'ಉಳಿದ ಮೇಲೂ ಕಾಡಡವಿಯಾಗಿ ವಿಸ್ತಾರವಾದೆ' – ಹರವು ಸೂರ್ತಿ

ನನ್ನವೆಂದು ಬರೆದುಕೊಳ್ಳುವಾಗ

– ಹರವು ಸ್ಫೂರ್ತಿ

ನಾನೊಂದು ಅರಣ್ಯವಾಗಿ ವಿಸ್ತಾರವಾದೆ
ಚಿಗುರಿ ಮರವಾದೆ; ಹಣ್ಣು ಬಿಟ್ಟು ತೂಗಿದೆ
ಸುರುಳಿ ಸುಳಿದು ಗಂಧವಾದೆ
ಎದೆ ಹರಡಿ ಜಲಪಾತವಾದೆ
ಭಾವ ಧುಮ್ಮಿಕ್ಕಿ ಸಾವಿರ ಕಡೆಗೂ ಪುಟಿದು
ಸಮುದ್ರದ ಬಯಕೆಯಿಂದ ಹರಿದೆ
ಅಗ್ನಿ ಆಕಾರ ತಳೆದರೂ ಉಗ್ರವಾಗಲಿಲ್ಲ
ಸಮಾಜದ ಎಲ್ಲಾ ವಿಚಿತ್ರ ಕೋನವೂ ನಾನಾದೆ
ಬೆಳಕಿನ ಭ್ರಮೆಗಳಿರುವುದು ಅದ್ಭುತ

ಖುಷಿಗೆ ಹೆಸರಿಡದೆ
ಬದುಕಿಕೊಳ್ಳುವಾಗ
ನನ್ನ ದುಃಖಕ್ಕೂ ನಿಮ್ಮೆಲ್ಲರ ದುಃಖಕ್ಕೂ ಅಂತರವೇ ಇರಲಿಲ್ಲ
ನಿಮ್ಮ ಒಡಲೇ ನಾನೆಂದು – ನನ್ನನೂ ಬರೆದುಕೊಂಡೆ
ಪಾಪ ವಾಹಕಳಾದೆ; ಎಲ್ಲರ ನೋವುವನ್ನು ಬಸಿದುಕೊಂಡೆ
ಕರ್ಮ, ಜಡತ್ವ, ಕೋಪ, ಹಿಂಸೆ, ನಿರಾಶೆಗಳ ತೀವ್ರ ಬಾಧಿಸಿಕೊಳ್ಳುತ್ತಾ
ದುಃಖದ ಕತೆ ಬರೆಯುತ್ತ ಸಂಕಟಕರ ಕಿವಿತೆ ಓದುತ್ತಾ
ಕವಿಯಾದೆ
ಉಳಿದ ಮೇಲೂ ಕಾಡಡವಿಯಾಗಿ ವಿಸ್ತಾರವಾದೆ
 
ಗಂಭೀರತೆ, ಶೋಕ, ಕತ್ತಲು
ಗೋರಿ ನೋಡಿ ಕಲ್ಲು ಹೃದಯದ ಕವಿ ಎಂದಿರಿ
ಕಾಂಕ್ರೀಟಿನೊಳಗಿಂದ
ಎರೆಡೆಲೆ ಅರಳಿಯಾಗಿ ಟಿಸಿಲೊಡೆದೆ

‍ಲೇಖಕರು G

April 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    spoorthi,why u put such an end abruptly, it could be a nice one…

    ಪ್ರತಿಕ್ರಿಯೆ
  2. girijashastry

    ಒಳ್ಳೆಯ ಕವಿತೆ. ಕಾಂಕ್ರೀಟಿನೊಳಗೂ ಸೃಜನಶೀಲತೆ ಟಿಸಿಲೊಡೆಯಲು ಸಾಧ್ಯವಿದೆ. ಅಲ್ಲಿ ಕೂಡ ಸೃಜನಶೀಲ ಸೆಲೆಗಳಿವೆ ಎಂಬ ಸಾಲುಗಳಿಂದ ಕೊನೆಯಾಗುವ ಆಶಾವಾದಿಯಾದ ಕವಿತೆ ಜೀವಪರವಾಗಿದೆ.

    ಪ್ರತಿಕ್ರಿಯೆ
  3. Rohini Satya

    Bhaavanege koodalele jaaga sikkidaroo tisilodeyutte. Aa sthala nelavaadare hemmaravaagutte.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: