ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊದುತ್ತಲೇ ಇದ್ದೇನೆ ಬದುಕನ್ನು..

ಕಾವ್ಯ ಎಸ್ ಕೋಳಿವಾಡ್

ಊದುತ್ತಲೇ ಇದ್ದೇನೆ ಬದುಕನ್ನು ಹಾಗೆ ಹಾಗೆ
ಗಾಳಿ ತೂರಿ ಒಳಹೋಗಿ
ಅಷ್ಟುದ್ದ ಮೈಲುಗಲ್ಲನು ತಾಗುವ ಹಾಗೆ

ಜಾತ್ರೆಯ ಜಂಗುಳಿಯೊಳಗೆ ಕಳೆದೋದ ಆಸೆಗಳ ಎದೆಗವಚಿಕೊಂಡು ನಕ್ಕ‌ ನಗೆಯ ಜೊತೆ ಉಸಿರೂ ಮಾರಾಟಕ್ಕಿದೆ .

ಇಲ್ಲಿ ಬಣ್ಣದ ಕನಸುಗಳ ಬಲೂನೊಳಗೆ ತೂರಿ
ಕಪ್ಪುಬಿಳಿ ಜಗದೊಳಗೆ
ಬಿಕರಿಗಿಟ್ಟಿದಾಳೆ ಪುಟ್ಟಿ

ಉಸಿರೂದಿದಾಗ ಉದ್ದಕೇರುವ ಪೀಪಿ ,  ಪಿಂಕು ಬಣ್ಣದ ಬಾಂಬೆ ಮಿಠಾಯಿ , ಮಾಟಾಗಿ ನಗುತಿರುವ ಬಾರ್ಬಿಗೊಂಬೆಯ ಕನಸೂ ಕ್ಷಣಿಕ
ಮಾರುತಿರುವ ನೊರೆಗುಳ್ಳೆಯಂತೇ

ಹರಿದ ಜೇಬೂ ಅಪ್ಪನ ಪ್ರೀತಿಗೆ ಸಾಂತ್ವನ  ಹೇಳುತಿದೆ . ಕೊಳಲೂದಿ ದಣಿದ ಅಣ್ಣನ
ಹಸಿವಿಗು ಈಗೀಗ ಜೀವ ಬಂದಿದೆ

ಕಾಲು ಮಡಚಿ ಮಲಗಿದ ಕಾಲ ನೋಡುತ್ತಲೇ ಇದೆ ಬದುಕ ಉಸಿರು ಊದಿ ಊದಿ ಕಪ್ಪಿಟ್ಟ ತುಟಿಗಳನ್ನು .‌.

ಗಡಿಯಾರದ ಸುತ್ತು ಸುತ್ತಿಗೆ
ಜೀತಕಿರುವ ಮುಳ್ಳುಗಳ ನಡುವೆ ಕಾಲ ಕೊನೆದಿನಗಳನೆಣಿಸುತಿದೆ

‍ಲೇಖಕರು avadhi

21 November, 2017

1 Comment

  1. Kalgundi Naveen

    Tumba chennagide. Shubhavagali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading