ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?’ – ತೇಜಸ್ವಿನಿ ಹೆಗಡೆ

‘ಸ್ತ್ರೀ’ ಎಂದರೆ ಅಷ್ಟೇ ಸಾಕೆ?

ತೇಜಸ್ವಿನಿ ಹೆಗಡೆ

ಚಿತ್ರ : ಸೌಮ್ಯ ಕಲ್ಯಾಣ್ ಕರ್

ಶಾಂತ ಸಾಗರದೊಳು ಸುನಾಮಿ, ಅಗ್ನಿಪರ್ವತದೊಳು ವಿಪ್ಲವ,

ಗುಂಡಗಿರೋ ಭೂಮಿ ಗುಡುಗಿ ಬಾಯ್ಬಿರಿದೇ ಪ್ರಳಯವಾಗಬೇಕಿಲ್ಲ!

ಮೃಗಕಿಂತ ಕೀಳಾಗಿ, ಅಲ್ಪ ಮಾನವೀಯತೆಯನೂ ಮರೆತು,

ನಾರಿಯ ಮೈ-ಮನದ ಮೇಲೆರಗುವ ನರನೊಂದೇ ಸಾಕಲ್ಲಾ!

.

ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?

ಮುಡಿಬಿಚ್ಚಬೇಕೆಂದಿಲ್ಲ, ಮುಚ್ಚಿರುವ ಮನದ ತೆರೆಯ ತೊರೆದರೆ,

ಶಿವೆಯ ಮೂರೆನಯ ಕಣ್ಣು ಉದ್ಭವ! ಪ್ರಾಣಿಯ ಪ್ರಾಣವೆಲ್ಲಾ ಹರಣ!

.

ಆತಂಕದಗೂಡು ಕೆಡವಲೆಷ್ಟು ತಡ?

ಮುಳುಗಿರುವವಗೆ ಚಳಿಯದೇನು ಭಯ?

ಕೊಡವಿದರೆ ಸಾಕೊಮ್ಮೆ ಇಳೆ, ಭೂಭಾರಗಳೆಲ್ಲಾ ಶೂನ್ಯ!

.

ದುರ್ಬಲತೆಯ ದುರ್ಬಳಕೆಗೆ, ಹಿಡಿಯಬೇಕಿದೆ ತ್ರಿಶೂಲ, ಶಲಾಕೆ…

ಸಬಲ ಮನವೊಂದಿದ್ದೊಡೆ, ಮೆಟ್ಟಬಲ್ಲೆವು ಕ್ರಿಮಿಯ ಕೆಡವಿ ನೂಕಿ.

ಮಲಗಿರುವ ಮಾನವೀಯತೆಗೊಮ್ಮೆ ಕಲಿಸಬೇಕಿದೆ ಪಾಠ,

ದುರ್ಗೆ, ಕಾಳಿ, ಮಾರಮ್ಮರನು ನೆನೆದು ಹಾರಿಸು ನೀ ವಿಜಯದ ಬಾವುಟ.

 

‍ಲೇಖಕರು G

24 December, 2012

7 Comments

  1. bharathi

    ಒಪ್ಪಿದೆ ಒಪ್ಪಿದೆ ನಿಮ್ಮ ಮಾತು … ಕವನ ಚೆನ್ನಾಗಿದೆ

  2. Sowmya

    Yes, yes n yes……really inspiring Tejaswini…..

  3. Shama Nandibetta

    ಭಲೇ ಹುಡುಗೀ.. Tight Hug..

  4. samyuktha

    tumba chennada kavana!

  5. Anuradha.rao

    ಒಪ್ಪಿದೆ .ಸಬಲ ಮನವೊಂದಿದ್ದರೆ …ನಿಜಕ್ಕೂ Inspiring…

  6. sahana prasad

    wonderful poem tejaswini! u said it n well!

  7. Mahesh Siddalingappa

    kavana chennagide Tejaswini…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading