ಎಷ್ಟೊಂದ್ ಜನ.. ಇಲ್ಲಿ ಎಲ್ಲಾ ನನ್ನೋರು..

ಮಹಮದ್ ರಫೀಕ್ 

ಕೆಲದಿನಗಳ ಹಿಂದೆ ನನ್ನ ಗೆಳೆಯನ ಆಹ್ವಾನದ ಮೇರೆಗೆ ಅವರ ಹಬ್ಬದ ಸಲುವಾಗಿ ತಮಿಳಿನಾಡಿಗೆ ಹೋಗಿದ್ದೆ.

69 ಜಾತಿ ಸೇರಿ ಬದುಕುವ ಒಂದು ಊರು, ಅಲ್ಲಿ ಮೇಲು ಕೀಳಿಲ್ಲ ಗುಡಿಸಲುಗಳೇ ಅವರ ಸೂರು.

ಊರಿನೊಳಗೆ ವಾಹನಗಳ ಪ್ರವೇಶ ನಿಷೇದ , ಮಾಂಸ , ಮಧ್ಯಪಾನ ನಿಷೇದ , ಸುಳ್ಳು , ಮೋಸ, ವ್ಯಭಿಚಾರ ಮಾಡುವುಹಾಗಿಲ್ಲ.

ಅತೀ ಶಿಸ್ತಿನಿಂದ ಅಳವಡಿಸಿಕೊಂಡಿರುವ ಇನ್ನು ಅನೇಕ ಪದ್ಧತಿಗಳು .

ಹೊರಗಿನ ಯಾವುದೇ ವ್ಯಕ್ತಿ ಊರಿನೊಳಗೆ ಪ್ರವೇಶಿಸಿದ್ದೆ ಆದಲ್ಲಿ ಅವರಿಗೂ ಇದೆ ನಿಯಮ.

ಅಲ್ಲಿ ದೇಶದ ವಿಭಿನ್ನ ಪ್ರದೇಶಗಳಿಂದ ಬರುವ ಆ ಸಮುದಾಯದ ಜನ ಒಟ್ಟಾಗಿ ಸೇರಿ ಒಬ್ಬನೇ ಭಗವಂತ ಮತ್ತು ಮಾನವರೆಲ್ಲ ಒಂದೇ ಎನ್ನುವ ನಂಬಿಕೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ .

mahamud rafeeq2ಬಿಳಿ ಪಂಚೆ , ಬಿಳಿ ಶರ್ಟು ಮತ್ತು ಬಿಳಿ ಪೇಟ ಇದು ಅಲ್ಲಿನ ನಿಯಮ ..

ಅಗತ್ಯವಾದ ಮಾತುಗಳು ಬಿಟ್ಟರೆ ಮೌನವೇ ಹೆಚ್ಚು.

ಮರುಳಿನಿಂದ ಕೂಡಿರುವ ನೆಲದ ಮೇಲೆ ಕುಳಿತುಕೊಳ್ಳುವ ವ್ಯವಸ್ಥೆ .

ಸಣ್ಣ ಪುಟ್ಟ ಕಸುಬು ಮಾಡಿಕೊಂಡು ಬದುಕುವ ದಿನಗೂಲಿ ವ್ಯಕ್ತಿಗೂ ಲಂಡನಲ್ಲಿ ಅಧಿಕಾರಿಯಾಗಿದ್ದ ವ್ಯಕ್ತಿಗೂ ಒಂದೇ ಗೌರವ .

ಪ್ರತಿಯೊಬ್ಬರ ಮಾತಿನಲ್ಲೂ ಪ್ರೀತಿ ಮತ್ತು ತಾಳ್ಮೆ .

ಎಲ್ಲರದು ನಗುಮುಖ ಅಪರಿಚಿತನನ್ನು ಬಾಲ್ಯದ ಗೆಳೆಯನೆಬಂತೆ ಮಾತನಾಡಿಸುವ ವಿಧಾನ.

ಆ ಪ್ರದೇಶದ ತುಂಬೆಲ್ಲಾ ಬೇವಿನ ಮರ , ಅರಳೀ ಮರ ಮತ್ತು ಎಲ್ಲರೊಂದಿಗೆ ಭಯವಿಲ್ಲದೆ ನಡೆದಾಡುತ್ತಿದ್ದ ನವಿಲುಗಳು ..!

ಇದು ತಿರುಚಿಯಲ್ಲಿನ ಒಂದು ಸಣ್ಣ ಊರು ..!
ಮುಸ್ಲಿಂ ಸಂತನೊಬ್ಬನ ಅನುಯಾಯಿಗಳು ಇವರೆಲ್ಲ ..

ಮುಂಬೈ ಇಂದ ಹಿಡಿದು ಕೇರಳದ ಹಳ್ಳಿಯವರೆಗೂ ವಿವಿಧ ಭಾಗದಿಂದ ಬಂದಂತಹ ಸತ್ಯಾನ್ವೇಷಕರು ಕಂಡರು .

ವೇದ, ಕುರಾನ್ , ಗೀತೆ, ಬೈಬಲ್ ನ ಚರ್ಚೆಗಳು ಅಲ್ಲಿ ಸರ್ವೇಸಾಮಾನ್ಯ .

ಊರಿನ ತುಂಬೆಲ್ಲಾ ಸತ್ಯಾನ್ವೇಷಣೆಯ ಚರ್ಚೆಗಳೇ ..!!

ಆ ಸಮುದಾಯದ ಗೆಳಯ ಸಾಲೈ ಅಂಕೇಶನ ಆಹ್ವಾನದ ಮೇರೆಗೆ ಎರಡು ದಿನ ಆ ಅದ್ಭುತವನೆಲ್ಲ ಸವಿದು ಬಂದೆ ..!!
ಬ್ರಹ್ಮೋದಯ ಮೆಇವಾಜ್ಹಿ ಸಾಲೈ ಆಂಡವರಿನ್ ತಿರುವಾದಿಗಲೆ ಶರಣಂ

ನನ್ನ ಭಾರತ ಈ ರೀತಿ ಒಂದಾಗಿ ಕೂಡಿ ಬಾಳಿದರೆ ಎಷ್ಟು ಚೆಂದ ..!!!

~ ಹಗಲುಗನಸುಗಾರ

‍ಲೇಖಕರು Admin

July 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. raju

    ನನ್ನ ಭಾರತ ಈ ರೀತಿ ಒಂದಾಗಿ ಕೂಡಿ ಬಾಳಿದರೆ ಎಷ್ಟು ಚೆಂದ ..!!!

    ಪ್ರತಿಕ್ರಿಯೆ
  2. prabhakar joshi

    Aí¥Ü¨æãªí¨Üá FÃÜá CÃÜÆá DX®Ü Cíw¿Þ¨ÜÈÉ ÓÝ«ÜÂÊæà. ÖÝX¨ÜªÃæ WæÅàp… !

    ಪ್ರತಿಕ್ರಿಯೆ
  3. chi na halli kirana

    Entaha Geleyara oorige shubhavagali hageye evara bhavaikateyu, edi namma
    bharatada uddavgalakku haradali endu preeti enda haraisuve ..Dhanyavadagalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: