ಎದಿಯ ಗೂಡಿನ ಸಂದಿಯೊಳಗ..

ಸರೋಜಿನಿ ಪಡಸಲಗಿ

ಮುಗಿಲಿನ ಬಯಲಾಗ ಬಣ್ಣದ

ಓಕುಳಿ ಸುರಿsದು ಹರಡಿತ್ತ

ಎದಿಯ ಗೂಡಿನ ಸಂದಿಯೊಳಗ

ಜೀಕಳಿ ತಾ ಛಲ್ಲಂತ ಚಿಮ್ಮಿತ್ತs||

ಬಾನ ರಂಗಿನ ಗುಂಗಿನ್ಯಾಗ

ಮತ್ತ ಸಂಜಿಯ ಮಬ್ಬಿನ್ಯಾಗ

ಅತ್ತ ಇತ್ತ ಹಾರಿ ಜಿಗಿದು

ಮನ ಸಂsಚಾsರ ಹೊರಟಿತ್ತು ||


ನೆನಪು ಕನಸು ಹೊದ್ದು ಕೊಂಡು

ಸವಿ ಸವಿ ಮಾತು ನೆsನಸಿಕೊಂಡು

ಬೆಳಕಿನ ಗದ್ದಲ ದೂರ ಸರಿಸಿ

ದಿನ ತಣ್ಣಗೆ ಮಲಗಿತ್ತs

ಕನಸಿನ್ಯಾಗ ಮುಳುಗಿ ತೇಲಿ

ತುಟಿsಯಂಚಿನ್ಯಾಗ ಸಣ್ಣಗೆ ನಗತಿತ್ತ s||


ಚಂದ್ರಕಾಳಿ ಸೀರೆಯುಟ್ಟು

ಕೆಂಪು ರಂಗಿನ ಸೆsರಗ ಬೀಸಿ

ಕತ್ತಲ ಬಾಲೆ ಮೆಲ್ಲ ಮೆಲ್ಲ

ಹೊಳ್ಳಿ ಹೊಳ್ಳಿ ನೋಡತಿತ್ತ

ಕತ್ತು ಎತ್ತಿ ಚಾಚಿ ನಿಂತು

ಯಾಕೋ ಏನೋ ದೂರದತ್ತ ದಿಟ್ಟಿ ನೆಟ್ಟಿತ್ತ||


ಹಕ್ಕಿ ಗೂಡಿನ್ಯಾಗ ಜೋಡಿ ಹಕ್ಕಿಯ

ಪಿಸು ಪಿಸು ಮಾತ ನಡದಿತ್ತ

ಗುಸು ಗುಸು ಪಿಸು ಪಿಸು ಆಲಿಸುತ್ತ

ಕತ್ತಲ ಬಾಲೆ ಕsಣ್ಣೀನ್ಯಾಗ

ಫಳಕ್ಕೆಂದು ತಾ ಮಿಂಚು ಹೊಳದಿತ್ತ

ಕಂಡೂ ಕಾಣದ ಭಂಗಾರದೆಳಿಯಂಥ ನಗೀ ಮೂಡಿತ್ತ ||


ಕತ್ತಲ ಬಾಲೆ ನಗೀ ಬೆಳಕು

ಮುಗಿಲ ತುಂಬ ಹಬ್ಬಿ ಹರಡಿತ್ತ

ಆಕೀ ನಲ್ಲಗ ಗದ್ದಲ ಇಲ್ಲದೆ

ಸುಳಿವು ಕೊಡದೇ ಸುದ್ದಿ ನೀಡಿತ್ತ

ಮುಗಿಲಿನ ಬಯಲಾಗ ಬಂದು ನಿಂತು

ಆತ ನಗುs  ಬೀರಿದ್ದ ಬಾಲೆಯ ಮೊಗ ಹೊಳದಿತ್ತ||


ಏನೀ ಸರಸಾ ಎಂಥಾ ಆಟಾ

ಸಂಚಾರ ಹೊರಟ ಮನಸು

ಮುಸಿ ಮುಸಿ ನಕ್ಕಿತ್ತ

ತಿರು ತಿರುಗಿ ನೋಡಿತ್ತ

ಮಾಯಾ ಮೋಹದಾಟದಂತ

ತಿಳಿಯಲಾಗದ ಒಗಟು ಅಂತ

ನೆಟ್ಟಗ ತನ್ನ ಠಾವಿನ ದಾರಿ ಹಿಡsದ ನಡದಿತ್ತ||

‍ಲೇಖಕರು Avadhi

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: