ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೇ ಸೆಮೆನಾರಿನ ಆ ಬದಿಯಲ್ಲಿ ಕೂತು..

ಮುದುಕಿ ಮತ್ತು ಅವನು

sandeep eshanya

ಸಂದೀಪ್ ಈಶಾನ್ಯ

ವೃದ್ಧಾಶ್ರಮಕೊಂದು ಅರ್ಜಿ ಬರೆದುಕೊಡಿ ಎಂದು
ಬೀದಿ ಬೀದಿ ಅಲೆಯುವ ಮುದುಕಿಯ ಕಣ್ಣುಗಳಲ್ಲಿ
ಭೂತ ವರ್ತಮಾನ ಭವಿಷ್ಯವಿಲ್ಲ
ಅವಳ ಸುಕ್ಕುಗಟ್ಟಿದ ಮುಖದಲ್ಲಿ
ಅದೆಷ್ಟೋ ದಶಕಗಳಿಂದ
ಅನುಭವಿಸಿದ ದಿವ್ಯ ಅನುಭೂತಿಯಂತ
ನಾಚಿಕೆ ಕೋಪ ಅಸೂಯೆ ಪೋಲಿತನ
ಆಗೊಮ್ಮೆ ಈಗೊಮ್ಮೆ ಸುರಿಸಿದ ಕಣ್ಣೀರಿನ ಕಲೆಯಿದೆ
ಈಗ ಅದೆಲ್ಲಾ ಬಿಟ್ಟು ಒಂದೇ ಒಂದು ಖಾಲಿ ಅರ್ಜಿ ಹಿಡಿದು ತಿರುಗುತ್ತಿರುವ
she1ಈ ಮುದುಕಿಗೆ
ಮಧ್ಯಾಹ್ನದ ಬಿಸಿಯೂಟದ ಹೊತ್ತಿಗೆ
ಮಾಸ್ತರಿಗೆ ಕಲ್ಲುಹೊಡೆದು
ಪಾಟಿ ಚೀಲ ಎಸೆದು ಬಂದ
ಊರಿನ ತುಂಟ ಹುಡುಗನಾದರು
ಅರ್ಜಿ ಬರೆದುಕೊಡುವನೆಂದು
ಕಾಯುತ್ತಿದ್ದಾಳೆ
ಮುದುಕಿಯ ಕಣ್ಣುಗಳಲ್ಲಿ
ಕಾತುರವಿದೆ
ಆದರೆ
ನಾಳೆಯ ಕನಸಿಲ್ಲ
ದಶಕಗಳ ಹಿಂದೆ ಅವಳ ಮುಖದಂತೆ ಸುಕ್ಕಾಗಿದ್ದ ಅವಳ ಸೆರಗಿನ ತುದಿಯಲ್ಲಿ
ಕೂಡಿಟ್ಟ ಚಿಲ್ಲರೆಯಿಂದಲೆ
ಪರಮಾನ್ನ ಪಾನಕವ
ಉಂಡು
ಕುಡಿದು
ಈಗ ಎಲ್ಲಾ ಮರೆತಿರುವವನಂತೆ
ಪೇಟೆಯ ಜನಸಂದಣಿಯಲ್ಲಿ
ಕುತ್ತಿಗೆ ಬಿಗಿಯುವ ಟೈ ಹಾಗೂ ಕೋಟು ಧರಿಸಿ ಸೆಮಿನಾರುಗಳಲ್ಲಿ ತನ್ನದೇ ಅವ್ವನ ಕುರಿತು ಇನ್ನಿಲ್ಲದ ಕಥೆ
ಹೇಳುತ್ತ ಮಾತು ಮುಗಿಸುವ ಹೊತ್ತಿಗೆ ಕರ್ಚೀಫಿನಿಂದ
ಕಣ್ಣು ಒರೆಸಿಕೊಳ್ಳುತ್ತಾನಲ್ಲ
ಆ ಹುಡುಗ
ಅರೇ ಏನಿದು
ಮುದುಕಿ ಮತ್ತು ಹುಡುಗನ
ನಡುವೆ ಉಳಿದಿರುವ
ನೂರೆಂಟು ಪ್ರಶ್ನೆಗಳು
ಅದೇ ಸೆಮೆನಾರಿನ ಆ ಬದಿಯಲ್ಲಿ ಕೂತು
ಅವನ ಮಾತಿಗೆ
ಚಪ್ಪಾಳೆ ತಟ್ಟಿ
ವಾವ್ ಎಂದು ಉದ್ಗಾರವೆತ್ತಿ
ಗದ್ದಲ ಮಾಡುತ್ತಿರುವ ಅದೆಷ್ಟೋ ಜನರ
ಸಾವಿನಂಚಿನ ತಾಯಂದಿರು ಅಲ್ಲಲ್ಲಿ ಹರಿದ ಹಸಿರು ಸೀರೆಯುಟ್ಟು
ಬೀದಿ ಬೀದಿ ಅಲೆಯುತ್ತಿದ್ದಾರೆ
ಅರ್ಜಿ ಬರೆಸಲು
ಒಮ್ಮೆ ಅವಳತ್ತ ನೋಡಿ
ಸಾಧ್ಯವಾದರೆ ಅವಳ ತಲೆ ನೇವರಿಸಿ
ಜೊತೆ ಕೂತು ಅತ್ತುಬಿಡಿ
ನಿಮ್ಮ ಆ ಮದುಕಿಗೆ ಅಲ್ಲೂ ಸ್ಥಳವಿಲ್ಲ
ಅದಾಗಲೇ ವೃದ್ಧಾಶ್ರಮಗಳು
ಹೌಸ್ ಫುಲ್ ಬೋರ್ಡ್ ಹೊದ್ದು ಚಿಂತಿಸುತ್ತಿದ್ದಾವೆ

‍ಲೇಖಕರು Admin

23 June, 2016

6 Comments

  1. Vihi wadawadagi

    Mana kalakuva baraha adare aa tayandira makkala mana kalakuttillave aduve duranta

  2. Sangeeta Kalmane

    ನಿಮ್ಮ ಕವಿತೆ ಓದುತ್ತ “ಸೆರಗಿನ ತುದಿಗೆ ಗಂಟಿಕ್ಕಿದ ಕಾಸು ತೆಗೆದಿದ್ದರೆ” ಅನಿಸಿತು. ಅರೆ! ಮುಂದಿನ ಸಾಲಲ್ಲೆ ಈ ಶಬ್ದಗಳು.
    ಮನ ಮುಟ್ಟುವ ಕವಿತೆ.

    • sandeep eshanya

      dhanyavadagalu

  3. Girish

    Yenta duranta makkalu yenta mundina peeligeya kalpane .. sandeep nizakku nimma kavitheya salu mai navirelusuttide

  4. Anonymous

    Samvedanaathmaka Kavite …..

  5. sarvesh

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading