ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’’ಅಳುವಾ ಯೋಗಿಯ ನೋಡಿಲ್ಲಿ…

226350_201367516568520_4214094_n

ಹನುಮೇಶ್ ಮಳಗಿ

11

ನೇಗಿಲ ಹಿಡಿದು ಬತ್ತಿದಾ ಹೊಲದೊಳು
ಅಳುವಾ ಯೋಗಿಯ ನೋಡಿಲ್ಲೀ
ಪೂಜೆಯ ಫಲವು ಸಾಲದ ಹೊರೆಯು
ಉರುಳೇ ಇಹಪರ ಸಾಧನವು
ದುಡಿದಾ ಅನ್ನವೇ ಕಷ್ಟಕೆ ಭಾಗೀ
ಸೃಷ್ಟಿ ನಿಯಮವೆ ಅವನಿಗೆೆ ನೇಣಾಗಿ
ಲೋಕದೊಳೆಲ್ಲವು ನಡೆಯುತಲಿರಲಿ
ತನ್ನೀ ಕಾರ್ಯಕೆ ವಿಘ್ನಗಳೆನಿತು
ರಾಜರು ಮೆರೆಯಲಿ ಭೋಗದಿ ಮುಳುಗಲಿ
ನೇಗಿಲ ಗುದ್ದಲೀ ಸೌಧದಲೀ
ಮುತ್ತಿಗೆ ಹಾಕಲಿ ಕೀಟಗಳೆಲ್ಲಾ
ಬಿತ್ತಿಯು ಅಳುವಿಗೆ ಬಿಡುಗಡೆ ಇಲ್ಲ
ಮುಳುಗಿತು ನಮ್ಮೀ ವೈಚಾರಿಕತೆಯು
ಮಣ್ಣಿನ ಯೋಗಿಯ ಆಶ್ರಮದೀ
ನೇಗಿಲ ಹಿಡಿದಾ ಕೈಸೋತಿರುವಲ್ಲಿ
ನೇಗಿಲ ಹಿಡಿದಾ ಕೈಯೊಡ್ಡಿದೆಯಿಲ್ಲಿ
ದೊರೆಗಳ ದರ್ಪವು ಮೀರಿರುವಲ್ಲಿ
ನೇಗಿಲ ಬಲದಲಿ ರಾಜರು ಮೆರೆದರು
ಗುಂಡುಗಳೆಸೆದರು ಕತ್ತನು ತರಿದರು
ಏನೂ ಅರಿಯದಾ ಯೋಗಿಯು ಮುಲುಗುತ ತಾನು
ಲೋಕಕೆ ಅನ್ನವ ನೀಡುತ ಮಿಡಿದಿಹನು
ಅವನಾ ಹೆಸರಲಿ ಬಲಿತಿಹ ನಾಯಕ
ಯೋಗಿಯು ನಡೆಸಿಹ ನಿಸ್ಪ್ರಹ ಕಾಯಕ
ನೇಗಿಲು ಆಗೆ ಕುಣಿಕೆಯ ಕರ್ಮ
ಯೋಗಿಯ ಗೋರಿಯ ಮೇಲಿದೆ ಧರ್ಮ
ಅಳುವಾ ಯೋಗಿಯ ನೋಡಿಲ್ಲೀ…
(ಮಾನ್ಯ ಕುವೆಂಪುರವರ ಕ್ಷಮೆ ಕೋರಿ)

‍ಲೇಖಕರು G

13 August, 2015

3 Comments

  1. ಅಕ್ಕಿಮಂಗಲ ಮಂಜುನಾಥ

    ಹಾಡು ಕಣ್ಣೀರು ಬರಿಸಿತು.

  2. Jayaram

    ಕವಿತೆ ಚೆನ್ನಾಗಿದೆ. ಇಲ್ಲಿ ಬಳಸಿದ ಫೋಟೋ ತರಹ ಪತ್ರಿಕೆಗಳಲ್ಲೂ ಬರಡು ನೆಲದ ಮೇಲೆ ನಿಂತು ಅಗಸ ನೋಡುವ ರೈತನ ಫೋಟೋಗಳು ಬರುತ್ತವೆ. ಯಾಕೋ ಸ್ವಲ್ಪ ಕೆಟ್ಟದೆನಿಸ್ತಾ ಇದೆ.

  3. mmshaik

    sakaalika kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading