ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಪಣಾ ಮೂರ್ತಿ ಬರೆದ ಹಾಯ್ಕುಗಳು

 ಅರ್ಪಣಾ ಮೂರ್ತಿ

ಮುಂಜಾವು

ಅರಸುವಂತೆ,
ನಡುವಲ್ಲಿ
ಮುಖ ಮರೆಸುವಂತೆ
ಮಾಡುವ
ಬಿಸಿಲಿಗಿಲ್ಲಿ ಎರಡು ಮುಖ.

ಹರಿವ ನದಿಗಳಿಗೆಲ್ಲ
ಹೆಜ್ಜೆ ಗುರುತುಗಳಿಲ್ಲ,
ಕುರುಹುಗಳೇ ಇರದ
ಗುಪ್ತಗಾಮಿನಿಯರು
ಹರಿಯುತ್ತಲೇ ಇದ್ದಾರೆ
ಈಗಲೂ.

ಹೊಸಕಿದ ಹೂವುಗಳೆಲ್ಲ
ಸುಗಂಧ ಪಸರಿಸುವುದಿಲ್ಲ,
ಒಂದೊಮ್ಮೆ
ಉಸಿರುಗಟ್ಟಿಸಲೂ ಬಹುದು.

ನೆರಳು
ಬೆನ್ನಿಗಂಟಿಕೊಂಡಿರುವುದು
ಭ್ರಮೆ,
ನಡು ಹೊತ್ತಿನಲಿ
ನೆರಳು ನುಂಗಿದ ಬೆಳಕಷ್ಟೆ
ವಾಸ್ತವ…

‍ಲೇಖಕರು nalike

26 July, 2020

3 Comments

  1. Vasundhara k m

    ಸರಳವೆನಿಸಿದರೂ ಗಾಢವಾದ ಭಾವಗಳಲ್ಲಿರುವ ಗಟ್ಟಿ ಸಾಲುಗಳು.. ಚೆಂದವಿದೆ

  2. Rajgopal

    Super

  3. ನೂರ್ ಸಾಘರ್

    ನೈಸ್..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading