ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಸಲಿಗೆ ಪಾವಿತ್ರ್ಯತೆ ಎಂದರೇನು?

ಮೂಲ: ಮೆರ್ಸಿ ಮಾರ್ಗರೇಟ್‌
ಕನ್ನಡಕ್ಕೆ: ಶಿವಕುಮಾರ್‌ ಕಂಪ್ಲಿ

ಈ ನಡುವೆ, ನನ್ನ ದೇಹದೊಳಗಿಂದ ಒಂದು ನದಿ ಹುಟ್ಟಿ ಬಂದಿದೆ
ಒಂದು ಕಾಡು
ನನ್ನ ದೇಹ ಮಂಡಲವನ್ನೆಲ್ಲಾ ಮೆಲ್ಲಗೆ ಆಕ್ರಮಿಸುತ್ತಿದೆ

ಕೆಂಪು ರಕ್ತವನ್ನು ಮಾಯದಲ್ಲಿ ಹೊತ್ತು ಹೊರಟ ನದಿ
ಎಷ್ಟು ಪವಿತ್ರವಾದುದೋ ನನಗೂ ತಿಳಿಯದು
ನನಗೆ ಪೂಜೆ ಮಾಡುವುದು
ಪ್ರಾರ್ಥನೆ ಮಾಡುವುದು ಹೇಗೋ ಇನ್ನೂ ಪೂರ್ತಿಯಾಗಿ ಬರದು

ಕೆಂಪಾದ ಪ್ರತಿಯೊಂದು
ಯಾವುದೋ ಒಂದು ಪವಿತ್ರತೆಯನ್ನು
ಹೊತ್ತು ಹೋಗುತ್ತವಾ? ಆದರೆ
ವಿಶ್ವವೆಲ್ಲಾ ಪವಿತ್ರ ಬಣ್ಣದೊಳಗೇನೇ ಇರಬೇಕಲ್ಲವೇ?
ಅಸಲು ಪವಿತ್ರತೆ ಅಂದರೆ ಏನು?

ಕೆಂಪು ಮರಗಳು
ಅವಕ್ಕೆ ಕೆಂಪನೆ ಎಲೆಗಳು
ಕೆಂಪು ಮುಗಿಲು
ಅದರೊಳಗೆ ಹೊಳೆವ ಕೆಂಪು ನಕ್ಷತ್ರಗಳು
ಕೆಂಪನೆಯ ಹಕ್ಕಿಗಳು
ಅವುಗಳ ಕೆಂಪು ರೆಕ್ಕೆಗಳು
ಕೆಂಪು ಭೂಮಿ
ಅದರ ಕೆಂಪು ಬೆಳೆ
ಕೆಂಪಾದ ಬೆಟ್ಟಗಳು
ಅವುಗಳ ಮೇಲೆ ಕೆಂಪು ಜಲಪಾತಗಳು
ಎತ್ತ ನೋಡಿದರೂ
ದೇಹ ಮಂಡಲವೆಲ್ಲಾ ಕೆಂಪುಮಯ
ಆಗುತ್ತಲೇ ಇದೆ

ಯಾವ ಬಣ್ಣಗಳೂ
ಈ ನಡುವೆ ಅಂದವಾಗಿ ಕಾಣಿಸುತ್ತಿಲ್ಲ
ಕೇವಲ
ಜೀವಬಣ್ಣ ಮಾತ್ರ ನನ್ನನ್ನು ಮಣ್ಣಿನ ಹಾಗೆ
ಹೊದ್ದುಕೊಳ್ಳುತ್ತದೆ

ಯಾವುದೋ ಒಂದು ದಿನ
ಎಲ್ಲೋ ಆಕಾಶದೊಳಗಿಂದ ನಾನು ಕೆಂಪು ಚೂರಾಗಿ
ಹುಟ್ಟುತ್ತೇನೆ
ನನಗೆ
ಒಂದು ಸುಂದರ ಹೆಸರಿಡುವುದನ್ನು ಮಾತ್ರ ಮರೆಯಬೇಡ.

‍ಲೇಖಕರು Admin

13 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading