ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆ- ಸ್ಕ್ರಿಪ್ಟ್…

ಮೂಲ: ಲಿಥುವೇನಿಯಾದ ಕವಿ ಯುಗೇನ್ಯಸ್ ಅಲಿಶಾಂಕ

ಕನ್ನಡಕ್ಕೆ : ಎಸ್. ಜಯಶ್ರೀನಿವಾಸ ರಾವ್

ಕಾಲ: ಶತಮಾನದ ಆದಿಯಲ್ಲಿ
ಸ್ಥಳ: ಸಾಧ್ಯತೆಗಳಿರುವ ಶಹರಿನಲ್ಲಿ
ದೃಶ್ಯ ಒಂದು: ಒಂದು ಕೆಫೆ, ಮುಂಜಾನೆಯಲ್ಲಿ
ಪಾತ್ರಗಳು: ತೂರಾಡುತ್ತಿರುವ ಕೆಫೆ ಮಾಲೀಕ ಮತ್ತು
ಮೊದಲ ಗ್ರಾಹಕ
ಮೊದಲನೆಯ ಅಂಕ: ಯುವಕನೊಬ್ಬ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’
ಪುಸ್ತಕವನ್ನು ಮೂಲ ಭಾಷೆಯಲ್ಲಿ ಓದುತ್ತಾ
ಕಾಫಿ ಹೀರುತ್ತಿದ್ದಾನೆ. ಪುಸ್ತಕವನ್ನು
ಮೇಜಿನಲ್ಲೇ ಬಿಟ್ಟು ಎದ್ದು ಹೋಗುತ್ತಾನೆ.
ದೃಶ್ಯ ಎರಡು: ಅದೇ ಕೆಫೆ, ಮಧ್ಯಾಹ್ನದ ಹೊತ್ತು
ಪಾತ್ರಗಳು: ಉಲ್ಲಾಸಭರಿತ ಕೆಫೆ ಮಾಲೀಕ ಮತ್ತು
ಊಟಮಾಡುತ್ತಿರುವ ಕಾರ್ಮಿಕರು.

ಎರಡನೆಯ ಅಂಕ: ಊಟಕ್ಕೆ ಬಂದವರು ದಿನಪತ್ರಿಕೆಗಳ ಪುಟ
ತಿರುಗಿಸುತ್ತಿದ್ದಾರೆ; ಯೂರೋ ಕರೆನ್ಸಿಯ ವಿನಿಮಯ ದರದ
ಬಗ್ಗೆ ಉತ್ಸಾಹದಿಂದ ಚರ್ಚಿಸುತ್ತಿದ್ದಾರೆ.
ದೃಶ್ಯ ಮೂರು: ಅದೇ ಕೆಫೆ, ರಾತ್ರಿಯಲ್ಲಿ
ಪಾತ್ರಗಳು: ಸುಸ್ತಾಗಿರುವ ಕೆಫೆ ಮಾಲೀಕ ಮತ್ತು
ಕೆಲಸದ ನಂತರ ಅಲ್ಲಿ ಸೇರಿರುವ ಸ್ಥಳೀಯರು.
ಮೂರನೆಯ ಅಂಕ: ಬಿಯರ್ ಕುಡಿಯುತ್ತಿರುವ ಸ್ಥಳೀಯರು.
ಟೀವಿ-ಯಲ್ಲಿ ಯುರೊಪಿಯನ್ ಫುಟ್ಬಾಲ್ ಚ್ಯಾಂಪಿಯನ್‌ಶಿಪ್
ಪ್ರಸಾರ ಬಲು ಜೋರಾಗಿ ಕೇಳಿಬರುತ್ತಿದೆ.
ದೃಶ್ಯ ನಾಲ್ಕು: ಅದೇ ಕೆಫೆ, ಮುಚ್ಚುವ ಮುನ್ನ
ಪಾತ್ರಗಳು: ಕೆಫೆಯ ಮಾಲೀಕ
ನಾಲ್ಕನೆಯ ಅಂಕ: ಕೆಫೆ ಮಾಲೀಕ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’
ಪುಸ್ತಕವನ್ನು ಓದುತ್ತಿದ್ದಾನೆ.
ಪರದೆ.

‍ಲೇಖಕರು Admin

13 October, 2022

2 Comments

  1. prathibha nandakumar

    ಕವನ ಮತ್ತು ಅನುವಾದ ಚೆನ್ನಾಗಿದೆ

  2. ಜಯಶ್ರೀನಿವಾಸ ರಾವ್

    ಧನ್ಯವಾದಗಳು, ಪ್ರತಿಭಾ ಮೆಡಮ್ : )

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading