ಸಮ್ಮೇಳನಕ್ಕೆ ನಲವತ್ತೆಂಟು ಗಂಟೆಗಳು ಮಾತ್ರ ಬಾಕಿ

ಅರಕಲಗೂಡು ಜಯಕುಮಾರ್

ಸಾಹಿತ್ಯ ಸಮ್ಮೇಳನದ ಸಿದ್ದತೆಗಳು ಬಹುತೇಕ ಪೂರ್ಣಗೊಳ್ಳುವ ಹಂತ ತಲುಪಿದ್ದು ಸಾಹಿತ್ಯಾಸಕ್ತರ ಆಗಮನಕ್ಕೆ ಸಜ್ಜಾಗುತ್ತಿವೆ.
ಸಾಹಿತ್ಯ ಸಮ್ಮೇಳನಕ್ಕೆ ಇನ್ನು 48ಗಂಟೆಗಳು ಮಾತ್ರ ಬಾಕಿ!
ಸಮ್ಮೇಳನದ ಸಲುವಾಗಿ ರಚಿಸಲಾಗಿದ್ದ 29 ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಬಹುತೇಕ ಪೂರ್ಣಗೊಳಿಸಿವೆ. ಈ ಪೈಕಿ ಹಾಸನ ಜಿಲ್ಲಾ ದರ್ಶನ ಒದಗಿಸುವ ಕೈಪಿಡಿ ಪೂರ್ಣಗೊಂಡಿದೆ, ಸಮ್ಮೇಳನದ ಸಂಗ್ರಹ ಯೋಗ್ಯ ಸ್ಮರಣ ಸಂಚಿಕೆ ಮುದ್ರಣವಾಗುತ್ತಿದ್ದು ಸಮ್ಮೇಳನದ ಹಿಂದಿನ ದಿನ ಸಿಗಲಿದೆ, ವಸತಿ ಕಲ್ಪಿಸುವುದು ಸಮಿತಿಗೆ ತಲೆನೋವಾಗಿ ಪರಿಣಮಿಸಿದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ನೋಂದಣಿ ಮಾಹಿತಿ ಪರಿಪೂರ್ಣವಾಗಿ ಬಾರದಿರುವುದೇ ಸಮಸ್ಯೆಗೆ ಕಾರಣವಾಗಿದೆ, ಆದಾಗ್ಯೂ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅತಿಗಣ್ಯರಿಗೆ ಶ್ರವಣಬೆಳಗೊಳ ಹಾಗೂ ಹಾಸನದಲ್ಲಿ ವ್ಯವಸ್ಥೆಯಾಗಿದೆ ಎಂದು ವಸತಿ ಸಮಿತಿ ತಿಳಿಸಿದೆ. ಕೇಂದ್ರ ಪರಿಷತ್ತಿನ 40, ಅತಿ ಗಣ್ಯರಿಗೆ 125, ಸನ್ಮಾನಿತರಿಗೆ 90, ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವವರಿಗೆ 80, ಜಿಲ್ಲಾ ಸಮಿತಿಗಳ ವಿಶೇಷ ಆಹ್ವಾನಿತರಿಗೆ 67, ರಾಜ್ಯದ ವಿವಿಧ ತಾಲೂಕುಗಳಿಂದ ಆಗಮಿಸುವ ಅತಿಥಿಗಳಿಗೆ 504, ನೋಂದಾಯಿತ ಪ್ರತಿನಿಧಿಗಳು 8000, ಪೋಲೀಸ್ ಮತ್ತು ಸ್ವಯಂ ಸೇವಕರು ಒಟ್ಟು 2000 ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಮೆರವಣಿಗೆ ಸಮಿತಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಭಿನ್ನವಾದ ಮತ್ತು ಅಪರೂಪದ ಆಕರ್ಷಕ ಕಲಾತಂಡಗಳಿಗೆ ಅವಕಾಶ ನೀಡಿದೆ. ಭುವನೇಶ್ವರಿ, ಹೊಯ್ಸಳ ಶಿಲ್ಪಕಳೆ, ಬಾಹುಬಲಿ, ಕೆಂಪೇಗೌಡ, ಗೋವಿಂದದಾಸ್ ಸೇರಿದಂತೆ 13ಸ್ತಬ್ಧ ಚಿತ್ರಗಳನ್ನು ಮೆರವಣಿಗೆಗೆ ಅಂತಿಮ ಗೊಳಿಸಿದೆ. ಚ.ರಾ. ಪಟ್ಟಣ ತಾಲೂಕಿನ ರೈತರ ವಿಶೇಷ ಅಲಂಕೃತ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ. ಸಮ್ಮೇಳನಾಧ್ಯಕ್ಷರ ಎತ್ತಿನಗಾಡಿ ಅತ್ಯುತ್ತಮ ವಿನ್ಯಾಸ ಹೊಂದಿದ್ದು ಆಕರ್ಷಕವಾಗಿ ಸಿದ್ದವಾಗುತ್ತಿದೆ. ಮೆರವಣಿಗೆಯ ಮುಂಭಾಗದಲ್ಲಿ 181ಕಳಶ ಹೊತ್ತ ಸ್ತ್ರೀಯರು ಸಾಗಲಿದ್ದಾರೆ ಎಂದು ಸಮಿತಿಯ ಪ್ರದಾನ ಸಂಚಾಲಕ ಕೆ ಆರ್ ಮಮತೇಶ್ ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಕ್ಕೂ ಮಿಕ್ಕಿದ ಕಲಾವಿದರು ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ ನೀಡಲು ಅಜರ್ಿಗಳನ್ನು ಸಲ್ಲಿಸಿದ್ದರು, ಇದರ ಜೊತೆ ಜೊತೆಯಲ್ಲೇ ಮುಖ್ಯಮಂತ್ರಿಗಳು, ಸಚಿವರು ಮತ್ತು ಇತರೆ ಪ್ರಭಾವಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಶಿಫಾರಸ್ಸುಗಳು ಬಂದಿದ್ದವು. ಕೊನೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಂತಿಮ ಗೊಳಿಸಿರುವ ಸಮಿತಿಯು ಪ್ರಧಾನ ವೇದಿಕೆಯಲ್ಲಿ 48 ಮತ್ತು ಸಮನಾಂತರ ವೇದಿಕೆಯಲ್ಲಿ 56 ಸೇರಿದಂತೆ 104 ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ ಎಂದು ಸಮಿತಿ ಸಂಚಾಲಕ ಗೊರೂರು ಶಿವೇಶ್ ತಿಳಿಸಿದ್ದಾರೆ. ಪ್ರಧಾನ ವೇದಿಕೆಯಲ್ಲಿ ಪ್ರವೀಣ್ ಗೋಡ್ಕಿಂಡಿ ಕೊಳಲು ವಾದನ, ಸಂಗೀತ ವಿದ್ವಾನ್ ಗಾನಕಲಾ ಭೂಷಣ ಆರ್ ಕೆ ಪದ್ಮನಾಭ ರ ಕನರ್ಾಟಕ ಶಾಸ್ತ್ರೀಯ ಸಂಗೀತ, ಪಿಚ್ಚಳ್ಳಿ ಶ್ರೀನಿವಾಸ್ ಗಾಯನ, ಹಂಸಲೇಖ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಎನಿಸಿವೆ.
ಸಮ್ಮೇಳನದ ಅಂಗವಾಗಿ ಚಿತ್ರಕಲಾ ಪ್ರದರ್ಶನ ಹಾಗೂ ರಚನೆಗೆ ಅವಕಾಶ ಕಲ್ಪಿಸಲಿದ್ದು ರಾಜ್ಯದ ಮತ್ತು ಹಾಸನ ಜಿಲ್ಲೆಯ 50 ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸ್ವಯಂಸೇವಕ ಸಮಿತಿಯ ಪ್ರದಾನ ಸಂಚಾಲಕ ಜಿ ಡಿ ನಾರಾಯಣ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ 650ಕ್ಕೂ ಹೆಚ್ಚು ಮಂದಿ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದಾರೆ. ಈ ಪೈಕಿ 400 ಪುರುಷರು, 250 ಮಂದಿ ಮಹಿಳೆಯರ ತಂಡ ರಚನೆಯಾಗಿದೆ. ಸಮ್ಮೆಳನಕ್ಕೆ ಆಗಮಿಸುವ ಮಹಿಳಾ ಪ್ರತಿನಿಧಿಗಳು ಮತ್ತು ಗಣ್ಯರ ವಸತಿ ನಿಲಯಗಳ ಮೇಲುಸ್ತುವಾರಿ ಮಹಿಳಾ ಅಧಿಕಾರಿಗಳು ಮತ್ತು ಪದಾಧಿಕಾರಿಗಳಿಗೆ ನೀಡಲಾಗಿದ್ದು ಮಹಿಳಾ ಸ್ವಯಂಸೇವಕರು ಸೇವೆ ಒದಗಿಸಲಿದ್ದಾರೆ.
ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ಆರೋಗ್ಯ ಕುರಿತು ನಿಗಾವಹಿಸಲು 6ತಜ್ಞ ವೈದ್ಯರು, 4ವೈದ್ಯರು, 4ಶ್ರೂಷಕರು, 25 ಡಿ ಗ್ರೂಪ್ ನೌಕರರನ್ನು ಸಮ್ಮೇಳನದ ಸ್ಥಳದಲ್ಲಿ ತೆರೆಯುವ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಇಲ್ಲಿ ಅಗತ್ಯ ಔಷದ ದಾಸ್ತಾನು ಮಾಡಲಾಗಿದ್ದು ತುತರ್ು ಸಂದರ್ಭಗಳ ನಿರ್ವಹಣೆಗಾಗಿ ಅಂಬ್ಯುಲೆನ್ಸ್ ವಾಹನಗಳನ್ನು ಸೇವೆಗೆ ಪಡೆಯಲಾಗುತ್ತಿದೆ.

ಕೊನೆಯದಾಗಿ :
ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ವಹಣೆಗೆ 4.68ಕೋಟಿ ರೂಪಾಯಿಗಳ ಪ್ರಸ್ತಾವವನ್ನು ಜಿಲ್ಲಾಧಿಕಾರಿಗಳ ಮುಂದೆ ಇರಿಸಿರುವ ಪರಿಷತ್ತಿಗೆ ಸಧ್ಯ ಸಕರ್ಾರದಿಂದ 2ಕೋಟಿ ಹಣ ಮಾತ್ರ ಬಿಡುಗಡೆಯಾಗಿದ್ದು, ವೇದಿಕೆ, ವಸತಿ,ಸಂಭಾವನೆ, ಸನ್ಮಾನ, ಸಂಚಿಕೆ, ಪ್ರಚಾರ, ಸಾರಿಗೆ ಇತ್ಯಾದಿ ವೆಚ್ಚಗಳಿಗೆ ಹಣ ಸಾಕಾಗದೆ ಪರದಾಡುತ್ತಿದೆ. ಕನರ್ಾಟಕ ಸಕರ್ಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಾಗೂರು ಮಂಜೇಗೌಡ ಹಾಸನ ಜಿಲ್ಲೆಯವರೇ ಆಗಿದ್ದರೂ ಸಹಾ ನೌಕರರ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ದೇಣಿಗೆ ನೀಡುವಲ್ಲಿ ಎಡಬಿಡಂಗಿತನ ಪ್ರದಶರ್ಿಸುತ್ತಿದ್ದು ಶೇ.50 ಮಾತ್ರ ಸಮ್ಮೇಳನಕ್ಕೆ ನೀಡುವ ಕುರಿತು ಮಾತನಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರ ತವರು ಕ್ಷೇತ್ರದಲ್ಲೇ ಸಮ್ಮೇಳನ ಆಯೋಜನೆಯಾಗಿದ್ದರೂ ಸಹಾ ಅವರ ತದ್ವಿರುದ್ದ ನಿಲುವುಗಳ ವಿರುದ್ದ ಸಾರ್ವತ್ರಿಕವಾಗಿ ಸಕರ್ಾರಿ ನೌಕರರೇ ಅಸಹನೆ ವ್ಯಕ್ತ ಪಡಿಸುತ್ತಿದ್ದಾರೆ. ಬಹುತೇಕರು ಸಮ್ಮೆಳನದ ಹೆಸರಿನಲ್ಲಿ ವೇತನ ಕಡಿತ ಮಾಡಿದ ಮೇಲೆ ಅದೇ ಉದ್ದೇಶಕ್ಕೆ ಬಳಕೆಯಾಗಲಿ, ಹಾಗೆ ಬಳಕೆಯಾಗದಿದ್ದಲ್ಲಿ ವೇತನವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡುವುದಾಗಿ ಹೇಳುತ್ತಿದ್ದಾರೆ. ಕಳೆದ ವಾರ ಜಿಲ್ಲಾದಿಕಾರಿ ಕಛೇರಿಯಲ್ಲಿ ಸಭೆ ನಡೆದ ಸಂಧರ್ಭದಲ್ಲಿ ಹಾಜರಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕೆಲವು ಪದಾಧಿಕಾರಿಗಳು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಪಡಿಸಿದರಾದರೂ ಜಿಲ್ಲಾದಿಕಾರಿ ಉಮೇಶ್ ಕುಸಗಲ್ ನಿಮ್ಮ ಅಭಿಪ್ರಾಯವನ್ನು ನಿಮ್ಮ ಸಂಘದ ಸಭೆಯಲ್ಲಿ ಮಾತನಾಡಿ ಎಂದರು. ನೌಕರರ ಭವನ ನಿರ್ಮಾಣಕ್ಕೆ ಹಾಸನ ಜಿಲ್ಲೆಯ ನೌಕರರು ಮಾತ್ರವೇ ಏಕೆ ವೇತನ ಕಡಿತ ಮಾಡಿಕೊಳ್ಳ ಬೇಕು, ಸಮ್ಮೇಳನದ ಹೆಸರಿನಲ್ಲಿ ಕಡಿತ ಮಾಡಿ ಈ ರೀತಿ ಮಾಡುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ.
 

‍ಲೇಖಕರು G

January 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: