ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಒಲಿದು ಮುನಿಯುವ ಅವು. ಬಿಡದೇ ಗೋಗರೆದು ಮೊರೆವ ನಾವು' – ದಿವ್ಯ ಆಂಜನಪ್ಪ

ವಸ್ತು

ದಿವ್ಯ ಆಂಜನಪ್ಪ

ಕೆಲವು ವಸ್ತುಗಳನ್ನು
ಇನ್ನಿಲ್ಲದಂತೆ ಪೂಜಿಸಿರುತ್ತೇವೆ
ಒಲಿದು ಮುನಿಯುವ ಅವು
ಬಿಡದೇ ಗೋಗರೆದು ಮೊರೆವ ನಾವು
 
ಕೊನೆಗೊಂದು ದಿನ
ಧಿಕ್ಕರಿಸಿ ಎದೆಗೊದ್ದು
ಹೊರಟುಬಿಟ್ಟಿರುತ್ತದೆ
ಕಣ್ಣೋ, ಕಣ್ಣೀರೊ ಯಾವುದು
ಹೊರಬಿತ್ತೋ ಕಾಣೆ

ಮರುಗಟ್ಟಿದ ಹೃದಯ
ನೀಲಿಯಾಯ್ತೊ
ಇಲ್ಲ ಬೇನಾಮಿಯೊ
ಕಲ್ಲಾದ ಹೃದಯವ
ಕರಗಿಸೊ ಹುಚ್ಚುತನಕೆ
ಎಷ್ಟು ತಪಸ್ಸು
ಅಲೆಮಾರಿಯಾಗಿ
ಹರಿದುಬಿಟ್ಟ ಕನಸೆಷ್ಟೊ
 
ಸೂರ್ಯನಿಳಿದರೂ
ಮತ್ತೊಂದು ಹಗಲು
ಅಷ್ಟೇ ಸತ್ಯ!
 
ಕಾದು
ಈ ಕಾದ ಕಬ್ಬಿಣದ ಮನವ
ಬಡಿದು ಬಡಿದು ತಿದ್ದಿದ್ದೆ
ಈಗದು ನನ್ನಂತೆ ನನ್ನ ಮಾತಿನಂತೆ
ಬಾಗುವುದು
 
ಆಕಸ್ಮಿಕವೊ
ಇಲ್ಲ ಕಾಡಿಕೊಂಡು ತಿರುಗಿ ಬಂದಂತೆ
ಆ ಹೊರಟು ಹೋದ ವಸ್ತು..
ಈಗಿಲ್ಲ ಪೂಜಿಸೋಷ್ಟು ಪುರಸತ್ತು
 
ನನ್ನಂಗಳವೆಲ್ಲಾ ಚಿತ್ತಾರಗಳೆ
ನೆನಪುಗಳ ಕಿತ್ತು
ಒಲಿಯದಿರು ವಸ್ತುವೇ,
ನಾ ಒಲಿಯಲೊಲ್ಲೆ..
 
ಖಾಲಿತನ ನನಗೀಗ ಸಹ್ಯವೂ
ಹೌದು..
ಅದಕೂ ಮುನ್ನ..
‘ನಾನೀಗ ಖಾಲಿಯಲ್ಲ’!

‍ಲೇಖಕರು G

29 January, 2015

9 Comments

  1. smitha Amrithraj

    Chennagide..

  2. satish javaregowda

    Maarmikavada kavite.

  3. mmshaik

    nice…

  4. J.S.Ganjekar

    ಸೊಗಸಾಗಿ ಮೂಡಿಬಂದಿದೆ ನಿಮ್ಮ ಕವನ. ಇನ್ನಷ್ಟು ಅತ್ಯುತ್ತಮ ಕವನಗಳು ನಿಮ್ಮಿಂದ ಬರೆಯುವಂತಾಗಲೆಂದು ಹಾರೈಸುತ್ತೇನೆ.

  5. Swarna

    Chennaagide

  6. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ ಪದ್ಯ.

  7. ಲಲಿತಾ ಸಿದ್ಧಬಸವಯ್ಯ

    ದಿವ್ಯ ಬಹಳ ಚೆನ್ನಾಗಿದೆ, ಇಂಥ ಪದ್ಯ ಓದಿದಾಗೆಲ್ಲ ನಮ್ಮ ಕನ್ನಡದ ಜಾಣ ಜಾಣೆಯರ ಬಗ್ಗೆ ಹೆಮ್ಮೆ ಅನ್ನಿಸುತ್ತೆ.

  8. ದಿವ್ಯ ಆಂಜನಪ್ಪ

    ತಮ್ಮೆಲ್ಲರಿಗೂ ಅನಂತ ಧನ್ಯವಾದಗಳು 🙂

  9. ಶೇಷಗಿರಿ ಜೋಡಿದಾರ್

    ‘ನಾನೀಗ ಖಾಲಿಯಲ್ಲ’! the most important line for the identity..yes…we can be full ourselves even in vacuum….liked it.. Divya avare…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading