ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ದೇವು ಮಾಕೊಂಡ

ಸದ್ಯ ನೀರ ಮೇಲೆ
ನೆನಪು ಬರೆದು
ಗಾಳಿಗೆ ಮುಖ ಮಾಡಿ
ನಿಂತಿದ್ದೇವೆ ನಾವು
ಬೋದಿ ವೃಕ್ಷದ ನೆನಪು ಮೆಲಕು ಹಾಕುತ್ತ

ನೀನು ಹಚ್ಚಿಟ್ಟು ಹೋದ
ಸಾಲು ಮರದ ಕೆಳಗಿನ ದೀಪಗಳು
ಉರಿಯದೇ ನಿಂತಿವೆ
ಸ್ಥಬ್ದ
ನಿಶಬ್ದ!

ನಿನ್ನ ಕಾಲ ಚರಿತ್ರಾರ್ಹ ಬಿಡು ದೊರೆಯೇ
ಅಲ್ಲಿ
ರಣರಂಗದ ಹೆಣಗಳೂ ಕಟ್ಟಿಕೊಂಡಿದ್ದವು
ರಂಗಸಜ್ಜಿಕೆ
ಕ್ಷಣಕಾಲ ಮರೆತು
ಬಹುಪರಾಕಿನೊಂದಿಗೆ
ಧರ್ಮಚಕ್ರದ ಮೇಲೆ ನೀನು
ಹಿಡಿದು ನಿಂತಾಗ

ನಮ್ಮ ಕಾಲವೂ
ಒಮ್ಮೆ ನೋಡು ಪ್ರಭು
ಹರಿದು ನಾಲಾಬಂದಿಯಾಗುತ್ತಿದೆ
ನಮ್ಮೊಳಗಿನ ಕಣ್ಣೀರು
ಕಲ್ಲು ಶಾಸನಗಳ ಎದುರಿಗೆ

ನಿನ್ನ ದರುಶನವಿಲ್ಲಿ ಶೂನ್ಯ ಬಿಂದುವಿನಲಿ
ಕಪ್ಪಾಗಿ ನಿಂತಿದೆ
ಪ್ರೇಮ ಜ್ಯೋತಿಯನು ಬದಿಗಿರಿಸಿ

ಒಂದು ಕ್ಷಣ
ಮಿಂಚು ಮಿನುಗು ಕಣ್ಣೆದುರು ಕಂಪನ
ದೃಷ್ಟಿ ಏಕಮುಖ ಚಲನೆ
ಕರಾಳ ಕತ್ತಲು
ಕೆಸರು ರಾಡಿಯಲಿ
ಬಿದ್ದು ಎದ್ದು ಹೊರಟಾಗ
ಇನ್ನಷ್ಟು ದಟ್ಟ ಕತ್ತಲು ಕವಿಸುತ್ತದೆ
ಭೋರಿಡುವ ಉಸಿರಿಗೂ ಕಿವಿಗೊಡದೆ

‍ಲೇಖಕರು Avadhi

13 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading