ತೀರ್ಥಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್ ಸಿ ಸುಮಿತ್ರಾ

11825116_1723176184580182_4191663017840949987_n
ತೀರ್ಥಹಳ್ಳಿ ತಾಲೂಕು ಐದನೇ ತಾಲೂಕು ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ನಮ್ಮೆಲ್ಲರ ಪ್ರೀತಿಯ ಉಪನ್ಯಾಸಕಿ ಶ್ರೀಮತಿ ಎಲ್. ಸಿ ಸುಮಿತ್ರಾರವರು ಆಯ್ಕೆಯಾಗಿದ್ದಾರೆ,ಕಳೆದ ಮುವತ್ತು ವರ್ಷಗಳಿಂದ ತುಂಗಾ ಪದವಿ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ಸುಮಿತ್ರಾರವರು ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯವನ್ನು ಅತ್ಯಂತ ಗಂಭೀರವಾಗಿ ಬೋಧಿಸುತ್ಥಾ ಬಂದಿದ್ಧಾರೆ. ಮಾತು ಕಡಿಮೆಯಲ್ಲಿ ಮಹತ್ತಾದುದನ್ನು ಸಾಧಿಸುವ ಬರವಣಿಗೆಯ ಛಲ ವಿಮರ್ಶಕರ ವಲಯದಲ್ಲಿ ಭದ್ರ ಸ್ಥಾನ ಕಲ್ಪಿಸಿದೆ.ವಿಭಾವ,ನಿರುಕ್ತ,ಕಾಡು ಕಡಲು(ವಿಮರ್ಶಾ ಸಂಕಲನಗಳು)ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ( ಕತಾ ಸಂಕಲನ)ಹೂ ಹಸಿರಿನ ಮಾತು(ಪರಿಸರ ಕಥನ)ಬಕುಲದ ದಾರಿ (ಕವಿತೆಗಳು)ಪಿಂಜರ್ (ಅಮೃತಾ ಪ್ರೀತಮ್ ಕಾದಂಬರಿಯ ಅನನುವಾದ) ಇವರ ಕೃತಿಗಳು.ಬಕುಲದ ದಾರಿ ಕವಿತಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ನೀಲಗಂಗಾ ದತ್ತಿ ಪ್ರಶಸ್ತಿ,ನಿರುಕ್ತಕ್ಕೆ ಧಾರವಾಡ ಕರ್ನಾಟಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ,ಪಿಂಜರ್ ಅನುವಾದಕ್ಕೆ ಕರ್ನಾಟಕ ಲೇಖಕಿಯರ ಸಂಘದ “ಎಚ್ .ವಿ ಸಾವಿತ್ರಮ್ಮ ಸ್ಮಾರಕ ಪ್ರಶಸ್ತಿ’ಮತ್ತು ಶಿವಮೊಗ್ಗ ಕರ್ನಾಟಕ ಲೇಖಕಿಯರ ಸಂಘದ ಎಸ್.ವಿ ಪರಮೇಶ್ವರ ಭಟ್ಟ ಪ್ರಶಸ್ತಿಗಳು ದೊರಕಿವೆ.
ಅಗಾಧ ಅಧ್ಯಯನ ಶೀಲತೆಯ ಸುಮಿತ್ರಾರವರು ಇದೀಗತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‍ಲೇಖಕರು G

August 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Puttaswamy

    ಸಹಜ ಾಯ್ಕೆ. ಅಭಿನಂದನೆಗಳು. ಸಮಾರಂಭಕ್ಕೆ ಶುಭಾಶಯಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: