ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೇಮಾ ಹೆಬ್ಬಗೋಡಿ ಅನುವಾದಿತ ಕವಿತೆ- ವಸಂತದ ಸತ್ಯ ಕಥೆ…

ಮೂಲ : ರಮುನೆ ಬ್ರಂಡ್ಜೈಟ್
ಕನ್ನಡಕ್ಕೆ : ಹೇಮಾ ಹೆಬ್ಬಗೋಡಿ

ನೋ ಪ್ರಾಬ್ಲಂ, ನೋ ಪ್ರಾಬ್ಲಂ
ಹುಚ್ಚು ಹಿಡಿಸುವಂತಿದೆ ಈ ವಸಂತ
ನನ್ನೊಡಲು ಅರಳುತಿದೆ
ಮರದಂತೆ ಚಿಗುರುತಿದೆ
ಆಪರೇಷನ್‌ ಥಿಯೇಟರಿನ ಆಗಸದಲ್ಲಿ ಪ್ರಖರ ನಕ್ಷತ್ರ ಬೆಳಕು
ಒಂದೇ ಆಸೆ
ಪ್ರಜ್ಞೆಯ ತಳಾತಳದಲ್ಲಿ ಮುಳುಗೇಳಬೇಕು..
ತಟ್ಟನೇ ಉಸಿರೆಳೆದುಕೊಂಡೆ
ಕಣ್ಬಿಡುವ ಮುನ್ನ ಕಂಡದ್ದು:
ನಮ್ಮ ತೋಟದಲ್ಲಿ ಅರಳಿ ನಿಂತ ಬಾದಾಮಿ ಮರ.

ಹೇಗಿದೆ ಈಗ?
ವಸಂತದ ಕನಸು ಬಿತ್ತು, ಎಂದೆ.
ಕೊಟ್ಟ ಮದ್ದುಗಳ ಅಮಲು,
ಮೈಯೆಲ್ಲ ಬಳ್ಳಿಯಂತೆ ಸುತ್ತಿದೆ ವೈರು, ಪೈಪುಗಳು,
ನರದೊಳಗೆ ಇಳಿಯುತಿರುವ ಹನಿಗಳು ಆತ್ಮವನ್ನು ತಂದು ಜೋಡಿಸಿದೆ ದೇಹಕ್ಕೆ
ನೋ ಪ್ರಾಬ್ಲಂ, ನೋ ಪ್ರಾಬ್ಲಂ
ಕರುಳು ಬಳ್ಳಿ ಹೆರೆದಾಗಿನ ನೋವಿದೆ ಅಷ್ಟೆ
ಜೀವ ಹೊರಬಂದು ಅರಳುತಿದೆ ಇಷ್ಟಿಷ್ಟೇ
ಟಿಕ್‌ ಟಿಕ್‌ ಗಡಿಯಾರದ ಸದ್ದು ಹೆಚ್ಚುತಿದೆ ಅಷ್ಟೆ

‍ಲೇಖಕರು Admin

1 November, 2022

2 Comments

  1. prathibha nandakumar

    ಹೇಮಾ ಹೆಬ್ಬಗೋಡಿ ಅವರೇ ನನಗೆ ನೀವು ಮಾಡುವ ಅನುವಾದಗಳು ಮತ್ತು ನಿಮ್ಮ ಗದ್ಯ ಬರಹ ಬಹಳ ಇಷ್ಟ. ತುಂಬಾ ಚೆನ್ನಾಗಿ ಬರೀತೀರಿ.

    • hema

      ನಮಸ್ತೆ ಮೇಡಂ

      ನಿಮ್ಮ ಸಹೃದಯ ಪ್ರತಿಕ್ರಿಯೆಗೆ ಥ್ಯಾಂಕ್ಯೂ ಮೇಡಂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading