ಗುಲ್ಜಾರ್
ಕನ್ನಡಕ್ಕೆ: ಚಿದಂಬರ ನರೇಂದ್ರ
ಸರಿಯಾಗಿ ನೆನಪಿಲ್ಲ,
ಫ್ರಾನ್ಸ್ ಲ್ಲಿ ನೋಡಿದ್ದು.
Bordeaux ಹತ್ತಿರ ಇರಬೇಕು.
ಅಲ್ಲಿ, ಸ್ವಲ್ಪ ಹೊತ್ತು ತಂಗಿದ್ದೆವು.
ಅದೊಂದು ಚಿಕ್ಕ ಹಳ್ಳಿ,
ಊರ ತುದಿಯಲ್ಲೊಂದು ಕಟ್ಟಿಗೆಯ ಚರ್ಚು,
ಒಳಗೆ, ವೇದಿಕೆಯ ಮುಂದೆ ಒಂದು ಬೆಂಚು.
ಬಹುಶಃ ಒಂದೇ ಒಂದು.
ಅಲ್ಲೊಂದು ಕುರಿ ಮರಿ ಹಿಡಿದುಕೊಂಡ
ಏಸುವಿನ ಕಟ್ಟಿಗೆಯ ಮೂರ್ತಿ.
ಜನ ಹಚ್ಚಿಟ್ಟ ಮೇಣದ ಬತ್ತಿಗಳಿಂದಾಗಿ
ಪಾದಗಳು ಕಪ್ಪಾಗಿದ್ದವು
ಮೇಣದಲ್ಲಿ ಹೂತು ಹೋಗಿದ್ದವು.
ಅವನ ದೇಹದ ಮೇಲೆ
ಅಲ್ಲಲ್ಲಿ ಮೊಳೆಗಳಿದ್ದವು.
ಜೋತಾಡುತ್ತಿದ್ದ ಭುಜದ ಬಳಿ ಒಂದು,
ಇನ್ನೊಂದು ಬಿಚ್ಚಿಕೊಂಡಿದ್ದ ಬಟ್ಟೆಯ ಮೇಲೆ
ಕುರಿ ಮರಿಯ ಕಾಲು ಸೇರಿಸಿಯೇ,
ಮತ್ತೊಂದು ಮೊಣಕೈ ಹತ್ತಿರ
ಮುರಿದಿದ್ದ ಕಟ್ಟಿಗೆಯ ಮೇಲೆ.
ಬಹುಶಃ ಬಿದ್ದಾಗ ಮುರಿದಿರಬೇಕು ….
ಇಲ್ಲಾ ಸ್ವಚ್ಛ ಮಾಡುವಾಗ.
0 ಪ್ರತಿಕ್ರಿಯೆಗಳು