ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್‌ ಆರ್ ವಿಶುಕುಮಾರ್‌ ಕವಿತೆ- ಇವ ನಮ್ಮ ವಿಠಲ…

ಎನ್‌ ಆರ್ ವಿಶುಕುಮಾರ್‌

ನನ್ನ ನಿನ್ನ ಭೇಟಿ
ಒಂದೆರಡು ಸಲ ಅಷ್ಟೇ
ನನ್ನ ನಿನ್ನ ನಡುವೆ
ಒಮ್ಮೆ ಕೂಡಾ
ಕಣ್ಣು ಕಣ್ಣು ಕೂಡಲಿಲ್ಲ
ಮನ ಬೆರೆಯಲಿಲ್ಲ
ಆದರೂ ಆ ದಿನ
ನಿನ್ನ ನಿಧನದ ಸುದ್ದಿ
ಕಿವಿಗೆ ಬಿದ್ದ ದಿನ
ನನ್ನ ಮನದಲ್ಲಿ
ಎಂಥ ನೋವು
ಎಂಥ ದುಗುಡ
ದುಃಖ ಒತ್ತರಿಸಿ
ಕಣ್ಣಂಚಿನಲಿ ನಿನ್ನ
ನೆನಪಿನ ಕಣ್ಣೀರು
ಧಾರೆ ಧಾರೆ …

ಏನೀ ಭಾವತಂತು
ಏನೀ ಜೀವತಂತು
ಮಿಡಿಯಿತು
ನನ್ನ ನಿನ್ನ ನಡುವೆ
ಅಂತರಂಗದ ಗೆಳೆತನ
ಅಂದರೆ ಇದೇನಾ ?

ಏಸು ಕನಸುಗಳು
ನಿನ್ನ ಚಿತ್ತ ಬಿತ್ತಿಯಲಿ
ಏಸು ಗೆಳೆಯರು
ನಿನ್ನ ಅಂತರಂಗದಲಿ
ಏಸು ಸಂಗಾತಿಗಳು
ನಿನ್ನ ಜೊತೆಯಲಿ
ಎಲ್ಲರ ಎದೆಯಲ್ಲೂ
ಒಂದೇ ಭಾವ
ಒಂದೇ ಜೀವ
ನಮ್ಮ ವಿಠಲ ….

‍ಲೇಖಕರು Avadhi

30 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading