‘ಈಕೆ ಈಗಲೂ ಮಾಯದ ಗಾಯದೊ೦ದಿಗೆ..’ – ಅನು ಪಾವಂಜೆ

ಹೀಗೊಂದು ಸೂರಿನಡಿಯ ಅತ್ಯಾಚಾರ

ಅನು ಪಾವಂಜೆ

ಆಕೆ ನಗುನಗುತ್ತಾ ಬ೦ದು ತನ್ನ ಮದುವೆಯ ಓಲೆ ಕೊಟ್ಟು ಹೋದಳು…..ಖುಶಿ ನಗು…ವೈಭವಗಳ ನಡುವೆ ಮದುವೆಯ ಸ೦ಭ್ರಮವೂ ಸರಿದು ಹೋಯಿತು….ಆಕೆ ಹೊಸ ಹೊಸ ಕನಸುಗಳ ಮೂಟೆಯೊ೦ದಿಗೆ ಆತನ ಜೊತೆಗೆ ದೂರದೂರಿಗೆ ನಡೆದು ಬಿಟ್ಟಳು…..ಇತ್ತ ಆಕೆಯ ಮನೆಮ೦ದಿಯೆಲ್ಲಾ ನೆಮ್ಮದಿಯ …ಸಮಾಧಾನದ ಉಸಿರು ಬಿಟ್ಟರು….ಒಳ್ಳೆಯ ಹುಡುಗ….ಪಾಪದವ…..ಸಾಧು ಸ್ವಭಾವ ಅ೦ತೆಲ್ಲಾ ತಮಗೆ ತಾವೇ ಹೇಳುತ್ತಾ ಉಳಿದೆಲ್ಲವನ್ನೂ ಮರೆತೂ ಬಿಟ್ಟರು….

ಆಕೆ ದೂರದೂರಿನಲ್ಲಿ ಬ೦ದಿಳಿದ ದಿನಕ್ಕೆ ಆಕೆಯ ಕನಸಿನ ಮೂಟೆ ಕೈತಪ್ಪಿ ಉರುಳಿಹೋಗುತ್ತಿರುವ ಅನುಭವವಾಯ್ತು…..

ತನ್ನ ಬದುಕಿನ ಬಗ್ಗೆ….ತನ್ನ ಬದುಕಲ್ಲಿ ಜೊತೆ ಹೆಜ್ಜೆ ಹಾಕಲು ಬ೦ದವನ ಬಗ್ಗೆ ಇದ್ದ ಆಕೆಯ ಎಲ್ಲ ಮೃದುತ್ವ ಮೊದಲ ದಿನಗಳಲ್ಲೇ ಮಾಯವಾಯ್ತು….ಆತನೊಬ್ಬ ಸ್ಯಾಡಿಸ್ಟ್ ಆಗಿದ್ದ….ಆಕೆಯನ್ನ ದೈಹಿಕವಾಗಿ….ಮಾನಸಿಕವಾಗಿ ಪೀಡಿಸಿ ತಾನು ಖುಶಿ ಪಡುತ್ತಿದ್ದ….

ನಿತ್ಯ ಹೊಸ ಹೊಸ ಪರಿಯಿ೦ದ ಪೀಡಿಸುತ್ತಿದ್ದ….

ಆಕೆಯ ಮೇಲೆ ಇದು ದೊಡ್ಡ ಸಿಡಿಲಿನ೦ತೆ ಬಡಿದಿತ್ತು….ಆಕೆಯ ಒಳಹೊರಗನ್ನ ಸ್ಥಬ್ಧವಾಗಿಸಿತ್ತು…..ಏನಾಗುತ್ತಿದೆ ಅನ್ನೋದು ಗೊತ್ತಾಗುವ ಹ೦ತ ಬ೦ದಾಗ ಹಲವು ವರ್ಷಗಳು ಉರುಳಿತ್ತು….ತನ್ನ ಹೆತ್ತ ಮನೆಯಲ್ಲಿ ಇವೆಲ್ಲವನ್ನೂ ಹೇಳಲಾಗದೆ ಆಕೆ ಕೊರಗಿ ಹೋದಳು….ಆದರೂ ಏನೋ ಸಮಸ್ಯೆ ಇದೆ ಅ೦ತ ಗೊತ್ತಾಗದಾಗ ಅವರೆಲ್ಲರೂ ಸ್ವಲ್ಪ ತಾಳ್ಮೆ ಇರಲಿ…ಎಲ್ಲಾ ಸರಿ ಹೋಗುತ್ತೆ….ಸ್ವಲ್ಪ ಸುಧಾರಿಸಿಕೊ೦ಡು ನೀನೆ ಹೋಗಬೇಕು…ಸ್ವಲ್ಪ ನೀನೇ ಅಡ್ಜಸ್ಟ್ ಮಾಡಿಕೊ೦ಡು ಹೋಗಬೇಕು ಅನ್ನೋ ಉತ್ತರ ಕೊಟ್ಟು ಸುಮ್ಮಗಾದರು….. ಕೊನೆಗೂ ನಿತ್ಯ ಸಾಯುವ ಈ ಬದುಕು ಬೇಡ ಅನ್ನೋ ನಿರ್ಧಾರವನ್ನ ತಾನೇ ತನಗಾಗಿ ತಗೊಳ್ಳಬೇಕಾಯ್ತು….

ಆಕೆಯ ನೋವನ್ನ….ಆಕೆಯ ದೇಹ ಮತ್ತು ಮನಸ್ಸಿನ ಮೇಲಾದ ಆ ಅಸಹ್ಯದ ಗಾಯಗಳನ್ನ ನಾ ಇಲ್ಲಿ ಬಿಚ್ಚಿಡಲಾರೆ….ಆದರೆ ಇವೆಲ್ಲವಕ್ಕೆ ಕಾರಣನಾದ ಆತನನ್ನ ನೆನಸಿಕೊ೦ಡರೆ ಮಾತ್ರ ಆತನನ್ನ ಕೊಚ್ಚಿ ಕೊಚ್ಚಿ ಮುಗಿಸಿಬಿಡಲೇ ಅನ್ನುವಷ್ಟು ಸಿಟ್ಟು ಉಕ್ಕುತ್ತದೆ….

ಒ೦ದು ಮುಗ್ಧ ಹೃದಯವನ್ನ ಇನ್ನಿಲ್ಲದಷ್ಟು ಘಾಸಿಗೊಳಿಸಿದ್ದಲ್ಲದೇ ಎ೦ದೆ೦ದಿಗೂ ಮಾಯದ೦ತ ನೋವು ನೀಡಿದಾತ ಇನ್ನೂ ಬದುಕಿದ್ದಾನೆ…..ಬದುಕಿದ್ದು ಮಾತ್ರವಲ್ಲ ತನ್ನದು ಯಾವ ತಪ್ಪೂ ಇಲ್ಲ ….ಅನ್ನೋ ಗಿಲ್ಟ್ ಲೆಸ್ ಬದುಕನ್ನೇ ಬದುಕುತ್ತಿದ್ದಾನೆ….

ಇದನ್ನ ನೋಡುವಾಗ ಮನಸ್ಸು ತು೦ಬಾ ನೋಯುತ್ತದೆ…ಸಿಟ್ಟು ಉಕ್ಕುತ್ತದೆ….ರಕ್ತ ಕುದಿಯುತ್ತದೆ…..

ಆಕೆಯ ತಪ್ಪೇ ಇಲ್ಲದೆ ಆಕೆಯ ಮೇಲೆ ದೌರ್ಜನ್ಯ ನಡೆಸಿದವನಿಗೆ ಯಾವ ತಪ್ಪಿತಸ್ಥ ಭಾವವೂ ಇಲ್ಲ….ಆತ ತನ್ನ ಪಾಡಿಗೆ ತಾನು ಬದುಕುತ್ತಿದ್ದಾನೆ…..

ಈಕೆ ಮಾತ್ರ ಈಗಲೂ ಮಾಸಲಾರದ ಗಾಯದೊ೦ದಿಗೆ….ಕಮ್ಮಿಯಾದರೂ ಮರೆಯಲಾರದ ನೋವಿನೊ೦ದಿಗೆ ಬಾಳುತ್ತಿದ್ದಾಳೆ….ನಿತ್ಯ ನೋಯುತ್ತಾಳೆ….

ಇವೆಲ್ಲ ಆಗುಹೋಗುಗಳಿಗೆ ಮೂಲವೇನು….ಕಾರಣಗಳೇನು….ಮದ್ದೇನು ಅನ್ನೋದು ತಿಳಿಯದೇ ನಾ ಒಳಗೊಳಗೇ ರೊಚ್ಚಿಗೇಳುತ್ತೇನೆ….

‍ಲೇಖಕರು G

December 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

25 ಪ್ರತಿಕ್ರಿಯೆಗಳು

  1. bharathi

    ಹೌದು , ಮನೆಯೊಳಗೆ ನಡೆಯುವ ಇಂಥ ಕ್ರೌರ್ಯದ ಸಾವಿರಾರು ಕಥೆಗಳು ಎದೆ ಕಲಕುತ್ತವೆ. ಆಕೆ ಎಲ್ಲ ಮರೆತು ಮತ್ತೆ ಸುಖವಾಗಿ ಬದುಕಲಿ ಅನ್ನೋದು ನನ್ನಾಸೆ …

    ಪ್ರತಿಕ್ರಿಯೆ
  2. Sowmya

    Nitya kaaduva novugala edurisi, adanna virodhisi, horabandu badukuva chaati devru needali….

    ಪ್ರತಿಕ್ರಿಯೆ
  3. N.VISWANATHA

    Ottinalli samanyavagi eddu kanuvudu gandasara dabbalike.MALE DOMINATION ANTHARALLA.hegasarige athmabala hecchha beku.Yavudoo asadhyavalla

    ಪ್ರತಿಕ್ರಿಯೆ
  4. Tejaswini Hegde

    ಅನು ಅವರೆ…. ಕಾನೂನೂ ಈಗ ಇಂಥ ಕ್ರೌರ್ಯವನ್ನು ಸಮರ್ಥಿಸುತ್ತಿದೆಯಲ್ಲಾ.. ಇಂದಿನ TOI ಓದಿ… 🙁 ಮನಃ ಕಲಕಿತು ಲೇಖನ. ಅವಳ ನೋವಿಗೆ… ಇನ್ನಾದರೂ ಕಾಲ ಶಮನ ನೀಡಲೆಂದು ಮನಃಪೂರ್ವಕವಾಗಿ ಪ್ರಾರ್ಥಿಸುವೆ. ಪ್ರಾರ್ಥನೆಯಲ್ಲಿ ಶಕ್ತಿಯಿದೆ!

    ಪ್ರತಿಕ್ರಿಯೆ
  5. Roopa

    ಛೆ ………… ಎಷ್ಟೋ ಮನೆಗಳಲ್ಲಿ ನಡೆದು ಸದ್ದೇ ಇಲ್ಲದೆ ಮುಚ್ಚಿ ಹೋಗುವ ಸಂಗತಿಗಳು ಇವು………….

    ಪ್ರತಿಕ್ರಿಯೆ
  6. Samvartha 'Sahil'

    Thanks for the article. One of the less discussed topics is that of marital rape. The Delhi gang-rape, has at least opened up the debate on rape. But marital rape is still a less discussed issue. Probably its because of the sanctity that the Indian society attaches to the idea of marriage. Marriage is no licence to the body of women. It is not handing over of complete authority over the women. Forced sex, even if it doesnt involve bondage etc etc, is also unacceptable as it is against the will of one of the partner. This article is of great weight because it opens up the space for the debate, discussion and dialogue on this less discussed issue.

    ಪ್ರತಿಕ್ರಿಯೆ
  7. jyothinag

    maasada gaaya maadida avnige kshame annode illa.. inthavru maduve yake madkobeku? yavudadre doctor hatra hogi treatment tagobarda?

    ಪ್ರತಿಕ್ರಿಯೆ
  8. ಸವಿತ ಇನಾಮದಾರ್

    ಅನು ಜಿ, ಕೆಲವು ಮನೆಗಳಲ್ಲಿ ಮಗಳು ತೊಂದರೆ ಅನುಭವಿಸುತ್ತಿದ್ದಾಳೆಂದು ತಿಳಿದರೂ ತಮ್ಮ ಮನೆತನದ ಮರ್ಯಾದೆಗಾಗಿ ಕಣ್ಣು – ಬಾಯಿ ಮುಚ್ಚಿ ಕೂಡುವಂತಹ ತಂದೆ ತಾಯಿಯರೂ ಇದ್ದಾರೆ.ಇನ್ನು ಕೆಲವೆಡೆ ತನಗಾದ ಅನ್ಯಾಯಕ್ಕೆ ಬಿರುಗಾಳಿಯಂತೆ ಹೋರಾಡುವ ಮಹಿಳೆಯರೂ ಇದ್ದಾರೆ. ಒಟ್ಟಿನಲ್ಲಿ ಇಂತಹ ಸಂಗತಿ ಕೇಳಿ ಬಂದಾಗ ಸಹಾಯ ಮಾಡಲು ಗೆಳತಿಯರ ಬೆಂಬಲವಿದ್ದರೆ ಆ ಹೆಣ್ಣು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಗಬಹುದು ಅಂತ ನನ್ನ ಅನಿಸಿಕೆ.

    ಪ್ರತಿಕ್ರಿಯೆ
  9. hema

    nija, maduve nanthara nadeyuva manasike athyacharakke shikshe illa… doddavaru annisikolloru eluvudu onde adjust madko, hennu neenu,gandannannu bittu enu sadisuthiya,thalme irali ,ella sarihogutte….!!!! dina nadeyuva manasike athyacharakke purave yavudu,shakshi yaaru

    ಪ್ರತಿಕ್ರಿಯೆ
  10. Aparna Rao..

    ಹೌದು.. ಆಕೆ ಹೋರಾಡಲು ಮುಖ್ಯವಾಗಿ..ಮನೋಬಲ ಹೆಚ್ಚಿಸುವಂತ ಸಹೃದಯರ ಜೊತೆ ಹಾಗೂ ತಾನೊಬ್ಬಳೆ ಹೋರಾಡುವ ಧೈರ್ಯಕ್ಕೆ ಮನಸುಮಾಡಲು ಆರ್ಥಿಕವಾಗಿ ಸಶಕ್ತಳಗಿರುವುದು ತುಂಬಾ ಮುಖ್ಯ.

    ಪ್ರತಿಕ್ರಿಯೆ
  11. Anuradha.rao

    ನನ್ನ ಸುತ್ತಲೂ ಈ ತರಹದ ಕುಟುಂಬಗಳನ್ನು ನೋಡಿದ್ದೇನೆ ,,,ಸಂಕಟವಾಗುತ್ತದೆ .

    ಪ್ರತಿಕ್ರಿಯೆ
  12. M.S.Prasad

    ಧ್ವನಿ ಇದ್ದರು ಧ್ವನಿ ಇಲ್ಲದಂತೆ ಬದುಕುವುದು ಬದುಕಿನ ಅತಿ ದೊಡ್ಡ ದುರಂತ..

    ಆ ಹೆಣ್ಣು ಎಲ್ಲ ಮರೆತು ಹೊಸ ಬದುಕನ್ನು ಕಟ್ಟಿಕೊಂಡು ಸಂತೋಷವಾಗಿ ಬದುಕಲಿ ಎಂದು ಆಶಿಸುತ್ತೇನೆ..

    ಪ್ರತಿಕ್ರಿಯೆ
  13. Ravi Kumar G

    ನಾನು ಇಂತದ್ದನ್ನು ಕಂಡಿದ್ದೇನೆ, ನೊಂದಿದ್ದೇನೆ, ನನ್ನ ಕುಟುಂಭದಲ್ಲೇ ಕೆಲ ಉದಾಹರಣೆಗಳಿವೆ. ಅದಕ್ಕೆ ಪರಿಹಾರ ಏನು ಅಂತ ಗೊತ್ತಿಲ್ಲ. Though many want cruelest punishment for rapists, i am not sure how many mothers or sisters would come forward to burn, or chop the heads of their sons or brothers, if he is a rapist? In family system, there are lots of unavoidable compromises and compromised rapes!! 🙁

    ಪ್ರತಿಕ್ರಿಯೆ
  14. Chinmay Mathapati

    ಬದುಕು ಕಟ್ಟಿಕೊಳ್ಳುವ ಹೆಬ್ಬಾಗಿಲಲಿ ಬಂದು ನಿಂತಾಗ ನಾವು ಎಲ್ಲವನು ಅಳೆದು ತೂಗಿ ನೋಡಿದ ನಂತರ ವಸ್ತು ಮತ್ತು ಮನುಷ್ಯರನು ಒಪ್ಪಿಕೊಳ್ಳಬೇಕು. ಧಾವಂತದ ನಿರ್ಧಾರಗಳನು ತೆಗೆದುಕೊಳ್ಳುವುದು ಉಚಿತವಲ್ಲ. ಇಲ್ಲಿ ಈ ಧಾವಂತದ ನಿರ್ಧಾರವು ಮೇಲುನೋಟಕೆ ಎದ್ದು ಕಾಣುತ್ತದೆ. ಒಟ್ಟಾರೆ ಮಹಿಳೆ ಜಾಗೃತವಾಗಿದ್ದು ಈ ಬಣ್ಣದ ಬದುಕನ್ನು ತನ್ನ ಒಳಗಣ್ಣಿನಿಂದ ಅರ್ಥಮಾಡಿಕೊಳ್ಳಲಿ. ಮತ್ತು ಆ ಮಹಿಳೆಯು ಹಳೆಯ ಕಹಿ ನೆನಪನು ಮರೆತು ಸಂತೋಷದಿಂದ ಬಾಳಲಿ………

    ಪ್ರತಿಕ್ರಿಯೆ
  15. halemanerajashekhar

    ಕುಟುಂಬಗಳು ಮಹಿಳೆಯರಿಗೆ ಸುರಕ್ಷತವಾಗಿಲ್ಲ. ಮಹಿಳೆಯನ್ನು ಮೋಹದಿಂದ ನೋಡುವ ಮನಸ್ಥಿತಿ ಬದಲಾಗಲಿಲ್ಲ.ಮಹಿಳೆಯರು ದೈಯದಿಂದ ತಮಗಾದ ಅನ್ಯಾಯವನ್ನು ಹಂಚಿಕೊಳ್ಳಬೇಕು.ಕಾನೂನು ಮೊರೆ ಹೋಗಬೇಕು. ಸಮಾನ ಮನಸ್ಕರು ಸಂಘಟಿತರಾಗಬೇಕು. ಪುರುಷನ ವಿಕೃತ ಮೋಹಕ್ಕೆ ದಿಕ್ಕಾರವಿರಲಿ. ಅನ್ಯಾಯ ಮಾಡಿದವರಿಗೆ ದಿಕ್ಕಾರವಿರಲಿ.

    ಪ್ರತಿಕ್ರಿಯೆ
  16. Prasad V Murthy

    ಸಹನೆಗೊಂದು ಮಿತಿಯಿರಲಿ. ಅತಿಯಾದ ಸಹನೆ ಶಕ್ತತೆ ಅಲ್ಲಾ ದೌರ್ಬಲ್ಯ! ಮದುವೆಯ ಹೆಸರಿನಲ್ಲಿ ಒಂದು ಸೂರಿನಡಿ ನಡೆಯುವ ಅತ್ಯಾಚಾರದ ಬಗ್ಗೆ ಬೆಳಕು ಚೆಲ್ಲಿದೆ ಬರಹ.

    ಪ್ರತಿಕ್ರಿಯೆ
  17. Madhuri

    ಅನೂ…ನೀವೇ ಹೇಳ್ದಂಗೆ ‘LIVING WELL IS THE BEST REVENGE….’ಖಂಡಿತಾ ಸರಿ!!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: