ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ತಮಿಳು ಮೂಲ: ಗಂಧರ್ವನ್

ಕನ್ನಡಕ್ಕೆ: ಮೀನಾಕ್ಷಿ ಸುಂದರಂ

**

ಪೂರ್ವಜರು ಚೆಲ್ಲಿದ

ಎಲ್ಲಾ ರಕ್ತವನ್ನು

ಮೊದಲು ಅಳತೆ ಮಾಡಿದವನು ಅವನು!

ಉತ್ಪಾದನೆಯಾದ ಸರಕುಗಳ

ಅಂಚಿನಲ್ಲಿದ್ದ

ರಕ್ತವನ್ನು ನೋಡಿದ

ಮೊದಲ ಮನುಷ್ಯ ಅವನು!

ತನ್ನ ಪುಸ್ತಕಗಳಲ್ಲಿ ವಿದ್ಯುತ್

ತುಂಬಿಸಿ ಕೊಟ್ಟವನೀತ.

ಅದನ್ನು ಓದಿದವರ

ತಲೆಯಲ್ಲಿ ಜ್ಞಾನದ

ಜ್ಯೋತಿ ಬೆಳಗುತ್ತಿದೆ ಸದಾ.

ಎಲ್ಲಾ ಹಿಮದ ಹನಿಗಳನ್ನು

ಸಂಗ್ರಹಿಸಿ

ಹಾಲ್ನದಿಯಾಗಿ ಓಡಿಸಲು

ಅವನಿಗೆ ತಾಳ್ಮೆ ಇತ್ತು.

ಅವನಿಗೇನಾದರು ಹತಾಶೆಯಾಗಿದ್ದರೆ,

ಹತಾಶೆಯವನ್ನು ಹೋಗಲಾಡಿಸುವ

ಮದ್ದು ಜಗತ್ತಿಗೆ ಲಭಿಸುತ್ತಿರಲಿಲ್ಲ.

ಶೋಷಣೆಯ ಸಾಮಾಜಿಕ ವ್ಯವಸ್ಥೆಗೆ

ಒಂದು ಶವಪೆಟ್ಟಿಗೆ

ಸ್ವಂತ ಕೈಯಿಂದ

ಪೂರ್ಣಗೊಳಿಸಿದ ನಂತರ,

ಅವನ ಶವಪೆಟ್ಟಿಗೆಯಲ್ಲಿ ಮಾನವಕುಲ

ನಂದಾದೀಪವನ್ನು ಬೆಳಗಿಸಿದೆ.

ಅವನಿಗೆ

ಎರಡು ಹೆಸರುಗಳು

ಒಂದು ‘ಮಾರ್ಕ್ಸ್’

ಇನ್ನೊಂದು ‘ಸತ್ಯ’!

‍ಲೇಖಕರು Admin MM

7 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading