವಕಾಶದಲಿ ಪ್ರತಿ ಗ್ರಹ ತಾರೆ ಉಪಗ್ರಹಗಳೆಲ್ಲ
ಢಿಕ್ಕಿಗೊಂಡವು…


ಕೆಲವೇ ಕೆಲವು ನಿಮಿಷಗಳ ಜಾದೂಗಾರನ ಕೈಚಳಕ
ಅಬ್ರಕಡಬ್ರ ಅಬ್ರಕಡಬ್ರ ಅಬ್ರಕಡಬ್ರ
ಎಲ್ಲವೂ ಈಗ ಅದಲು ಬದಲು ಬದಲು ಅದಲು
ಮತ್ತೆ ಹೊಂದಿಸಿ ಬರೆವ,
ಪರಿಕ್ರಮ ಅನುಕ್ರಮಗಳ ಬದಲಿಸುವ ಯಾವ ಗೋಜಲೂ ಇಲ್ಲ
ಕಲ್ಲಿನ ಕೋಳಿಯೂ ಕೂಗಲಿಲ್ಲ ಲೋಕಕೆ ಪ್ರಳಯವೂ ಆಗಲಿಲ್ಲ
ಆದದ್ದು ಚಳಕ್ಕೆನ್ನುವ ಒಂದೇ ಒಂದು ಸಣ್ಣ ಕಂಪನವಷ್ಟೇ!

‍ಲೇಖಕರು Avadhi

20 September, 2020

1 Comment

  1. ಡಿ.ಎಂ. ನದಾಫ್; ಅಫಜಲಪುರ

    ಕಲ್ಲಿನ ಕೋಳಿ ಯು ಕೂಗಲಿಲ್ಲ.
    ಲೋಕಕೆ ಪ್ರಳಯವು ಆಗಲಿಲ್ಲ
    *ದಾದಪೀರ್ ಜೈಮನ್
    ವಾಸ್ತವಿಕ ಆಲೋಚನೆಯ ಸಾಲುಗಳು;
    ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading