ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳೆ ಟ್ರಂಕುಗಳಲ್ಲಿ ಹಾಡಾಗುತ್ತವೆ..

ಕಾಡುವ ಕವಿತೆ

ವಿನಯಾ ನಾಯಕ್

ಕವಿತೆ ಕೆಲವೊಮ್ಮೆ

ಕಾಡಿ ಬೇಡಿ ಹುಟ್ಟಿಬಿಡುತ್ತದೆ
ಪ್ರಾಸ, ವ್ಯಾಕರಣ
ಲಯಲಾಸ್ಯದ ಹಂಗೇ ಬೇಡವೆನ್ನುತ್ತದೆ.

ಸಹಾಯ ಮಾಡಲಾಗದ ಪ್ರಾಯಶ್ಚಿತ್ತಕ್ಕೆ
ಪ್ರೀತಿಸಿದವರ ನೋಯಿಸಿದ್ದಕ್ಕೆ
ಪರ ಊರೊಂದು ನಮ್ಮೂರಾಗಿ ಬದಲಾದ ಸೋಜಿಗಕ್ಕೆ
ಕಳೆದುಕೊಂಡದ್ದೇನೆಂದು ಅರ್ಥವಾಗದೆ ಆಗುವ ಹತಾಶೆಗೆ

ಸಾಕಿದ ನಾಯಿ ಮುಪ್ಪಾಯಿತೆಂದು ಬೆದರಿಸುವ ಸಾವಿಗೆ
ಅಂದದ ಕೃಷ್ಣನ ಪಟ ನೀಡುವ ಸಾಂತ್ವನಕ್ಕೆ
ಜಗದ ಮೂಲೆ ಮೂಲೆಯಲ್ಲೂ
ಕವಿತೆ ಹುಟ್ಟುತ್ತದೆ
ಅಳುವಾಗಿ, ನಗುವಾಗಿ
ಅಕ್ಷರವಾಗಿ, ಮೌನವಾಗಿ

ಓರೆ ಕೋರೆ, ನೋವು ನಲಿವು, ತಪ್ಪು ಒಪ್ಪುಗಳೆಲ್ಲ
ಭಾಷೆಯೊಂದರ ಆಸರೆ ಪಡೆದು
ಅಕ್ಷರವಾದ ಕವಿತೆಗಳು
ಪುಸ್ತಕದಲ್ಲಿ ಉಳಿದುಕೊಳುತ್ತವೆ.

ಮತ್ತೊಂದಿಷ್ಟು ಹಳೆ ಟ್ರಂಕುಗಳಲ್ಲಿ
ಕೆಲವು ಹಾಡಾಗುತ್ತವೆ

ಭಾಷೆ, ಸದ್ದುಗಳ ಹಂಗಿಲ್ಲದ

ಕವಿತೆಗಳು ಹುಟ್ಟಿದ ಮನದಲ್ಲೇ
ಆಸರೆಯಾಗಿ ಉಳಿದುಕೊಳ್ಳುತ್ತವೆ.

ಒಳ್ಳೆಯದ್ದೋ, ಕೆಟ್ಟದ್ದೋ
ನನ್ನ ಕವಿತೆ ನಾನೇ ಬರೆದುಕೊಳ್ಳಬೇಕು
ಹಗುರಾಗಬೇಕು.

‍ಲೇಖಕರು avadhi

14 June, 2019

2 Comments

  1. Kusuma patel

    ಇಷ್ಟ ವೋ, ಕಷ್ಟ ವೋ, ಒಳ್ಳೆಯ ದೋ ಕೆಟ್ಟ ದ್ದೋ ನಮ್ಮ ಕವಿತೆ ನಾವೇ ಬರೆದು ಕೊಳ್ಳಬೇಕು, ಹಗುರಾಗಬೇಕು.
    ಕವಿತೆ ಇಷ್ಟ ವಾಯಿತು

  2. smitha Amrithraj

    ಚೆಂದಿದೆ ಹಗುರವಾಗಿಸುವ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading