'ಹೆಣ್ತನದ ಆಚೆ-ಈಚೆ' – ಚಲಿಸುವ ಸಮಾಜದತ್ತ ಒಂದು ಕ್ಷ-ಕಿರಣ

ನಾಗರಾಜ್ ಹರಪನಹಳ್ಳಿ.

ಹೆಣ್ತನದ ಆಚೆ-ಈಚೆ ಶ್ರೀದೇವಿ ಕೆರೆಮನೆ ಅವರ ಅಂಕಣ ಬರಹಗಳ ಪುಸ್ತಕ. ಕಳೆದ ಎರಡು ವರ್ಷಗಳಿಂದ ಅವರು ನಿರಂತರವಾಗಿ ಪ್ರತಿವಾರ ಬರೆಯುತ್ತಿರುವ ಅಂಕಣಗಳಲ್ಲಿ ಕೆಲವನ್ನು ಎತ್ತಿಕೊಂಡು ಕುಕ್ಕೇಶ್ರೀ ಪ್ರಕಾಶನ ಪ್ರಕಟಿಸಿದೆ. ಶ್ರೀದೇವಿ ಕವಯತ್ರಿ. ಹೆಣ್ಣಿನ ತುಡಿತವನ್ನು ಕವಿತೆಗಳಲ್ಲಿ ಅಧ್ಬುತವಾಗಿ ಕಟ್ಟಿಕೊಟ್ಟಾಕೆ.`ನಾನು ಗೆಲ್ಲುತ್ತೇನೆ’ ಆಕೆಯ ಮೊದಲ ಕವನ ಸಂಕಲನ. `ಪ್ರೀತಿ ಅಂದರೆ ಇದೇನಾ’ ಎಂಬುದು ಅವರ ಮೊದಲ ಅಂಕಣ ಬರಹ. ಅದರ ಹರವು ವಿಭಿನ್ನವಾದುದು. ಈಗ ಪ್ರಕಟವಾಗುತ್ತಿರುವ `ಹೆಣ್ತನದ ಆಚೆ-ಈಚೆ’ ಅವರ ಎರಡನೇ ಅಂಕಣ ಬರಹ. ಅಂಕೋಲಾದಲ್ಲಿ ನಡೆವ ಸಮಾರಂಭದಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ.

ಅಂಕಣ ಬರಹದಿಂದ ನಾಡು ನುಡಿ ಸಂಸ್ಕೃತಿಯನ್ನು , ಜನ ಜೀವನವನ್ನು, ರಾಜಕಾರಣವನ್ನು, ಸಾಮಾಜಿಕ ತಲ್ಲಣಗಳನ್ನು ವರ್ತಮಾನದಲ್ಲಿ ನಾವು ನಿಂತು ಹೇಗೆ ನೋಡಬೇಕು, ಯೋಚಿಸಬೇಕು, ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬ ಅಂತರಿಕ ವಿಚಾರ ಸಂಘರ್ಷ ಮನುಷ್ಯನೊಳಗೆ ಆರಂಭವಾಗಿಬಿಟ್ಟಿರುತ್ತದೆ. ಈ ಮಾತನ್ನು ಮನಸ್ಸಲ್ಲಿಟ್ಟುಕೊಂಡು ಶ್ರೀದೇವಿ ಅಂಕಣಗಳ ವಸ್ತು ವಿಷಯ ಮತ್ತು ನಿರೂಪಣ ಶೈಲಿಗಳನ್ನು ಗಮನಿಸಿದಾಗ ಸಾಮಾನ್ಯ ಓದುಗನಿಂದ ಗಂಭೀರ ಓದುಗನಿಗೂ ಆಕೆ ಇಷ್ಟವಾಗುವಂತೆ ಬರೆಯಬಲ್ಲಳು. ಪ್ರಚಲಿತ ವಿದ್ಯಮಾನಗಳನ್ನು ಅಂಕಣಕ್ಕೆ ಬಳಸಿಕೊಳ್ಳುವ ಕಲೆ ಆಕೆಗೆ ದಕ್ಕಿದೆ. ಹೆಣ್ಣಿನ ಸುತ್ತ ಘಟಿಸುವ ಘಟನೆಗಳು ಹೆಚ್ಚಾಗಿ ಶ್ರೀದೇವಿ ಅವರನ್ನು ಕಾಡಿವೆ. ಹೊಸ್ತಿಲ ಒಳಗಿನ ಹೆಣ್ಣು ಅನುಭವಿಸುವ ಸುಖ ಸಂಕಟ ಮತ್ತು ಹೊಸ್ತಿಲು ದಾಟಿದ, ಆಧುನಿಕತೆಗೆ, ಶಿಕ್ಷಣಕ್ಕೆ, ಉದ್ಯೋಗಕ್ಕೆ ತೆರೆದುಕೊಂಡ ಹೆಣ್ಣಿನ ಸುತ್ತ ನೆಡೆಯುವ ಘಟನೆಗಳು ಅಂಕಣ ಬರಹದ ವಸ್ತುಗಳಾಗಿವೆ. ಬಾಲ್ಯ, ಭಯೋತ್ಪಾದನೆ, ಮೀಸಲಾತಿ, ಅತ್ಯಾಚಾರದಂತಹ ಅಮಾನವೀಯ ಘಟನೆಗಳು, ಸೆಲೆಬ್ರಿಟಿಗಳ ಬದುಕು, ಮನುಷ್ಯನಲ್ಲಿನ ಇಗೋ ಸಮಸ್ಯೆ, ಮನುಷ್ಯ ಸ್ವಾಭಾವಗಳು, ಮಯರ್ಾದ ಹತ್ಯೆ , ಬಂಡಿಹಬ್ಬದ ಅವಾರಿ, ಹರೆಯದ ಆಕರ್ಷಣೆಯ ದುರಂತಗಳು, ಎಲೆಮರೆಯ ಪ್ರತಿಭೆಗಳು, ಸಮಾಜಿಕ ಪೂರ್ವಗ್ರಹಗಳು, ಹಿತ್ತಲಗಿಡ ಮದ್ದಾಗದೇ ದೂರ ಉಳಿಯುವುದು, ಪರಿಸರದ ಕಾಳಜಿ, ಖಾಸಗಿ ಬದುಕಿಗೆ ಮಾಧ್ಯಮದ ಪ್ರವೇಶ, ಹೆಣ್ಣಿನ ಶೋಷಣೆಯ ಹೊಸ ತಂತ್ರಗಳು ಹೀಗೆ ಹತ್ತು ಹಲವು ವಿಷಯ ವಸ್ತುಗಳನ್ನು ವಾರದ ನಿಯಮಿತ ಬರಹಕ್ಕೆ ಬಳಸಿಕೊಂಡಿದ್ದಾರೆ. ಈ ಬರಹಗಳಲ್ಲಿ ಒಂದು ಸಾಮಾಜಿಕ ಎಚ್ಚರ ಮತ್ತು ವಿಚಾರನ್ನು ತೇಲಿ ಬಿಡುವ ಹೊಳಹು ಇಲ್ಲಿ ಕಾಣಿಸಿಕೊಂಡಿದೆ. ಸೈದ್ಧಾಂತಿಕ ಸ್ಪಷ್ಟತೆ ಇನ್ನು ಸ್ವಲ್ಪ ಬೇಕಿತ್ತು ಎಂದೆನಿಸಿದರೂ, ಕೆಲ ಅಂಕಣ ಬರಹಗಳಲ್ಲಿ ಇನ್ನು ಕೊಂಚ ವೈಚಾರಿಕತೆ ಮತ್ತು ನಿಷ್ಠುರತೆಯನ್ನು ಅಂಕಣ ನಿರೀಕ್ಷಿಸಿದಂತೆ ಕಾಣಿಸಿದರೂ ಸಹ ಸ್ತ್ರೀಯೊಬ್ಬಳು, ಶಿಕ್ಷಕ ನೌಕರಿ, ಕುಟುಂಬ, ಮಕ್ಕಳನ್ನು ನಿಭಾಯಿಸಿಕೊಂಡು ಪ್ರತಿವಾರವೂ ತನ್ನ ಸೂಕ್ಷ್ಮ ಒಳನೋಟದ ಬರಹದ ಧಾರೆಯನ್ನು ಹಿಡಿದಿಡುವುದು ಸ್ವಲ್ಪ ಕಷ್ಟಸಾಧ್ಯ. ಆದರೂ ಛಲ ಬಿಡಿದೆ ನಿರಂತರವಾಗಿ ಬರೆಯುವುದು ಸಹ ಒಂದು ಬದ್ಧತೆ. ಬರಹದ ಮೂಲಕ ಬೆಳೆಯುವ ಬಗೆ ಇದು. ಕಾವ್ಯ ಮತ್ತು ಇತರೆ ಸೃಹಜ ಶೀಲ ಬರಹ ಹೀಗೆ ನಿರಂತರವಾಗಿರಲು ಅಸಾಧ್ಯ. ಅಂಕಣ ಬರಹಗಳಿಗೆ ಒಪ್ಪಿಕೊಳ್ಳುವುದೇ ಒಂದು ನಿಯತ್ತು. ಅದು ಬರಹಗಾತರ್ಿಯ ಇತರೆ ಸೃಜನ ಶೀಲ ಸಮಯವನ್ನು ಕಬಳಿಸಿದರೂ, ಆಕೆ ಹೆಚ್ಚೆಚ್ಚು ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಲು ಆಕೆಯನ್ನು ಅಣಿಗೊಳಿಸಿರುತ್ತದೆ ಎಂಬುದು ಸಹ ನಿಜ. ನಿರಂತರ ಓದು, ಅಧ್ಯಯನ, ಸುತ್ತಲ ಸಮಾಜವನ್ನು , ವಿದ್ಯಮಾನಗಳನ್ನು ಗ್ರಹಿಸಲು ಅದು ಒತ್ತಾಯಿಸುತ್ತದೆ. ಅಲ್ಲದೇ ಅದಕ್ಕೆ ಪ್ರತಿಕ್ರಿಯಿಸಲು ಆಗ್ರಹಿಸುತ್ತದೆ. ಬರಹಗಾರನಿಗೆ ಗೊತ್ತಿಲ್ಲದಂತೆ ಒಂದು ನಿರಂತರ ಪ್ರತಿಕ್ರಿಯೆ ಬರಹದ ಮೂಲಕ ದಾಖಲಾಗುತ್ತಿರುತ್ತದೆ.
ಶ್ರೀದೇವಿ ಬರೆದ 27 ಅಂಕಣ ಬರೆಹಗಳು `ಹೆಣ್ತನದ ಆಚೆ-ಈಚೆ’ ಸಂಗ್ರಹದಲ್ಲಿವೆ. ತುಂಬಾ ಸರಳವಾಗಿ ಒಂದು ವಸ್ತು ವಿಷಯವನ್ನು ವಿಶ್ಲೇಷಿಸುವುದು ಇಲ್ಲಿನ ಬರಹಗಳ ಒಂದು ಗುಣ. ಹಾಗಂತ ತೀರಾ ತೆಳುವಾದ ವಿವರಗಳಿವೆ ಎಂದು ಭಾವಿಸಬೇಕಿಲ್ಲ. ಹೆಣ್ಣನ್ನು ಹೇಗೆ ಶತಮಾನಗಳಿಂದ ಶೋಷಿಸಲಾಗಿದೆ. ಪುರುಷ ಪ್ರಧಾನ ನಿಯಮಗಳಿಂದ ಆಕೆಯನ್ನು ತೃತೀಯ ದಜರ್ೆಯಲ್ಲಿ ನೋಡುತ್ತಾ ಬರಲಾಗಿದೆ ಎಂಬುದನ್ನು ನೇರವಾಗಿ, ಖಚಿತವಾಗಿ ಪ್ರಸ್ತಾಪಿಸಲಾಗಿದೆ. ಮನುಸ್ಮೃತಿ ಇಲ್ಲಿನ ಮೂರು ಲೇಖನಗಳಲ್ಲಿ ಟೀಕೆಗೆ ಗುರಿಯಾಗಿದೆ. ಪುರೋಹಿತಶಾಹಿ ವ್ಯವಸ್ಥೆ ಹೆಣ್ಣನ್ನು ಶೂದ್ರಳನ್ನಾಗಿ, ದಲಿತ ಸ್ಥಿತಿಯಲ್ಲಿ ನಡೆಸಿಕೊಂಡಿದೆ ಎಂಬುದನ್ನು ಕಟುವಾಗಿಯೇ ಶ್ರೀದೇವಿ ಪ್ರಸ್ತಾಪಿಸಿದ್ದಾರೆ. `ಹೆಣ್ಣಿನ ಜನುಮಕೆ’್ಕ, `33% ಮೀಸಲಾತಿ’, `ಮಯರ್ಾದೆ ಹತ್ಯೆ’ ಅಂಕಣಗಳಲ್ಲಿ ಮನು ಟೀಕೆಗೆ ಈಡಾಗಿದ್ದಾನೆ. ಸ್ತ್ರೀ ಪರ ಧೋರಣೆ ಮತ್ತು ಪ್ರಗತಿಪರ ಧೋರಣೆ ಎಂದು ಇದನ್ನು ಕರೆಯುವುದಕ್ಕಿಂತ ಒಂದು `ಜೀವಪರ’ ನಿಲುವು ಈ ಅಂಕಣಕಾತರ್ಿಯಲ್ಲಿದೆ.
`ನಮ್ಮಿಷ್ಟದ ಉಡುಗೆ’ ಬರಹ ಸಹ ಹೊಸ ಸಾಧ್ಯತೆಗಳನ್ನು ಚರ್ಚಿಸಿದೆ. ಪುರುಷ ಮನಸ್ಥಿತಿಯೇ ವಸ್ತ್ರ ಸಂಹಿತೆಯ ಹಿಂದೆ ಎಂದು ಅಂಕಣಕಾರ್ತಿ ಹೇಳುತ್ತಾರೆ. ವಸ್ತ್ರ ಸಂಹಿತೆಯ ಹಿಂದೆ ಒಂದು ಸಾಂಸ್ಕೃತಿಕ ಪಾಳೇಗಾರಿಕೆ ಇದೆ. ಒಂದು ಮನೋಧರ್ಮವನ್ನು ಹೇರುವ ಮತ್ತು ಏಕ ಸಂಸ್ಕೃತಿಯನ್ನು ಪ್ರತಿಪಾದಿಸುವ ಹಿಡಿನ್ ಅಜೆಂಡಾ ಇದೆ ಎಂಬುದನ್ನು ಹೇಳಿದ್ದರೆ ಅಂಕಣದ ವಸ್ತುವಿಗೆ ಹೆಚ್ಚು ಪ್ರಖರತೆ ಪ್ರಪ್ತಾವಾಗುತ್ತಿತ್ತೇನೋ.
ಕೊನೆಯ ಮಾತು :
ಅವಾರಿ ಹಬ್ಬದ ಹಂಗಾಮಾದಲ್ಲಿ ಅಂಕಣ ಬರಹದಲ್ಲಿ ಗ್ರಾಮಗಳ ಸಾಂಸ್ಕೃತಿಕ ವೈಭವ ಮತ್ತು ಸಂಬಂಧಗಳ ಬೆಸುಗೆ ಮತ್ತು ಎಲ್ಲರ ಒಗ್ಗೂಡುವಿಕೆ ಮತ್ತು ನಗರಗಳತ್ತ ಚುದುರಿಹೋದವರು ವರ್ಷಕ್ಕೆ ಒಮ್ಮೆಯಾದರೂ ಬಂಡಿಹಬ್ಬದ ನೆಪದಲ್ಲಿ ಕೂಡುವುದನ್ನು ಪ್ರಸ್ತಾಪಿಸಿ, ಹಗರಣಗಳ ಮೂಲಕ ಕೆಟ್ಟದನ್ನು ಪರೋಕ್ಷವಾಗಿ ಟೀಕಿಸುವ ಸಂಪ್ರದಾಯವನ್ನು ಹಬ್ಬದ ಹೆಚ್ಚುಗಾರಿಕೆಯಾಗಿ ಹೇಳುತ್ತಾರೆ. ಆದರೂ ಹಬ್ಬದ ನೆಪದಲ್ಲಿ ಒಂದು ಶೋಷಣೆಯ ಸಂಪ್ರದಾಯವನ್ನು , ಪುರೋಹಿತಶಾಹಿ ಕಲಿಸಿಕೊಟ್ಟ ಅಥವಾ ಅನುಕರಿಸಿದ ಒಂದು ಹಬ್ಬ, ಪೂಜೆ, ಆಚರಣೆಯ ನೆಪದಲ್ಲಿ ವರ್ಗ ಮತ್ತು ವರ್ಣ ಶೋಷಣೆಯನ್ನು ಗೊತ್ತಿಲ್ಲದೇ ಕಾಪಾಡಿಕೊಂಡು ಹೋಗುವುದನ್ನು ಪ್ರಶ್ನಿಸದೇ ಸುಮ್ಮನಿರುವುದು ಸಹ ಕೊರತೆ ಅನ್ನಿಸುತ್ತದೆ. ವೈಚಾರಿಕ ಕಿಡಿಯ ಮೂಲಕವೇ ಬೆಳಕು ಹೊತ್ತಿಸುವ ಕ್ರಿಯೆಯೂ ಆಗಬೇಕು. ಇದೇ ಅಂಕಣ ಬರಹದ ಒಂದು ತುಡಿತವೂ ಕೂಡ.
 

‍ಲೇಖಕರು G

October 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: