ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಜಿರಲೆಯನ್ನು ಸಾಯಿಸುವುದು…

-ಪ್ರತಿಭಾ ನಂದಕುಮಾರ್

Killing a cockroach can make you a hero, while killing a butterfly can make you a villain – attributed to Nietzsche

ಜಿರಳೆಯನ್ನು ಕೊಂದರೆ ನೀನು ಹೀರೊ
ಆದರೆ ಚಿಟ್ಟೆಯನ್ನು ಕೊಂದರೆ ಖಳನಾಯಕ
ಎಂದ ನೀತ್ಸೆ, ನಿನ್ನ ನೋಡಿದ್ದರೆ ಹೆದರುತ್ತಿದ್ದ.

ಜಿರಳೆ ಮತ್ತು ಚಿಟ್ಟೆ
ನವಿಲು ಮತ್ತು ನೀಲಿಮಕಾವ್
ವಂಟಾರಾದ ಒರಾಂಗುಟಾನ್
ಗಾಜಿನ ಹಿಂದಿನ ಸಿಂಹ
ಆನೆ ಜಿರಾಫೆ ಜೀಬ್ರಾಗಳು
ಕೆಂಗಣ್ಣಿಗೆ ಗುರಿಯಾದ ಘೋಟೋಗ್ರಾಫರುಗಳು

ಸುಂದರ, ವಿಕಾರ,
ಆಕರ್ಷಕ, ಅಸಹ್ಯ
ಸ್ವಚ್ಛ, ಕೊಳಕು
ಶುದ್ಧ, ಅಶುದ್ಧ
ಉದಾತ್ತ, ನೀಚ
ಬಯಕೆ, ನಿರಾಸಕ್ತಿಗಳ
ದ್ವಂದ್ವಗಳನ್ನು ಒಂದುಮಾಡಿ ಕಲಸಿ ಮೈಮೇಲೆಲ್ಲಾ ಧರಿಸಿ
ಒಲ್ಲದಿರುವವರನ್ನೂ ಅಪ್ಪಿಕೊಂಡು ಒರೆಸಿ
ಬಿಳಿತೊಗಲಿನ ಹೆಣ್ಣುಗಳ ಕಂಡು ಜೊಲ್ಲು ಸುರಿಸಿ
ದೇವಮಾನವ ರಥವೇರಿ ಬರುವಾಗ ಊರಿಗೆಲ್ಲ ದೀಪಾವಳಿ
ಎಂದು ಡಂಗುರ ಸಾರಿಸಿ

ದಾಸನ ಮಾಡಿಕೊ ಎನ್ನ ಎಂದು ಭಕ್ತರು ಸಾಷ್ಟಾಂಗ ಬಿದ್ದು
ಜಿರಲೆಹತವೀರ್ಯನ ಗುಣಗಾನ ಮಾಡಿ

ಅಂಗನೆಯರ ಆಕ್ರಂದನ ಹಸುಳೆ ಕಂದನ ಅರೆಸ್ಟ್
ಜಲಪ್ರಳಯಕ್ಕೆ ಸಿಕ್ಕಿ ಸತ್ತವರ ಮೌನ ಪ್ರೊಟೆಸ್ಟ್

ಮಣಿಪುರಿಯ ಜ್ವಾಲೆ, ಮನದ ಮಾತು ಬೆಂಕಿಯಿಲ್ಲದ ಪಾಕಶಾಲೆ
ಮಂದಿರದ ಕಳ್ಳರ ಜಾಲ, ಬುಡಕ್ಕೇ ಬಂದರೂ ಕಾಣದ ಮೇಲೆ

ನೈತಿಕತೆ ಸತ್ತು, ಮರ್ಯಾದಾ ಪುರುಷೋತ್ತಮ ಬಯಲಲ್ಲಿ ಬೆತ್ತಲಾಗಿ
ರಾವಣನ ಕೊಂದ ಕ್ರೆಡಿಟ್ಟೂ ಕೈಗೆಟುಕದೇ, ಕೃಷ್ಣಾವತಾರ ಮಳ್ಳತನಕ್ಕೆ ಮೀಸಲಾಗಿ

ಯುಗಾಂತ್ಯದ ಆಟದಲ್ಲಿ ಜಿರಲೆಗಳನ್ನು ಬಡಿದು ಸಾಯಿಸುವುದು ಸುಲಭ
ಹೀರೋಗಿರಿಗೆ ಮರುಳಾದ ಹಿಂಬಾಲಕರ ಕೈಗೆ ಚಿಟ್ಟೆಗಳು ಸಿಗುವುದು ದುರ್ಲಭ

ಇಷ್ಟು ದಿನ ಬಾಡಿಗೆ ಬಂಟರ ಹೂ ಮಳೆಯಲ್ಲಿ ಅಭಿಷಿಕ್ತ (ಖಳ)ನಾಯಕನಿಗೆ
ಈಗ ಪೂರಾ ಗೊಂದಲ ತಾನು ಹೊಸಕಿದ್ದು ಜಿರಲೆಯೋ ಚಿಟ್ಟೆಯೋ?

‍ಲೇಖಕರು Admin

22 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading