ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಹಕ್ಕಿ ಗೊತ್ತಾ?

ಪರಮೇಶ್ವರ ಗುರುಸ್ವಾಮಿ

Oriental Magpie Robin

ಈ ಹಕ್ಕಿಯನ್ನು ಕನ್ನಡದಲ್ಲಿ ‘ಮಡಿವಾಳ’ ಹಕ್ಕಿ ಎಂದು ಕರೆಯುತ್ತಾರೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತಮ್ಮ ‘ಹಕ್ಕಿ ಪುಕ್ಕ’ ದಲ್ಲಿ ಹೀಗೆ ಬರೆದಿದ್ದಾರೆ, “….ಕಪ್ಪು ಬಿಳುಪು ಬಣ್ಣದ ಹಕ್ಕಿ. ಹೆಣ್ಣು ಹಕ್ಕಿಗೆ ಕಪ್ಪು ಬಣ್ಣದ ಬದಲು ಚುಕ್ಕೆಗಳಿರುವ ಬೂದು ಬಣ್ಣ ಇರುತ್ತದೆ. ಬಾಲವನ್ನು ಲಯಬದ್ಧವಾಗಿ ಮೇಲೆ ಕೆಳಗೆ ಆಡಿಸುತ್ತಾ ಇರುತ್ತದೆ. ಕುರುಚಲು ಕಾಡುಗಳಲ್ಲಿ ಹಳ್ಳಗಳ ಬದಿ ಇರುತ್ತವಾದರೂ ಹೆಚ್ಚಾಗಿ ಜನ ವಸತಿ ಇರುವ ಹಳ್ಳಿ ಪೇಟೆಗಳ ಪಕ್ಕ ನೆಲಸುತ್ತವೆ. ರಕ್ಷಣೆ ದೊರೆತರೆ ಮನೆ ಬಳಿಯೇ ಬಂದು ಸೂರಿನ ಸಂದುಗೊಂದುಗಳಲ್ಲಿಯೂ ಗೂಡು ಕಟ್ಟಿ ನೆಲಸುತ್ತದೆ. ಮುಂಜಾವಿನಲ್ಲಿ ಮಧುರವಾದ ಸಿಳ್ಳಿನ ರಾಗಾಲಾಪನೆ ಮಾಡುತ್ತದೆ. ಕೀಟಾಹಾರಿಯಾದ ಇದು ನೆಲದ ಮೇಲೆ ಹರಿದಾಡುವ ಕೀಟಗಳನ್ನು ಹೆರಕುವುದೇ ಹೆಚ್ಚು…….”. ಮತ್ತು ತಮ್ಮ ‘ಹೆಜ್ಜೆ ಮೂಡದ ಹಾದಿ’ಯಲ್ಲಿ ಮಡಿವಾಳ ಹಕ್ಕಿಯ ಕುರಿತ ಅವರ observationಗಳನ್ನು ಬಹಳ ಆಪ್ತವಾಗಿ ಬರೆದಿದ್ದಾರೆ.

ಸಲೀಂ ಅಲಿಯವರು ತೇಜಸ್ವಿಯವರು ವಿವರಿಸಿದ್ದಲ್ಲದೆ, “…ಜೋಡಿ ಅಥವ ಒಂಟಿಯಾಗಿರುತ್ತವೆ. ಒಣ ಪ್ರದೇಶಗಳಲ್ಲಿ ಇರುವುದಿಲ್ಲ. ಇತರ ಪಕ್ಷಿಗಳ ಕೂಗನ್ನು ಚೆನ್ನಾಗಿ ಅನುಕರಿಸುತ್ತದೆ. ಸಂತಾನೋತ್ಪತ್ತಿಯ ಸಮಯದಲ್ಲಿ ತಮ್ಮ ಗಡಿಯನ್ನು ಈರ್ಷ್ಯೆಯಿಂದ ಕಾಯುತ್ತದೆ. …. ಹೆಣ್ಣು ಕಾವುಕೊಡುತ್ತದೆ. ಗಂಡು ಕೌಟುಂಬಿಕ ಕರ್ತವ್ಯ ನಿರ್ವಹಿಸುತ್ತದೆ.” ಎಂದೂ ಹೇಳುತ್ತಾರೆ.
 

‍ಲೇಖಕರು G

27 October, 2014

1 Comment

  1. Shrinivas Pandurangi

    vivaragala vivara kodarii

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading