ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಂಡೋ ಸೀಟ್ ನ ಸಾಮ್ರಾಜ್ಯ…

-ಸುರೇಶ ತಂಗೋಡ

ವಿಂಡೋ ಸೀಟ್

ಪ್ರಯಾಣವೆಂಬುದೇ ಸಡಗರ
ಅಚ್ಚರಿಗಳ ಆಗರ
ರೈಲು,ಬಸ್ಸು ಏನೇ ಇರಲಿ
ಏರಿ-ಕೂರಿ ಹೊರಡುವುದು
ದೂರದೂರನು ನೋಡುವ ಕಾತರ.

ಹೋಗುವ ದಾರಿ
ಚಿಕ್ಕದಿರಲಿ,ಹಿರಿದಿರಲಿ
ಚಿಕ್ಕವರಿರಲಿ,ಹಿರಿಕರಿರಲಿ
ಬಯಸುವುದೊಂದೇ ಅದೊಂದೆ
ವಿಂಡೋ ಸೀಟ್!
ಅದೊಂತರ ಸ್ವೀಟ್.

ಬಸ್ಸು,ರೈಲು,ವಿಮಾನ
ಯಾವುದರಲ್ಲಿಯೇ ಆದರೂ
ಪ್ರತಿಯೊಬ್ಬರ ಹೆಬ್ಬಯಕೆ
ವಿಂಡೋ ಸೀಟ್ ಗೆ ಕೂರುವುದು.
ಆ ಮೂಲಕ ಪ್ರಪಂಚಕ್ಕೆ
ತಮ್ಮನ್ನು ತಾವು ತೆರೆದುಕೊಳ್ಳುವುದು.

ಸುತ್ತಲಿನ ಪರಿಸರ,ಊರು-ಕೇರಿಗಳ ನೋಡುತ್ತಾ
ನಗುತ್ತಾ ಸಾಗುವುದಿದೆಯಲ್ಲ
ಅದು ವರ್ಣಿಸಲಸದಳವು
ಗಾಡಿಯ ವೇಗಕ್ಕೆ ನಾವು ಹೊಂದಿಕೊಂಡಂತೆ
ಮನದಲ್ಲಿ ಅದೇನೋ ಹರುಷ
ಅದಕ್ಕೆ ವಿಂಡೋ ಸೀಟ್ ಎಲ್ಲರ ಅಚ್ಚು-ಮೆಚ್ಚು.

ಕಿಟಕಿಯಾಚೆಗೆ ಮಳೆಹನಿಯ ಮೆರವಣಿಗೆ
ಕೈಯಲ್ಲೊಂದು ಬಿಸಿ ಕಾಫಿ ಕಪ್
ಕಿವಿಯಲ್ಲಿ ಮಧುರ ಸಂಗೀತ
ಇದು ವಿಂಡೋ ಸೀಟ್ ನ ಸಾಮ್ರಾಜ್ಯ.

ಜಾತಿ-ಮತಗಳ ಪರಿವೆಯಿಲ್ಲದೆ
ನಮ್ಮೂರು-ನಿಮ್ಮೂರು ಎಂಬ
ಹಮ್ಮು-ಬಿಮ್ಮುಗಳಿಲ್ಲದೆ
ಸದಾ ಚಲನಾಶೀಲವಾದ ಪ್ರಯಾಣಕ್ಕೆ
ಮುನ್ನುಡಿಯ ಹಾಕುವುದು
ವಿಂಡೋ ಸೀಟ್.

ವಿಂಡೋ ಸೀಟ್ ನ ಪ್ರಯಾಣ
ಮುಗಿಯಿತೆಂದರೆ ಪ್ರಾಣವೇ ಹೋದಂತೆ
ಬೇಸರದ ಹೆಜ್ಜೆಗಳನ್ನಿಟ್ಟು
ನಮ್ಮ ಮನೆ ಕಡೆಗೆ ಸಾಗುವ ಅನಿವಾರ್ಯ
ತಿರುಗಿ ನೋಡಿದಾಗ ವಿಂಡೋ ಸೀಟ್
‘ಮತ್ತೆ ಬನ್ನಿ’ ಎಂಬ ನಗುಮುಖದ ಆಹ್ವಾನಕ್ಕೆ
ಒಲ್ಲದ ಮನಸ್ಸಿನ ವಿದಾಯ.

‍ಲೇಖಕರು Admin

18 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading