ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎತ್ತರಕ್ಕೇರಿದ ಗಾಳಿಪಟವೊಂದು..

m b raja

ರಾಜಾಬಕ್ಷ್ ಎಂ.ಬಿ

1

ಹೆಂಡತಿಯ ಕೈತಾಗಿ ಬುದ್ಧನ
ಮೂರ್ತಿ ನೆಲಕ್ಕೆ ಬಿದ್ದು ಚೂರಾಯಿತು.
ಸಿಟ್ಟಿಗೆದ್ದ ಗಂಡ,ಹೆಂಡತಿಯ ಕೆನ್ನೆಗೆ ಛಟೀರ್ ಅಂತ
ಬಾರಿಸಿದ್ದನ್ನ ಕಂಡ ಬುದ್ಧ, ‘ಶಾಂತಿ’ಯ ಕುರಿತಾದ
ತನ್ನ ಹೇಳಿಕೆಗಳ ಕುರಿತು ಮರುವಿಶ್ಲೇಷಣೆಗಿಳಿದ.

2

leavesಕಂಪೌಂಡ್ ನೆಗೆದೋಡಿ ಬೋಧಿವೃಕ್ಷದ ಕೆಳಗೆ
ಧೀರ್ಘ ಧ್ಯಾನಕ್ಕಿಳಿದ ಬುದ್ಧನ ಧೃಢತೆ ಮೆಚ್ಚಿದ ಬಾನ ಚಂದಿರ,
ಸೀದಾ ಬುಧ್ಧನ ಹೃದಯದಾಳದಲ್ಲಿ ತೇಲಿ ಬಂದ.
ಬೋಧಿವೃಕ್ಷದ ಎಲೆಎಲೆಗಳಲ್ಲಿ ನಕ್ಷತ್ರಗಳೆಲ್ಲ ಹೊಳೆಯತೊಡಗಿದವು.

3

‘ಬುದ್ಧಮಾರ್ಗ’ ಹಿಡಿಸುತ್ತಿದೆ ಎಂದು ಹೆಂಡತಿಗೆ
ಹೇಳಿದಾಗಿನಿಂದಲೂ ರಾತ್ರಿಗಳಲ್ಲಿ ಗಟ್ಟಿಯಾಗಿ
ತಬ್ಬಿಕೊಂಡು ಮಲಗುತ್ತಾಳೆ.

4
ಎತ್ತರಕ್ಕೇರಿದ ಗಾಳಿಪಟವೊಂದು
ಮೋಡಗಳೊಂದಿಗೆ ಹಾದರಕ್ಕಿಳಿದಿದ್ದನ್ನ
ಸಹಿಸದ ಸತ್ಯಶೀಲ ‘ದಾರ’ ಬಂಧ ಕಡಿದುಕೊಂಡಿತು.

ಎತ್ತರಕ್ಕೆರುವುದೆಂದರೆ ಎಲ್ಲವನ್ನೂ ಮೀರುವುದಲ್ಲ.

5

ತೊಟ್ಟಿಲಲ್ಲಿ ಮಲಗಿದ್ದ ಕೂಸು
ತನ್ನ ತಾಯಿಯ ಬಳೆ ಸದ್ಧನ್ನೇ ಧೇನಿಸುತ್ತಿತ್ತು.
ಪೂರ್ಣಪ್ರಮಾಣದ ಧ್ಯಾನಕ್ಕೆ ಇದಕ್ಕಿಂತ ಬೇರೆ
ಉದಾಹರಣೆ ಸಿಗಲಿಕ್ಕಿಲ್ಲ!!.

‍ಲೇಖಕರು Admin

11 July, 2016

2 Comments

  1. ರಘುನಂದನ ಕೆ

    Waw, Nice… ಎತ್ತರಕ್ಕೆರುವುದೆಂದರೆ ಎಲ್ಲವನ್ನೂ ಮೀರುವುದಲ್ಲ..!!

  2. shama nandibetta

    “ತೊಟ್ಟಿಲಲ್ಲಿ ಮಲಗಿದ್ದ ಕೂಸು
    ತನ್ನ ತಾಯಿಯ ಬಳೆ ಸದ್ಧನ್ನೇ ಧೇನಿಸುತ್ತಿತ್ತು.
    ಪೂರ್ಣಪ್ರಮಾಣದ ಧ್ಯಾನಕ್ಕೆ ಇದಕ್ಕಿಂತ ಬೇರೆ
    ಉದಾಹರಣೆ ಸಿಗಲಿಕ್ಕಿಲ್ಲ!!.”

    “ಎತ್ತರಕ್ಕೆರುವುದೆಂದರೆ ಎಲ್ಲವನ್ನೂ ಮೀರುವುದಲ್ಲ..!!”

    Beautiful lines… Bahala kaala nenapinalli uliva saalugalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading