‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಸೋಮಾರಿ ಕಟ್ಟೆ

ಇವತ್ತಿನ ಆಯ್ಕೆ: ಸೋಮಾರಿ ಕಟ್ಟೆ

ಸೋಮಾರಿ ಕಟ್ಟೆ ಅಂತ ಒಂದು ಬ್ಲಾಗು. ಅದರ ರೂವಾರಿ ಶಂಕರ ಪ್ರಸಾದ್ ಅಲಿಯಾಸ್ ಕಟ್ಟೆ ಶಂಕ್ರು ಅಲಿಯಾಸ್ ಸೋಮಾರಿ ಶಂಕ್ರಣ್ಣ. ಈ ಮನುಷ್ಯನ ಕೈಯಲ್ಲಿ ಯಾವಾಗಲೂ ಒಂದು ಮೊಬೈಲು. ಆ ಮೊಬೈಲಿಗೆ ಒಂದು ಕೆಮೆರಾ. ಮನೆಯಿಂದ ಆಫೀಸಿಗೆ ಹೋಗಬೇಕಾದ್ರೆ, ಆಫೀಸಿಂದ ಮನೆಗೆ ಬರ್ಬೇಕಾದ್ರೆ ಅಥ್ವಾ ಹೆಂಡತಿ ಜೊತೆ ಶಾಪಿಂಗ್‌ಗೆ ಹೋಗ್ಬೇಕಾದ್ರೆ, ಹೀಗೆ ಸದಾ ಕಾಲ ಆ ಮೊಬೈಲಿನ ಕೆಮೆರಾ ಫೋಟೋ ತೆಗೀಲಿಕ್ಕೆ ಕಾಯ್ತಾ ಇರತ್ತೆ. ರಸ್ತೆಯಲ್ಲಿ ಒಂದು ಹಳದಿ ಬಣ್ಣದ ಸೀರೆಯುಟ್ಟ ಕಪ್ಪು ಆಟೋ ಪಾಸಾದದ್ದು ಕಂಡಿತೋ, ತಕ್ಷಣ ಈ ಕ್ಯಾಮೆರಾ ಅಲರ್ಟ್ ಆಗುತ್ತೆ. ಆ ಆಟೋದ ಹಿಂದೆ ಏನು ಬರೆದುಕೊಂಡಿದೆ ಅಂತ ಗಮನಿಸುತ್ತೆ. ಏನಾದ್ರೂ ಆಣಿಮುತ್ತಿನಂತಹ ಮಜಾ ವಾಕ್ಯ ಬರ್ಕೊಂಡಿರೋದು ಕಾಣಿಸ್ತೋ, ತಕ್ಷಣ ಇದು ಕ್ಲಿಕ್ ಆಗುತ್ತೆ! ನಂತರ ಹಾಗೆ ಕ್ಲಿಕ್ ಆದ ಫೋಟೋ, ಮೊಬೈಲಿನ ಮೆಮೋರಿ ಕಾರ್ಡಿನಿಂದ ಶಂಕರರ ಲ್ಯಾಪ್‌ಟಾಪಿಗೆ ಬರುತ್ತೆ. ಲ್ಯಾಪ್‌ಟಾಪಿನಿಂದ ಸೋಮಾರಿ ಕಟ್ಟೆ ಬ್ಲಾಗಿಗೆ!

ಇಂತಹ ಪ್ರಕ್ರಿಯೆಗೆ ಒಳಗಾಗಿ ಬೆಂಗಳೂರಿನ ಅದೆಷ್ಟೋ ಆಟೋಗಳು ಈ ಬ್ಲಾಗಿನಲ್ಲಿ ತಮ್ಮ ಬೆನ್ನಿನ ಪ್ರದರ್ಶನ ಕೊಟ್ಟಿವೆ. ನಮ್ಮ ಬ್ಯುಸಿಯ ದಿನಗಳ, ಸೀರಿಯಸ್ ಡಿಸ್ಕಷನ್ನುಗಳ ನಡುವೆ ಒಂದು ಕ್ಷಣ ರಿಲಾಕ್ಸ್ ಆಗಲಿಕ್ಕೆ, ಸಣ್ಣ ನಗೆ ಚಿಮ್ಮಿಸಲಿಕ್ಕೆ ಇಲ್ಲಿಯ ಪೋಸ್ಟುಗಳು ನೆರವಾಗಿವೆ. ಇಷ್ಟಕ್ಕೂ ಸೋಮಾರಿ ಕಟ್ಟೆ ಇರುವುದಾದರೂ ಯಾತಕ್ಕೆ? ಶಂಕರ್ ಪ್ರಕಾರ, “ಬೇಕಾದ್ದು-ಬೇಡದ್ದು ಮಾತಾಡೋಕ್ಕೆ, ಟೈಂಪಾಸ್ ಮಾಡಕ್ಕೆ.”  ಹವ್ಯಾಸಕ್ಕೆಂಬಂತೆ ಶಂಕರ ಪ್ರಸಾದ್ ಕ್ಲಿಕ್ಕಿಸುತ್ತ ಬಂದಿರುವ ಈ ಆಟೋ-ಫೋಟೋಗಳ ಸಂಖ್ಯೆ ಈಗ ಸೆಂಚುರಿ ಮೀರಿ ಮುಂದುವರೆಯುತ್ತಿದೆ. ಅಭಿನಂದನೆಗಳು ಶಂಕ್ರಣ್ಣಾ..!

-‘ಅವಧಿ’ಗಾಗಿ  ಸುಶ್ರುತ ದೊಡ್ಡೇರಿ  

* * *

ಶಂಕರ ಪ್ರಸಾದ್:

ಮೂಲತಃ ಮೈಸೂರು, ಓದಿದ್ದು ಮೈಸೂರು ಹಾಗು ಹೈದ್ರಬಾದು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಒಂದು ಏರೋಸ್ಪೇಸ್ ಕಂಪೆನಿಯಲ್ಲಿ ಡಿಜೈನ್ ಎಂಜಿನಿಯರ್ ಆಗಿ ಕಾಯಕ. ಕನ್ನಡವೆಂದರೆ ಅಪಾರ ಅಭಿಮಾನ, ಗೌರವ, ಹೆಮ್ಮೆ. ಮನಸ್ಸಿನ ತುಡಿತ, ಮಿಡಿತ ತೀರಿಸಿಕೊಳ್ಳೋಕ್ಕೆ ಬ್ಲಾಗ್ ಮಾಡ್ತೀನಿ. ಪ್ರವಾಸ, ಸಂಗೀತ, ಇಂಟರ್ನೆಟ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡೋದು ನನ್ನ ಹವ್ಯಾಸಗಳು.

* * *
ಸ್ಯಾಂಪಲ್ ಪೋಸ್ಟ್:

ಕಳೆದ ವಾರ ನನ್ನಾಕೆಯ ಜೊತೆ ಎಂ.ಜಿ. ರಸ್ತೆಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ, ಹಲಸೂರಿನ ಲಿಡೋ ಮಾಲ್ ಎದುರು ಕಂದ ಆಟೋ ಇದು. ಕಂಡ ಕೂಡಲೇ ಬೈಕನ್ನು ಸೈಡಿಗೆ ಹಾಕಿದೆ, ತಕ್ಷಣ ನನ್ನಾಕೆ “ಗೊತ್ತಾಯ್ತು, ಅಷ್ಟೊಂದು ಎಕ್ಸೈಟ್ ಆಗೋದು ಬೇಡಾ, ಆ ಆಟೋ ಇಲ್ಲೇ ನಿಲ್ತಾ ಇದೆ, ಆರಾಮಾಗಿ ಫೋಟೋ ತೆಗೀಬೋದು” ಎಂದಳು. ನನ್ನ ಈ ಹುಚ್ಚನ್ನು ಸರಿಯಾಗಿ ಅರ್ಥ ಮಾಡ್ಕೊಂಡು ಒಪ್ಕೊಂಡಿದಾಳೆ ಅಂದ್ಕೊಂಡು ನಗುತ್ತಾ ಫೋಟೋ ತೆಕ್ಕೊಂಡೆ.

ದುಡ್ಡಿನ ಹಿಂದೆ ಹೋಗಿ ಮನುಷ್ಯತ್ವ ಮರೆವ ಜನರಿಗೆ ಈ ಆಟೋ ಅಣ್ಣ ಹೇಳೋ ಪಾಠ ಅರ್ಥ ಆಗಲಿ.

“ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ”

* * *

ನೂರೊಂದು ಆಣಿಮುತ್ತುಗಳಿಗೆ ಲಿಂಕು: ಆಟೋ ಆಣಿಮುತ್ತುಗಳು

 

 

‍ಲೇಖಕರು G

April 18, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

೧ ಪ್ರತಿಕ್ರಿಯೆ

  1. D.RAVIVARMA

    priya shankar nimma concept hagu olagannu tumba samvedanasheelavagide,infact hospet hampi yalli bahalastu autogala mele bahalastu heart touching barahagalannu nodiddene,photo tagediddene but adannu barahakke ilisilla muttu kottavaligagi tuttu kottavala mareya beda heege bahala attyma barahagalannu nodiddene but nimma barAHA excellent shubhavagali D.RAVI VARMA HOSPET

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: