ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ-

ಸಂಕಥೆಯಿಂದ

ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  . ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಆನ್ ಲೈನ್ ಮಾಧ್ಯಮದಲ್ಲಿನ ಅನೇಕ ಅನುಭವಗಳಿಗೆ ಒಡ್ಡಿಕೊಂಡ ಮೋಹನ್ ಅವರದು ನೋವಿನ ಮೂಲಕ ಸ್ಪಂದಿಸುವ ಬರವಣಿಗೆ. ಸನ್ನಿವೇಶಗಳನ್ನು  ಸಹಜತೆಯೊಂದಿಗೆ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. ಸಣ್ಣಸಣ್ಣ ಘಟನೆಗಳನ್ನು ಇಟ್ಟಕೊಂಡು ವರ್ತಮಾನಕ್ಕೆ ಕೊಂಡಿ ನೀಡುತ್ತಾರೆ. ಅದು ಮೌಲ್ಯತ್ಮಕವಾಗಿ.  ಇವರ ಲೇಖನಗಳು ಬಿಡಿಬಿಡಿಯಾಗಿ ಬರುತ್ತಿದ್ದಾಗಲೂ ಅದರಲ್ಲೊಂದು ಚೌಕಟ್ಟು ಗುರುತಿಸಬಹುದಾಗಿತ್ತು. ಈ ಕೃತಿ ಸಂವೇದನಾತ್ಮಕ. ಹೀಗೆಂದರು ಸಾಹಿತಿ ಬಾ. ವಿವೇಕ ರೈ.

ಬೆಂಗಳೂರಿನ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ   ಜಿ.ಎನ್ ಮೋಹನ್ ಅವರ ಆತ್ಮಕಥನ ಸ್ವರೂಪದ ‘ಡೋರ್ ನಂಬರ್ 142’  ಮಾಧ್ಯಮ ಕ್ಷೇತ್ರ ಕುರಿತ ಲೇಖನಗಳ ಸಂಕಲನ ‘ಮೀಡಿಯಾ ಮಿರ್ಚಿ’ ಮತ್ತು ಜೋಗಿ ಅವರು ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬರೆದ  ‘ಊರ್ಮಿಳಾ’ ಕೃತಿಗಳ ಲೋಕಾರ್ಪಣೆ ನೇರವೇರಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು
ಮೀಡಿಯಾ ಮಿರ್ಚಿ ಕೃತಿಯಲ್ಲಿ ಮಾಧ್ಯಮ ಲೋಕ ಕುರಿತ ಲೇಖನಗಳಿವೆ. ಈ ಲೋಕ ನನಗೆ ಸಂಪೂರ್ಣ ಪರಿಚಿತವಲ್ಲ. ಆದರೆ ಮಾಧ್ಯಮ ಕ್ಷೇತ್ರದ ಕುರಿತ ಒಳನೋಟಗಳನ್ನು ಮೀಡಿಯಾ ಮಿರ್ಚಿ ಕಟ್ಟಿಕೊಡುತ್ತದೆ ಎಂದರು ಈ ಸಂದರ್ಭದಲ್ಲಿ ಆನ್ ಲೈನ್ ಬ್ಲಾಗುಗಳಲ್ಲಿ ಪತ್ರಿಕಾ ರಂಗದ ಸ್ಥಿತ್ಯಂತರಗಳನ್ನು ಪರಿಚಯಿಸುವ ಕೆಲಸವೂ ಆಗುತ್ತಿದೆ.ಇವುಗಳಲ್ಲಿ ಗುಣಾತ್ಮಕವಾಗಿರುವಂಥವೂ ಇದೆ ಎಂದು ಹೇಳಿದರು.
ಇದು ನಮ್ಮೆಲ್ಲರ ಕಥೆ. ಇಡೀ ಕೃತಿ ಸಿನಿಮಾ ರಂಗದ ಬಗ್ಗೆ ಇದೆ. ಇದರಲ್ಲಿ ಕೃತಿಕಾರ ಮುಖ್ಯವಾಗಿ ಎರಡು ಪಾತ್ರಗಳನ್ನು ತಂದಿದ್ದಾರೆ. ಸಿನಿಮಾ ರಂಗದವರನ್ನು ಬೂಷ್ಟ್ ಮಾಡುವುದು, ಇಲ್ಲಿ ಹಣದ ಪ್ರವಾಹ ಹೇಗೆ ಹರಿಯುತ್ತದೆ ಎಂದು ವಿವರಿಸಿದ್ದಾರೆ. ಈ ರಂಗದ ಪುರುಷರ ನಡವಳಿಕೆಗಳ ಬಗ್ಗೆ ಚಿತ್ರಣವಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ತಪ್ಪುಗಳಾಗುವುದು, ದಾರಿ ತಪ್ಪುವುದು ಸಾಮಾನ್ಯ. ಆದರೆ ಹೊರಗೆ ನಿಂತು ನೋಡಿದಾಗ ಇವೆಲ್ಲ ವಿಭಿನ್ನ ಹಂತಗಳಾಗಿ ಕಾಣುತ್ತವೆ. ಸ್ತ್ರೀ ವಾದದ ಪರಿಭಾಷೆಗಳನ್ನು ಬಳಸದೇ ಹೆಣ್ಣಿನ ಐಡೆಂಟಿಯನ್ನು ಚೆನ್ನಾಗಿ ಕಟ್ಟಿಕೊಡುತ್ತಾರೆ.  ಎಂದರು. ನಾಗೇಶ್ ಹೆಗಡೆ ಮತ್ತು ಬಿ. ಸುರೇಶ್ ಅವರು ಸಹ ಈ ಮೂರು ಕೃತಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಡೋರ್ ನಂಬರ್ 142 ಕುರಿತು ನಾಗೇಶ್ ಹೆಗಡೆ ಅವರು ಹೇಳಿದ ‘ ಈ ಕೃತಿಯಲ್ಲಿ ಮಗುವಿನ ಮನಸ್ಥಿತಿಯ ದಾರ್ಶನಿಕ ನೋಟವೂ ಇದೆ ‘ ಎಂದಿದ್ದು ಕೃತಿ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿತು.
ದೊಡ್ಡ ಸಭಾಂಗಣ ಆಸಕ್ತರಿಂದ ತುಂಬಿತ್ತು. ಇದು ಕೃತಿಕಾರರ ಜನಪ್ರಿಯತೆ ತೋರಿಸುವುದರೊಂದಿಗೆ ಕೃತಿಗಳ ಕುರಿತು ಓದುಗರಿಗೆ ಇರುವ ಕುತೂಹಲವನ್ನೂ ಸಾಂಕೇತಿಸುತ್ತಿತ್ತು

 

‍ಲೇಖಕರು G

April 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. kvtirumalesh

    Priya Mohan
    Nimma aatmakathana prakatavaaddakke duurada Arabiyadinda abhinandanegalu!
    kvtirumalesh

    ಪ್ರತಿಕ್ರಿಯೆ
  2. D.RAVIVARMA

    mohan sir nimma karykramakke baralagalilla nanna manasantu nimma sabhangana sututtale ittu coverpage pustke bagge viveka rai suresh matugalu odide,nange sanna help madi pustaka v,p,p kaliso vyavaste madi nimma mattu jogi pustaka turantagi odabekagide bangalore geleyarige helidre kalisodakke tingalu madthare,astu kala tadeyoke agalla,omme hospet ge banni nimmodane samvada hagu nimma ella pustike pradarshana hammikollana hampi yalli ondu sundaravada sanje kaleyona ondistu kavya ondistu wine ondistu hadu iruttade yavaga bartira heli

    ಪ್ರತಿಕ್ರಿಯೆ
  3. vageesh

    Dear Sir,
    Nimma Athma Kathanadalli, ‘ELLAVOO IDE'(samakshamadalli helalarddu kooda) antha thilithene. Ankithadalli sigutta ee book?

    ಪ್ರತಿಕ್ರಿಯೆ
  4. vageesh kumar g a

    Dear Sir,

    Nimma Athma kathanadalli ELLAVOO UNTU (Samakshamadalli Helalaarada kelavu Dharma sankata)antha thilitene. Ankithadalli sigutta e book?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: