-ಡಾ.ಲಕ್ಷ್ಮಿಕಾಂತ ಮಿರಜಕರ
ಗಜಲ್
ಮಧು ಬಟ್ಟಲಿನಲಿ ಮದಿರೆಯನ್ನು ಕುಡಿಸಲು ಅಣಿಯಾಗು ಮಧುಬಾಲೆ
ದಿನವೂ ಪ್ರೇಮದ ನಶೆಯಲಿ ತೂರಾಡಲು ಅಣಿಯಾಗು ಮಧುಬಾಲೆ
ಜಗದ ಪ್ರೇಮಿಗಳ ಪಟ್ಟಿಯಲಿ ನನ್ನ ನಿನ್ನ ಹೆಸರಿರಲೆಬೇಕು
ಮದಿರಾ ಶಾಲೆಯ ಸೂಚಿಯಲ್ಲಿ ಸೇರಲು ಅಣಿಯಾಗು ಮಧುಬಾಲೆ
ಒಲವಿನ ಸುಧೆಯ ಗಳಿಸಲು ಪ್ರಾಣ ಅಡವಿಡಲು ಸಿದ್ಧ ನಿನಗಾಗಿ
ಸದಾ ಪ್ರಣಯದ ಮತ್ತಿನಲಿ ತೇಲಾಡಲು ಅಣಿಯಾಗು ಮಧುಬಾಲೆ
ನನ್ನ ಹೃದಯ ನನ್ನ ಕೈಯಿಂದ ಜಾರಿ ಹೋಗಿದೆ ನಿನ್ನ ಕಡೆ ಸಖಿ
ಕಡು ವಿರಹದ ನೋವು ನಲಿವು ಅನುಭವಿಸಲು ಅಣಿಯಾಗು ಮಧುಬಾಲೆ
ಪ್ರತಿದಿನ ನಿನ್ನ ನೆನೆದು ರೋದಿಸುವುದೆ “ಕಾಂತ’ನ ಕಾಯಕವಾಗಿದೆ
ಮಿಲನ ಕ್ರಿಯೆಯ ಸ್ವರ್ಗ ಸುಖವ ಸವಿಯಲು ಅಣಿಯಾಗು ಮಧು ಬಾಲೆ






0 Comments