ಕರ್ನಾಟಕ ಎಸ್ಸಿ/ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿಪ್ರಶಸ್ತಿ -2025 ಪ್ರಕಟ.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ/ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣದಂತಹ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.
ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು ,ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ಹಿರಿಯ ಮತ್ತು ಉದಯೋನ್ಮುಖ ವೃತ್ತಿಪರ ಪತ್ರಕರ್ತರನ್ನು, ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಜವಬ್ದಾರಿಯನ್ನು ನಿರ್ವಹಿಸುತ್ತಾ ಬರಲಾಗುತ್ತಿದೆ.
ಈ ಭಾಗವಾಗಿ ಸಂವಿಧಾನ ಶಿಲ್ಪಿ , ನಿಷ್ಪಕ್ಷಪಾತ ಪತ್ರಿಕೋದ್ಯಮದ ನೈತಿಕ ಮೌಲ್ಯವೇ ಆಗಿದ್ದ ಡಾ. ಬಾಬಾ ಸಾಹೇಬ್‌ಅಂಬೇಡ್ಕರ್, ದಲಿತ ಚಳವಳಿಯ ಕಟ್ಟಿದ ಪ್ರೊ.ಬಿ.ಕೃಷ್ಣಪ್ಪ, ದಲಿತರ ಸ್ವಾಭಿಮಾನ, ಹಕ್ಕುಗಳಿಗೆ ರಾಜಕೀಯ ಶಕ್ತಿ ಧಾರೆ ಎರೆದ ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ, ಮಾಜಿ ಸಚಿವ ಬಿ.ರಾಚಯ್ಯ, ಅವರುಗಳ ಹೆಸರಿನಲ್ಲಿ ಸ್ಥಾಪಿಸಲಾಗಿರುವ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು -2025 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿಸಲಾಗಿದೆ.
ಇದೇ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುತ್ತಿರುವ ಪರಿಶಿಷ್ಟ ಜಾತಿ/ವರ್ಗಗಳ ಸಾಧಕ ಸಂಪಾದಕರುಗಳನ್ನು ಗುರುತಿಸಿ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಸೆಪ್ಟಂಬರ್ 17 ರಂದು ಸರ್ಕಾರಿ ನೌಕರರ ಸಂಘದ ಆಡಿಟೋರಿಯಂ ಕಬ್ಬನ್ ಪಾರ್ಕ್ ಬೆಂಗಳೂರು ಇಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳು-2025 ( ತಲಾ 10 ಸಾವಿರ ರೂ. ನಗದು,ಪ್ರಶಸ್ತಿಫಲಕಗಳನ್ನೊಳಗೊಂಡಿರುತ್ತದೆ.)
1.ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ *
ಕೆ. ದೀಪಕ್
ಸಂಪಾದಕರು ’ವಿಜಯ ಕಾಲ’ ಕನ್ನಡ ದಿನಪತ್ರಿಕೆ ಪ್ರಗತಿಪರ ಚಿಂತಕರು, ಮೈಸೂರು
2.ಪ್ರೊ.ಬಿ . ಕೃಷ್ಣಪ್ಪ ದತ್ತಿ ಪ್ರಶಸ್ತಿ
ಗುರುಪ್ರಸಾದ್ ಕೆರಗೋಡು
ರಾಜ್ಯ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ. ಮಂಡ್ಯ.
3 ಬಿ.ರಾಚಯ್ಯ ದತ್ತಿ ಪ್ರಶಸ್ತಿ
- ಬದ್ರುದ್ದೀನ್. ಕೆ ಆಯುಕ್ತರು,ಮಾಹಿತಿ ಆಯೋಗ ಬೆಂಗಳೂರು ಹಿರಿಯ ಪತ್ರಕರ್ತರು
4.ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ
ಯತಿರಾಜ್ ಬಿ ಸಿ (ಯತಿರಾಜ್ ಬ್ಯಾಲಹಳ್ಳಿ) ಪತ್ರಕರ್ತರು ಬೆಂಗಳೂರು
ಸಂಪಾದಕರುಗಳಿಗೆ ಗೌರವ ಪ್ರಶಸ್ತಿ-2025
(ಪ್ರಶಸ್ತಿ ಫಲಕ ಮತ್ತು ಗೌರವ ಸ್ಮರಣಿಕೆ)
1.ಚಂದ್ರಣ್ಣ
ಸಂಪಾದಕರು ’ಕರ್ನಾಟಕ ಎಕ್ಸ್ ಪ್ರೆಸ್’ ದಾವಣಗೆರೆ
- ದೇವೇಂದ್ರಪ್ಪ ಕಪ್ಪನೂರು
ಸಂಪಾದಕರು ’ಬುದ್ಧಲೋಕ’ ಗುಲ್ಬರ್ಗಾ
3.ಬಿ ಓ ಕರಿಯಮ್ಮ ಸಂಪಾದಕರು ’ ಜಗಳೂರು ವಾಯ್ಸ್’ ದಾವಣಗೆರೆ
4.ಸುಭಾಷ್ ಹೊದ್ಲೂರು ಸಂಪಾದಕರು ’ಸುದಿನ’ ಕನ್ನಡ ದಿನಪತ್ರಿಕೆ ಬಾಗಲಕೋಟೆ
4.ಅನೂಪ್ ಕುಮಾರ್ ಕಾರ್ಯನಿರ್ವಾಹಕ ಸಂಪಾದಕರು ’ಬಳ್ಳಾರಿ ಬೆಳಗಾಯಿತು’ ಬಳ್ಳಾರಿ






0 Comments