ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಳೆತ…

ಸುಪ್ರೀತಾ ಶೆಟ್ಟಿ ಗುಬ್ಬಚ್ಚಿ

ಹುಟ್ಟಿದಂದು ಅತ್ತವಳ ಎದೆಗೊತ್ತಿ ಹಿಡಿದಾಗ ಆ ಮಿಡಿತವೇ ನನಗೆ ಜೋ ಲಾಲಿಯಾಗಿತ್ತು,
ಹಸಿವಾಗಿದ್ದು ನಾನರಿವ ಮುನ್ನ ಅಮೃತವುಣಿಸುವ ಆಂತರ್ಯ ನಿನಗಷ್ಟೇ ಗೊತ್ತು,

ಅಂಬೆಗಾಲಿಟ್ಟು ಹೊರಟಾಗ ಗೊತ್ತುಗುರಿಯಿಲ್ಲದ ಪಯಣ ನನ್ನದು,
ಹತ್ತು ಹೆಜ್ಜೆ ಇಡುವ ಮೊದಲೆ ಹೊತ್ತು ತಿರುಗಿದ್ದರು ತಂದೆ ಕಾಲು ಸವೆದಿತೆಂದು,

ಓಡುತಲಿರುವೆ ಬಹುದೂರದವರೆಗೂ ವಾತ್ಸಲ್ಯದ ಕರೆ ಕೇಳಿಸಿದರೂ ತಿರುಗುವ ಮನಸಿಲ್ಲ,
ಕಟ್ಟಿ ಕೊಟ್ಟ ಕನಸುಗಳಿಗೆ ಜೀವ ತುಂಬುವ ಬಯಕೆ ಕೆಟ್ಟ ಹಠವೋ, ದಿಟ್ಟತನವೋ ತಿಳಿಯುತಿಲ್ಲ,

ಸೋತುಬಿಡುವೆ ಒಮ್ಮೊಮ್ಮೆ ಬಂದು ಬಿಡಲೇ ಅಮೃತವಿತ್ತ ಮಡಿಲಿಗೆ,
ಜೊತೆಯಾಗಲೇ ಹೊತ್ತ ಆ ಹೆಗಲಿಗೆ, ಮೊದಲಿನಂತೆ ಮಗುವಾಗಿ,

ಮತ್ತೆ ಭಾವನೆಗಳ ಹೊಯ್ದಾಟ ಹೋಗಲೇಬೇಕು ದೂರ ತೀರಕೆ,
ತಾಯೆನಿಸಿದ ಮುದ್ದು ಮಗಳಿಗಾಗಿ, ನೋವಲ್ಲೂ ನಗುವ ಸಂಗಾತಿಗಾಗಿ.

‍ಲೇಖಕರು Admin

20 October, 2021

1 Comment

  1. Anil chatnalli

    ಕಾಶಿಗೆ ಹೋಗಲಿಕೆ ಏಸೊಂದು ದಿನಬೇಕು
    ತಾಸೊತ್ತಿನ ಹಾದಿ ತೌರೂರ ಮನೆಯಲ್ಲಿ
    ಕಾಶಿ ಕುಂತವಳೆ ಹಡೆದವ್ವ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading