ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಬ್ಬಳೇ ಆದರೂ ನಡೆದೇ ತೀರುತೇನೆ..

pavana bhoomi

ಪಾವನಾ ಭೂಮಿ 

ಉಜ್ವಲಿಸುವ
ದಿಕ್ಸೂಚಿ ನಕ್ಷತ್ರವೇ
ಆ ಒಂದು
ಆ ಒಂದೇ ಒಂದು ಹಾದಿ
ತೋರಿಸು
ನಾನೋಬ್ಬಳೇ ಆದರೂ ಸರಿ
ನಡೆದೇ ತೀರುತ್ತೇನೆ …

handsವಿಕಾಸದ ಹಾದಿಯ ತುತ್ತತುದಿ
ತಿಳಿದಿದೆ…
ಆ ಹಾದಿ ಕರಗಿ ಕಾಲವೇ
ಉರುಳುರಿಳಿ ವಿಕಸಿಸುವುದನ್ನೇ
ಮುಚ್ಚಿ ಕಾಲದ ಕಾಲವಾಗಿದೆ ಎಂದು

ವರ್ಣದ ಕುರುಹ
ಧರ್ಮದ ಹಂಗಿನ
ಪಂಥ, ಪಂಗಡಗಳ
ಪುಟಗಳ
ವಾದ, ಸಿದ್ಧಾಂತ
ತತ್ವಗಳ ಹಾದಿಯಿನ್ನು
ನನಗೆ ಬೇಡ

ಒಂದು ಧರ್ಮದ ಕೊಂಕಿಗೆ
ಇನ್ನೊಂದು ಹುಟ್ಟಿತು
ಒಂದರ ಸುಧಾರಣೆಗೆ
ಮತ್ತೊಂದು ಮಡಿಯಿತು
ವಾದಕ್ಕೊಂದು ವಾದ
ಹೋ …
ಇಲ್ಲಿ ಕಳೆದ ಲೆಕ್ಕ
ಯಾರಿಗೂ ಬೇಕಿಲ್ಲ
ನೆತ್ತರ ನೆತ್ತಿ ಯಾರಿಗೂ
ಕಾಣಲೇ ಇಲ್ಲ,
ಮುಗ್ಧತೆಯ ಮೌನ
ಎಂದಿಗೂ ಮಾತಾಗಲಿಲ್ಲ

ಆ ಕಾಲಕ್ಕೆ ನಡೆದು
ಬಂದ ಹಾದಿ ತಿರುವುಗಳನ್ನು
ನೀನು ನಾನು ಕುರುಹಾಗಿಸಿಟ್ಟುಳ್ಳಬೇಕಿತ್ತು
ಆದರೆ
ಗತಿಸಿದ ಕಾಲನ ಬೆಕ್ಕಿಗೆ
ಈಗಲೂ ಗಂಟೆ ಕಟ್ಟುವ
ಕೆಲಸ ನಡೆದಿದೆ

ಈಗ ನೆತ್ತರ ಹಸಿ ವಾಸನೆಯ
ತಡೆದುಕೊಳ್ಳಲು ಮೂಗು
ಮುಚ್ಚುವ ಧೂಪ,ದೀಪ
ಸಂಭ್ರಾಣಿ ಹರಡಿಸುವ
ಕಾಣದ ಕೈಗಳು ಬೇರೆ

ಎಲ್ಲಾ ಕಡೆ ಈ
ವಾದ, ವೇದ, ಸಿದ್ಧಾಂತಗಳ
ಹಾದಿ ಮುಚ್ಚಿಹೋಗಲಿ
ಪಂಥಗಳು ಪಂಡಿತರಿಗೆ
ಇರಲಿ
ಎಲ್ಲದರ ಹಿಂದೆಯೂ
ಇತಿಹಾಸವಿದೆ, ನಾಗರಿಕತೆಯ
ಹೆಸರಿನ ಮಸಣಗಳಿವೆ
ಶ್ರೇಷ್ಠತೆಯ ಹಿಂದೆ ನಿಕೃಷ್ಟಗೊಂಡ
ಅದೆಷ್ಟೋ ಬದುಕುಗಳಿವೆ

ಬಾ ಹಾದಿ ತೋರಿಸು
ಎಲ್ಲ ಹಾದಿ ಮುಚ್ಚಿಸುವ
ವಿಕಾಸದ ತುದಿಯ ಹಾದಿ
ಜೀವ ಜೀವಿಗಳ ಮಿಲನದ ಹಾದಿ
ಪಯಣದಲ್ಲಿ
ಒಬ್ಬಳೇ ಆದರೂ
ನಡೆದೇ ತೀರುತೇನೆ…

 

‍ಲೇಖಕರು admin

18 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading