ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲೆಲ್ಲೂ ಯುದ್ಧ ಅಶಾಂತಿ..

ಹೆಚ್ ಆರ್ ಲೀಲಾವತಿ

ಶಾಂತಿ ಮಂತ್ರ
…………………
ಎಲ್ಲೆಲ್ಲೂ ಯುದ್ಧ ಅಶಾಂತಿ
ಅಮಾಯಕರ ಆಕ್ರಂದನ
ಮುಗ್ಧ ಮಕ್ಕಳ ಬಲಿ
ಶಾಲೆ ಕಾಲೇಜು ಆಸ್ಪತ್ರೆ
ಎಲ್ಲೆಲ್ಲೂ ಬಾಂಬುಗಳ ರಣಘೋಷ
ರಾಕೆಟ್ಟುಗಳ ಹಾವಳಿ
ಪೇಪರ್ ಓದುತ್ತಿದ್ದ ನಾನು
ಹಾಗೇ ಕೈಚೆಲ್ಲಿ
ಜಂತಿಗಳನೆಣಿಸುತ್ತ
ಚಾಪೆಯಲ್ಲೊರಗಿದ್ದೆ.
ಕಣ್ಣುಗಳಿಗೆ ಮಂಪರು
ಯುದ್ಧದ ಗುಂಗಿನಲ್ಲೇ
ಹೊರಳಾಡುತ್ತಿದ್ದ ನಾನು
ಯುದ್ಧ ನಿಲ್ಲಿಸುವ ಶಪಥ ತೊಟ್ಟೆ
ಈ ಇಬ್ಬರು ರಕ್ತಪಿಪಾಸಿಗಳಿಗೆ
ಬುದ್ಧಿ ಕಲಿಸಲು ಮೇಲೆದ್ದೆ
ಶರವೇಗದಲ್ಲಿ ಓಡಿದೆ ಓಡಿದೆ
ಹಾಂ ಬಲಿಷ್ಟ ಕೈಗೆ ಸಿಕ್ಕೇಬಿಟ್ಟ
ಅವನ ಜುಟ್ಟನ್ನು ಗಟ್ಟಿಯಾಗಿ ಹಿಡಿದು
ಇತ್ತಕಡೆ ಬಂದೆ
ಮೈಮರೆತು ಅಟ್ಟಹಾಸ ಮಾಡುತ್ತಿದ್ದವನ
ಜುಟ್ಟನ್ನೂ ಹಿಡಿದೇ ಬಿಟ್ಟೆ
ಇಬ್ಬರನ್ನೂ ಹಿಡಿದೆಳೆದು ತಂದು
ಶಾಂತಿ ಮಂತ್ರ ಬೋಧಿಸ ತೊಡಗಿದೆ
ಇಬ್ಬರ ಮುಖದಿಂದ ರಣಕೇಕೆ
ಹೊಡೆದಂತಾಯ್ತು
ಬಲವಾಗಿ ಇಬ್ಬರ ಜುಟ್ಟನ್ನೂ
ಜಗ್ಗಲು ನೋಡಿದೆ
ಎಲ್ಲಿದ್ದಾರವರು?
ಅವರಿಬ್ಬರ ಟೋಫನ್
ನನ್ನ ಕೈಯಲ್ಲಿ ನಗುತಿತ್ತು
ನಾನು ಎಚ್ಚರಾದಾಗ
ಬಿಕ್ಕಿ ಬಿಕ್ಕಿ ಅಳುತ್ತಿದ್ದೆ.

‍ಲೇಖಕರು Admin

18 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading