-ವೈ ಬಿ ಹಾಲಬಾವಿ
ಜೀರುಂಡೆಗಳ ಹಾಡು
ಕರ‍್ರೆನ್ನುತ್ತಿದ್ದವು ಜೀರುಂಡೆಗಳು,
ನಿರ್ಗಮಿಸುತ್ತಿದ್ದನು ಸರ‍್ಯನು,
ದಿನವಿಡೀ ದುಡಿದು ಕೆಲಸ ಮುಗಿಸಿ,
ಒಬ್ಬೊಬ್ಬರಾಗಿ ಅಂದಿನ ದಿನಚರಿಗೆ
ಅಂತ್ಯ ಹಾಡುತ್ತಿದ್ದರು ಕಾರ್ಮಿಕರು,
ಹಗಲೊಂದನ್ನು ನೇಯ್ದು ಮಡಿಚಿಟ್ಟಂತೆ.
ಅಲ್ಲಿ ಹುಲ್ಲ ಮೇಲೆ ಸಾಲುಗಟ್ಟಿ-
ಕೂತಿದ್ದವು ಹನಿ ಹನಿ ಇಬ್ಬನಿ,
ಕೈಯಲ್ಲಿ ಟೋಪಿ ಹಿಡಿದು,
ವಿಚಿತ್ರ, ವಿನಮ್ರಿತ, ಹೊಸಬನಂತೆ,
ಬ೦ದು ನಿಂತಿತ್ತು ಮುಸ್ಸಂಜೆಯು; ಇಲ್ಲೇ-
ಇರಬೇಕೋ ಇಲ್ಲ, ಹೊರಡಬೇಕೋ ಎಂಬAತೆ.
ಹಬ್ಬಿ ಹರಡಿತ್ತು ಅಗಾಧತೆ, ಹತ್ತಿರದ ಬಂಧು ಬಂದAತೆ-
ಮುಖವಿಲ್ಲದ, ಹೆಸರಿಲ್ಲದ ತಿಳುವಳಿಕೆ, ಒಳ ಸುಳಿದಂತೆ,
ಗೋಳಾರ್ಧವೇ ಶಾಂತವಾಗಿ ಮನೆಯೊಳಗೆ ನೆಲೆಸಿದಂತೆ-
ಇರುಳು ಇಳಿದಿತ್ತು ನಿಶ್ಯಬ್ಧವಾಗಿ.






0 Comments