ಉದಯ ಗಾಂವಕರ್ ಹೊಸ ಕವಿತೆ-‌ ಒಂದು ಕವಿತೆಯ ಸಾವು

ಉದಯ ಗಾಂವಕರ್

ಮೊನ್ನೆ,
ಇದ್ದಕ್ಕಿದ್ದಂತೆ ಒಂದು ಕವಿತೆ ತೀರಿಕೊಂಡಿತು.
ಸತ್ತಿತು, ಜೀವ ತೆತ್ತಿತು, ಅಸು ನೀಗಿತು
ಇತ್ಯಾದಿ ಯಾವುದು ಸೂಕ್ತ ಪದ
ಎಂದು ತಲೆಕೆಡಿಸಿಕೊಳ್ಳುತ್ತಿರುವಾಗಲೆ
ಯಾರೋ ಹೇಳಿದರು-
ಅದು ಆತ್ಮಹತ್ಯೆಯೆಂದು.
ಕಾರಣ ಏನಿರಬಹುದೆಂದು
ಯೋಚಿಸಬೇಕಿತ್ತು ನಾನು;
ಆದರೆ, ಅಷ್ಟರಲ್ಲೆ
ಕವಿತೆಯ ಆತ್ಮ ಎಲ್ಲಿರುತ್ತದೆ
ಎಂಬ ಪ್ರಶ್ನೆ ಅಚಾನಕ್ಕಾಗಿ ಎದುರಾಯ್ತು.
ಕವಿಯ ಆತ್ಮವೇ
ಕವಿತೆಯ ಆತ್ಮವಲ್ಲವೇ?
ಅಥವಾ
ಕವಿತೆಯ ಆತ್ಮವಿರುವುದು
ಪದಗಳನ್ನು ಪೋಣಿಸಿದ ಕ್ರಮದಲ್ಲೆ?
ಸೂಕ್ತ ಪದಗಳ ಆಯ್ಕೆಯಲ್ಲೇ?
ಆ ಪದಗಳು ಹೊರಡಿಸುವ ನಾದದಲ್ಲೆ?
ಊಹೂಂ..

ಕವಿತೆ ಓದುಗರಿಗೆ ಸೇರಿದ್ದು, ಕವಿಗಲ್ಲ.
ನನ್ನೊಳಗಿರುವ ಕವಿತೆಯನ್ನಷ್ಟೇ
ನಾನು ಓದಬಲ್ಲೆ ಎಂದು ಎನ್ನಿಸಿದ್ದೇ ತಡ
ಅದು ಆತ್ಮಹತ್ಯೆಯಲ್ಲ ಕೊಲೆ
ಎಂಬ ಯೋಚನೆ ಬಂದು ಭಯವೆನಿಸಿತು.
ಬೆವರು, ಕಂಪನ, ವಿದ್ಯುದಾಘಾತ
ಹೆರಿಗೆಯ ನೋವು ಕಳೆದು
ಆ ಕವಿತೆಯ ಸಾಲುಗಳು
ಕಣ್ಣೆದುರು ಮೂಡಿಬರತೊಡಗಿದವು
ಮರುಹುಟ್ಟು ಎಲ್ಲ ಕವಿತೆಗಳ ಕರ್ಮ
ಎಂದುಕ್ಕೊಳ್ಳುತ್ತಾ ನಿರಾಳನಾದೆ!

‍ಲೇಖಕರು Avadhi

June 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: