ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ ಒಂದು ವಿಲ್..

ವಿಜಯೇಂದ್ರ ಹಿರಿಯ ಪತ್ರಕರ್ತರು.

ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರೂ ಆಗಿದ್ದವರು 

*

ಯಾರೂ ಶೋಕಿಸ ಕೂಡದು

vijayendra-journalist ವಿಜಯೇಂದ್ರ

ನಾನು ಈಗಾಗಲೇ 61 ವಸಂತಗಳನ್ನು ಕಂಡಿದ್ದು, ಇನ್ನೂ ಹೆಚ್ಚು ದಿನ ಬದುಕುವ ನಂಬಿಕೆ ಮತ್ತು ಅಸೆ ಇಲ್ಲವಾಗಿದೆ.

ನಾನು ಸತ್ತಾಗ, ನನ್ನ ಸಾವು ಸ್ವಾಭಾವಿಕವಾಗಿ ಸಂಭವಿಸಿದ್ದಲ್ಲಿ ನನ್ನ ದೇಹದ ಯಾವುದೇ ಅಂಗಗಳು ಇತರರಿಗೆ ಪ್ರಯೋಜನವಾಗುವಂತಿದ್ದರೆ ಅವುಗಳನ್ನು ತೆಗೆದು ಅಗತ್ಯ ಇರುವವರಿಗೆ ಅಳವಡಿಸಲು ನನ್ನ ಸಂಬಂಧಿಗಳು ತಕ್ಷಣವೇ ವ್ಯವಸ್ಥೆ ಮಾಡಬೇಕು. ನನ್ನ ದೇಹವನ್ನು ಯಾವುದೇ ರೀತಿಯ ಸಂಸ್ಕಾರದ ವಿಧಿಗಳಿಗೆ ಒಡ್ಡದೆ, ಯಾವುದಾದರೂ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಅಧ್ಯಯನದ ಸಲುವಾಗಿ ಒಪ್ಪಿಸಬೇಕು.

thumb print on white background

ನಾನು ಸತ್ತಾಗ ನನ್ನ ಹೆಸರಿನಲ್ಲಿ ಚಿರಸ್ಮರಣೆ, ಅಗಲಿಕೆ ಇತ್ಯಾದಿ ಭಾವಚಿತ್ರ ಸಹಿತ ಜಾಹೀರಾತುಗಳನ್ನು ನೀಡಕೂಡದು. ನನಗಾಗಿ ಯಾರೂ ಶೋಕಿಸುವುದು ಕೂಡಾ ಸಲ್ಲದು.

ನನಗೆ ಸಾವಿನ ನಂತರದ ಧಾರ್ಮಿಕ ಕ್ರಿಯೆಗಳಲ್ಲಿ ಸಂಪೂರ್ಣ ನಂಬಿಕೆ ಇಲ್ಲವಾದ ಕಾರಣ, ನನ್ನ ಮಕ್ಕಳು, ನನ್ನ ದಿವಸ, ವೈಕುಂಠ, ತಿಥಿ ಹೀಗೆ ಯಾವುದೇ ಧಾರ್ಮಿಕ ಆಚರಣೆಯನ್ನು ನಡೆಸಕೂಡದು. ಅವರಿಗೆ ಅನುಕೂಲವಿದ್ದರೆ ನನ್ನ ಜನ್ಮ ದಿನದಂದು ಯಾವುದಾದರೂ ಅನಾಥಾಶ್ರಮದ ಹತ್ತಿಪ್ಪತ್ತು ಬಡ ಮಕ್ಕಳಿಗೆ ಊಟ ಹಾಕುವ ಪದ್ದತಿ ಅನುಸರಿಸಲಿ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಅತಿ ಕಷ್ಟದಲ್ಲಿ ವಿದ್ಯಾಭ್ಯಾಸ ಪೂರೈಸಬೇಕಾದ ನಾನು 16ನೇ ವಯಸ್ಸಿನಲ್ಲಿ ದುಡಿಯಲು ಆರಂಭಿಸಿದ ದಿನದಿಂದ ಇಲ್ಲಿಯ ತನಕ ನಿಯಮಿತವಾಗಿ ಪ್ರತಿ ತಿಂಗಳ ವರಮಾನದಲ್ಲಿ ಸಾದ್ಯವಾದಷ್ಠೂ ಮೊತ್ತವನ್ನು ಬಡ ವಿದ್ಯಾರ್ಥಿಗಳಿಗೆ, ರೋಗಿಗಳ ಚಿಕಿತ್ಸೆಗೆ ನೀಡುವ ಕ್ರಮವನ್ನು ಪಾಲಿಸುತ್ತಿದ್ದೇನೆ. ನನ್ನ ಸಾವಿನ ನಂತರ, ನನ್ನ ಮಕ್ಕಳೂ ಇದನ್ನೇ ಮುಂದುವರಿಸಿದರೆ ಮಾತ್ರ ನನ್ನ ಆತ್ಮಕ್ಕೆ ತೃಪ್ತಿಯಾದೀತು. ಅದೇ ಅವರು ನನಗೆ ಸಲ್ಲಿಸಬಹುದಾದ ಶೃದ್ದಾಂಜಲಿಯಾದೀತು.

ನನ್ನ ಹೆಸರಿನಲ್ಲಿ ಇರುವ ಏಕೈಕ ಸ್ಥಿರ ಆಸ್ಥಿ ಎಂದರೆ ಕೆಂಗೇರಿ ಸಮೀಪದ ಗೃಹ ಮಂಡಳಿ ನಿವೇಶನ. ಇದನ್ನು ಅಡವಾಗಿಟ್ಟು ವಿದ್ಯಾಭ್ಯಾಸದ ಸಲುವಾಗಿ ಪಡೆದಿರುವ ಸಾಲವನ್ನು ಅಭಿಜಿತ್ ಸ್ವತಃ ತೀರಿಸಬೇಕು. ಸಾಲ ಮುಕ್ತಗೊಂಡ ನಂತರ ಇಬ್ಬರು ಮಕ್ಕಳೂ ಆ ನಿವೇಶನದ ಮೇಲಿನ ಹಕ್ಕನ್ನು ಪಡೆಯುತ್ತಾರೆ.

‍ಲೇಖಕರು Admin

19 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading