ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಷಯ ಆರ್ ಶೆಟ್ಟಿ ಹೊಸ ಕವಿತೆ- ಕರುಣ ರಸ

ಅಕ್ಷಯ ಆರ್ ಶೆಟ್ಟಿ

ಅಲ್ಲೊಬ್ಬ ಹೆಣ್ಣಬ್ಬೆ
ಹಚ್ಚುತ್ತಿದ್ದ ಮೆಹಂದಿಯ ಅರ್ಧಕ್ಕೆ ಉಳಿಸಿದ್ದಾಳೆ
ಇನ್ನೊಬ್ಬ ಮಗಳು
ಆಸೆಪಟ್ಟು ಕೊಂಡ ಬಟ್ಟೆಗಳ ಸುಡುತ್ತಿದ್ದಾಳೆ
ಮತ್ತೊಬ್ಬಾಕೆ
ಹಸುಳೆಗಳ ಹಸಿವ ನೆನೆದು ಕಿಟಿಕಿಗೆ ತಲೆ ಆಣಿಸಿದ್ದಾಳೆ
ಅಲ್ಲೆ ಪಕ್ಕದ ಅವಳು,
ಕಳೆದುಕೊಂಡುಳಿದಿರುವ ನಾಳೆಗಳ ಚಿಂತೆಯಲಿದ್ದಾಳೆ
ಎದುರಿನ ರಸ್ತೆಯಲ್ಲವಳ ತಲೆ
ಬಂದೂಕಿನ ಕೋನಕೆ ಅಭಿಮುಖವಾಗಿ ಉರುಳಿದೆ!

ಅಲ್ಲವನ ಅಮ್ಮ
ಅವಳ ಗಂಡ
ಆಸರೆಯಾಗಿದ್ದ ವಿಧವೆ ಸೊಸೆಯನ್ನು ಕಳೆದುಕೊಂಡ ಮಾವ
ಬೆಳೆದು ನಿಂತಿದ್ದ ಮಗಳನ್ನು ಕಳೆದುಕೊಂಡ ಮನೆ
ಹರಾಜಿಗೆ ಸರಕಾದ ಮಗಳ ನೆನೆದು ಕಣ್ಣಿರಾದ ತಾಯಿ

ರಾತ್ರಿ ಹಗಲೆನ್ನದೆ ಕಲಿತು ಸುಂದರ ನಾಳೆಗಳ ಕನಸ ಹೊತ್ತಿದ್ದ ವೈದ್ಯ
ಫುಟ್ಬಾಲಿನಲಿ ದೇಶವನೇ ಪ್ರತಿನಿಧಿಸುವ ಕನಸ ಹೊತ್ತಿದ್ದ ಹದಿಹರೆಯದ ಹುಡುಗ
ಕ್ರಿಕೆಟ್ ಅಂಗಳದಲಿ ಮನೆಯವರ ನೆನೆದು ಕಣ್ಣೀರಾಗುತಿರುವ ಆಟಗಾರ
ನರಕವ ತಪ್ಪಿಸ ಹೊರಟು ಅಪಘಾತವ ಇದಿರ್ಗೊಂಡ ಮಂದೆ

ಇಷ್ಟೆ ಅಲ್ಲ, ಅಸಂಖ್ಯ ಕಥೆಗಳಿವೆ
ಇಲ್ಲಿ ನನ್ನ ಪಕ್ಕದಲಿ
ಕರುಣೆಯೊಂದೆ ನನ್ನ ಮಂತ್ರ!
ಬೇಲಿಯ ಈ ಬದಿಯಿಂದಲೇ…..
ಉದ್ಧಟತನ, ಬೇಲಿದಾಟದಿರಲೆಂಬ ಅನಂತ ಪ್ರಾರ್ಥನೆಯೊಡನೆ,
ಉಳಿವೆ ಸಹಾನುಭೂತಿಯ ಸಾಕಾರ ಮೂರ್ತಿಯಾಗಿ!

‍ಲೇಖಕರು Admin

25 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading