ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ..

m s krishnamurthy geetha

ಎಂ ಎಸ್ ಕೃಷ್ಣಮೂರ್ತಿ ಗೀತಾ 

ಬೆಳಗ್ಗೆ ಪ್ರೊಫೆಸರ್ ಪೋನ್ ಮಾಡಿದ್ದರು
ಅವರ ರಾಜ್ಯಶಾಸ್ತ್ರದ ಪುಸ್ತಕ
ಕಪಾಟಿನಿಂದಾಚೆ ಬಂದು ಕುಣಿಯುತ್ತಿದೆಯಂತೆ
ಆಜಾದಿ
ಆಜಾದಿ ಎಂದು ಕೂಗಾಡುತ್ತಾ

ನಾನು ಹೇಗಾದರಾಗಲಿ ಎಂದು ನನ್ನ
ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ
ಅದು ಕುಣಿಯುತ್ತಾ
ಆಜಾದಿ
ಅಜಾದಿ ಎಂದಿತು

ನಾನು ಬಡತನದಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಅಸಮಾನತೆಯಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಖೊಟ್ಟಿ ಆರ್ಥಿಕ ನೀತಿಯಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಹಸಿವಿನಿಂದ ಎಂದೆ
ಅಜಾದಿ ಅಜಾದಿ ಅಜಾದಿ ಎಂದು ಕೂಗಿತು

ನೋಡಿ ನಿಮ್ಮ ಮನೆಯ
ಸಮಾಜಶಾಸ್ತ್ರದ ಪುಸ್ತಕಗಳೂ ಕುಣಿಯುತ್ತಿರಬಹುದು

ಅಜಾದಿ ಅಜಾದಿ ಆಜಾದಿ ಎಂದು ಘೋಷಣೆಯನ್ನು ಕೂಗುತ್ತಾ……

 

11333736_390179137850358_779330327_n

keep distance

ಸೈಕಲ್ ಮೇಲೆ
ಎಳನೀರು ಹೇರಿಕೊಂಡು ಮಾರುತ್ತಿರುವವನಿಗೆ
ಏನೋ ಖುಷಿ…

ಸೈಕಲ್ ಹಿಂದೆ
keep distance ಅಂತ
ಬೋರ್ಡ್ ತಗಲಿಸಿದ್ದ

ಪೋಲಿಸಪ್ಪ ಬೆತ್ತದಿಂದ ಬೋರ್ಡಿಗೆ ಬಡಿದು
ಇದು ಬಾರಿ ವಾಹನದ ಹಿಂದೆ ಇರಬೇಕಾದ್ದು
ನೀನು.. ನಿನ್ನ ಸೈಕಲ್ ಈ ರಸ್ತೆ ಮೇಲೇ ಓಡಾಡೋ
ತೀರ ಸಾಮಾನ್ಯ
ಪ್ರಯಾಣಿಕ ಕ್ರಿಮಿಗಳು
ನಿನಗ್ಯಾಕಲೋ ಈ ಬೋರ್ಡು ಎಂದು
ನಗಾಡಿದ

ಎಳನೀರಿನವನು ನಕ್ಕು ಪೋಲಿಸಪ್ಪನಿಗೆ
ಬಿಟ್ಟಿ ಎಳನೀರು ಕೊಚ್ಚಿ
ಕೊಟ್ಟ

‍ಲೇಖಕರು admin

26 March, 2016

2 Comments

  1. ಋತಊಷ್ಮ

    ಆಜಾದಿ ಕವನ ಚೆನ್ನಾಗಿದೆ.

  2. Johns unticoppa

    ಮನಮುಟ್ಟುವ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading