ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯಕುಮಾರ ಹಬ್ಬು ಕವಿತೆ – ಕಾಯುತ್ತ…

ಉದಯಕುಮಾರ ಹಬ್ಬು

ಅರಗಿನರಮನೆಗೆ ಬೆಂಕಿ
ಭೀಮನ ಹೆಗಲು‌ ಕಾದಿದೆ..‌

ದ್ರೌಪದಿ ಕಾದ ಕೆಂಡ
ಭೀಮನ ಪ್ರೀತಿಗೆ.

ಭರತ ಮಾತೆ
ಕಾದಿರುವ ಶಬರಿ.

ಪ್ಯಾಸೆಂಜರ್ ಕಾದ ಕಬ್ಬಿಣ
ಗುರಿ ಇಲ್ಲದ ಮುಟ್ಟದ ತಾಣಕೆ.

ಭರತನ ಶಿರಕೆ ರಾಮನ ಮೆಟ್ಟುಗಳ
ಭಾರ ಹೇಳತೀರದಾಗಿದೆ.

ರೋಗಿ ಶಮನವನು
ಹಸಿದವ ಅನ್ನವನು
ತರುಣ ಮದುವೆಯನು
ವಿದ್ಯಾರ್ಥಿ ಫಲಿತಾಂಶವನು.

ಕಾದಿದ್ದೆ ಬಂತು ಫಲಿತಾಂಶ
ಮುಂದೆ ಮರೀಚಿಕೆ ಹೊದಿಕೆ.
ಹೊಡೆದಾಡು ಸಿಂಹಾಸನ ನಿಶ್ಚಿತ.

ಕಾದು ಕಾದು ಬೆಂಡಾದ ಸೀತೆ
ರಾವಣನ ಬಂಧಿ.

ರಾಮಾ ರಾಮಾ ಹೆ ರಾಮಾ…!
ಆಡು ಜಗಳವಾಡು, ಕಾಡು ಹೊಡೆ ಒಡೆ

‍ಲೇಖಕರು Admin

22 August, 2022

1 Comment

  1. prathibha nandakumar

    ಸಿಕ್ಕಾಪಟ್ಟೆ ಇಷ್ಟವಾಯಿತು. ಒಳ್ಳೆ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading