ಅಪ್ಪನ ಬಗ್ಗೆ ಮಗಳು ಬರೆದದ್ದು………….

ಸಿದ್ದರಾಮ ಕೂಡ್ಲಿಗಿ

ಈ ಕೆಳಗೆ ಪ್ರಕಟಿಸಿರುವ ಬರಹ ಇದು ನನ್ನ ಮಗಳು ಮೊನ್ನೆತಾನೆ ನನ್ನನ್ನು ನೆನಸಿಕೊಂಡು ಬರೆದ ಮನದಾಳದ ಭಾವ. ಹೀಗಾಗಿ ಸಹಜವಾಗಿಯೇ ನನಗೆ ಇದು ಇಷ್ಟ ಆಯ್ತು. ನನ್ನ ಕಣ್ಣುಗಳು ತುಂಬಿ ಬಂದವು.

ಆದರೆ ಈ ಭಾವದಲ್ಲಿ ಜಗತ್ತಿನಲ್ಲಿರುವ ಎಲ್ಲ ಹೆಣ್ಣುಮಕ್ಕಳೂ ತಮ್ಮ ತಂದೆಯ ಬಗ್ಗೆ ಯಾವ ಭಾವವನ್ನು ಇಟ್ಟೂಕೊಂಡಿರುತ್ತಾರೆ ಎಂಬುದೂ ಅಡಗಿದೆ. ಕೆಲವರಿಗೆ ಅದನ್ನು ಹೇಳಿಕೊಳ್ಳಲಾಗದಿದ್ದರೂ ಮನಸಿನಲ್ಲಂತೂ ಅವರ ಅಪ್ಪ ಶಾಶ್ವತವಾಗಿ ದಾಖಲಾಗಿಬಿಟ್ಟಿರುತ್ತಾನೆ. ಅಂತಹ ನವಿರಾದ ಭಾವ ಹೆಣ್ಣುಮಕ್ಕಳದು.

ಹೀಗಾಗಿ ಇದು ಎಲ್ಲ ಹೆಣ್ಣುಮಕ್ಕಳು ತಮ್ಮ ತಂದೆಯ ಬಗ್ಗೆ ಅಂದುಕೊಂಡ ಭಾವ ಎಂದೇ ತಿಳಿದಿರುವೆ. ಅದಕ್ಕಾಗಿಯೇ ಇಲ್ಲಿ ಇದನ್ನು ಪೋಸ್ಟ್ ಮಾಡುತ್ತಿರುವೆನೇ ಹೊರತು ಅವಳು ನನ್ನನ್ನು ಕುರಿತು ಹೊಗಳಿದ್ದಾಳಂತಲ್ಲ. ಏನೇ ಇರಲಿ ಒಮ್ಮೆ ಓದಿ ನೋಡಿ. ಅವಳು ಬರೆದದ್ದನ್ನೇ ಇಲ್ಲಿ ಯಥಾವತ್ತಾಗಿ ಪ್ರಕಟಿಸಿರುವೆ.

ಅಪ್ಪಾ ಐ ಲವ್ ಯೂ ಪಾ……….

ಅಪೂರ್ವ ಹಿರೇಮಠ

ಅಪ್ಪಾಜಿ ಭಾಳ ನೆನಪಾಗಕತ್ತಾರ. ಯಾಕಂದ್ರ ನಾ ನಡಕೊಂಡ ಯಾವುದಕ್ಕೂ ” ನೀ ಹಂಗ, ನೀ ಹಿಂಗ ” ಅಂತ ಬೈದಿಲ್ಲ. ಎಲ್ಲದಕ್ಕೂ ” ನೀ ಛೊಲೋ ಅದಿ, ಹಿಂಗ್ ಮಾಡು ಇನ್ನು ಛೊಲೋ ಇರತ್ತ ” ಅಂತಾರ.

ಪರೀಕ್ಷೆ ಇದ್ದಾಗ್ಲೂ ಸೈತ ಪುಸ್ತಕ ಮುಂದಿಟ್ಕೊಂಡ್ ಟಿವಿ ನೋಡ್ಕೋತ ಓದ್ತಿದ್ದೆ. ಯಾವಾಗೂ ನೀ ಹೀಂಗ್ ಓದಬ್ಯಾಡ ಅಂದಿಲ್ಲ. ಅವ್ರಿಗೆ ನನ್ ಮ್ಯಾಲೆ ಇರೋ ಪ್ರೀತೀನೋ, ಭರೋಸಾನೋ ಗೊತ್ತಿಲ್ಲ. ನಾ ಹೆಂಗ್ ಅಂತ ನನಕೂ ಅವ್ರಿಗೆ ನನ್ ಬಗ್ಗೆ ಭಾಳ ಗೊತ್ತು. ನಾ ಸ್ವಲ್ಪ್ ಸಣ್ಣ ಮಾತಾಡಿದ್ರೂ, ಒದರಾಡಿದ್ರೂ, ಯಾವ್ದೋ ಒಂದ್ ವಿಷಯಕ್ ಹೀಂಗ್ ಮಾಡಕತ್ತಾಳ ಅಂತ ತಿಳಕೊಂಡು ಸಮಾಧಾನ ಮಾಡ್ತಾರ. ಅದ್ಕ ಅವ್ರು ಎಲ್ಲಾರ್ಗಿಂತ ಬ್ಯಾರೇನೆ ಅದಾರ.

ಎಲ್ಲ ಮಕ್ಕಳಿಗೂ ಅವ್ರ ಅಪ್ಪಂದಿರು ಶ್ರೇಷ್ಠ, ಆದ್ರ ಅದ್ರಾಗ ಅಪರಂಜಿ ಅಂತ ಸಿಗೋದು ಕಡ್ಮಿ. ಇದನ್ ಯಾಕ್ ಹೇಳ್ತೀನಂದ್ರ, ಬರೀ ಅಪ್ಪನ್ ಸ್ಥಾನ ನಿಭಾಯ್ಸಿದ್ರ ಸಿಗುದಲ್ಲ. ಅಲ್ಲಿ ತಾಯಿ, ಸ್ನೇಹಿತ, ಹಿತೈಷಿ ಹೀಂಗ ಸಂದರ್ಭಕ್ ತಕ್ಕಂಗ ಬ್ಯಾರೆ ಬ್ಯಾರೆ ಪಾತ್ರ ನಿಭಾಯ್ಸೋದು ನಿಜವಾಗ್ಲೂ ಕಷ್ಟ.

ಬಹಳಷ್ಟ್ ಮಂದಿ ತಂದಿಯಾಗಿ ಇರ್ತಾರ, ಆದ್ರ ತಾಯಿಯಾಗೂದ್ರಾಗ, ಒಬ್ಬ ಸ್ನೇಹಿತ ಆಗುದ್ರಾಗ ಸೋಲ್ತಾರ. ತಂದಿಯಾದಾಗ ಬರೀ ಅಧಿಕಾರ, ನಾ ಇವ್ರಿಗಿಂತ ಬ್ಯಾರೆ, ದೊಡ್ಡೋನು ಅನ್ನೋ ವಿವೇಚನೆ ಇರ್ತದೆ ಹೊರತು, ಸ್ನೇಹಿತ ಆಗಿ ಇರೊವಂತ ಆತ್ಮೀಯತೆ ಸಿಗೋದು ಕಷ್ಟ. ಸ್ನೇಹಿತ ಆದಾಗ ಅಲ್ಲಿ ತಮ್ಮ ವಯಸ್ಸಿನ ಅಂತರ ಮರ್ತು, ನಮ್ಮ ವಯಸ್ಸಿಗೆ ತಕ್ಕಂಗ್ ಸ್ಪಂದಿಸೋ ಗುಣ ಇರ್ಬೇಕಾಗ್ತದ. ಹೀಂಗ್ ಇರೋದು ಭಾಳ ಕಡಿಮಿ. ವಯಸ್ಸಿಗೆ ಬಂದ ನಂತರ ಮಕ್ಕಳ ಜೊತೀಗೆ ತಂದೆಯಾಗಿ ಆ ವಯಸ್ಸಿನೋರಾಗಿ ಮಕ್ಕಳ ವಯಸ್ಸಿಗೆ ತಕ್ಕಂಗ ಅವರ ಭಾವನೆಗಳನ್ನ ತಿಳ್ಕೊಳ್ಳೋದು ದೊಡ್ಡ ಸವಾಲೇ ಸರಿ.

ಎಲ್ಲಾದ್ಕೂ ನಿರ್ಬಂಧ ಹೇರೋರೇ ಹೆಚ್ಚಾಗಿ ಇರ್ಬೇಕಾದಾಗ, ಆತ್ಮೀಯತೆ, ಪ್ರೀತಿಯಿಂದಿರೋರು ಸಿದೋದು ಕಡಿಮಿ.

ನನ್ನ ಅಪ್ಪ ಹೀಂಗ್ ಇರೋದರಿಂದಾನೇ ನನಗ ಅವರ ಎತ್ತರಕ್ಕ, ಪ್ರೀತಿಗೆ, ಆತ್ಮೀಯತೆಗೆ ತೂಗುವ ಮತ್ತೊಬ್ಬ ವ್ಯಕ್ತಿ ಜಗತ್ತಿನ್ಯಾಗಿಲ್ಲ ಅನ್ಸೋದು. ಸ್ವತ: ತಾಯಿ ಸೈತ ಅವರಷ್ಟು ಪ್ರೀತಿಸಲಾರಳು ಅಥವಾ ನನ್ನೊಳಗ, ನನ್ ವ್ಯಕ್ತಿತ್ವದಾಗ ಅವರದ ಛಾಯೆ ಹೆಚ್ಚಾಗಿ ಇರೋದರಿಂದ ನನಗ ಹಂಗ ಅನಸ್ತೈತೋ ಏನೋ ಗೊತ್ತಿಲ್ಲ.

ಅಪ್ಪಾ ಐ ಲವ್ ಯೂ ಪಾ…………….

‍ಲೇಖಕರು Avadhi

January 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: