ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂತಕದ ಬಯಲಿನಲಿ ಉಳಿದವರೆಷ್ಟೋ?

ಮಾಲತಿ ಗೋರೆಬೈಲ್

ವಿಶ್ವದ ಜರ್ಜರಿತ ಅಂಗಾಂಗಗಳಲ್ಲಿ
ಲೆಕ್ಕ ತಪ್ಪಿದ ಮನುಷ್ಯರ ಹೆಣ
ನಿಂತ ನೆಲವೇ ಅಂಕೆಯಿಲ್ಲದ ಸೋಂಕಾದ ಗಳಿಗೆ
ತುತ್ತು ಅನ್ನದ ಬವಣೆ….

ವೈದ್ಯ, ವಿಜ್ಞಾನ, ಸಂಶೋಧನೆಗೂ ನಿಲುಕದ ಕ್ರೂರ  ಜಂತುವಿನ ಅಟ್ಟಹಾಸ
ದೇಶ ಉಳಿಸಲು ಮುತ್ಸದ್ದಿಗಳ ಹರಸಾಹಸ
ಪೋಲೀಸು, ದಾದಿಯರ ಪಣಕ್ಕಿಟ್ಚ ಜೀವ,
ಶಂಕೆಗೂ ಮೀರಿದ ರೋಗದ ಕಬಂಧಬಾಹು
ಚೀರಾಟ, ಚೀತ್ಕಾರ, ವಿಲವಿಲ …

ಉಸಿರು ಉಳಿಸಲು ಮಾಸ್ಕ್, ಕರವಸ್ತ್ರ, ಸ್ಯಾನಿಟೈಸರಗಳ ಪಡಿಪಾಟಲು..
ಸಾವಿನ ಜಾತ್ರೆಯಲ್ಲಿ ಬದುಕುಳಿದವನ ಹೆಣಗಾಟ
ದಿನ ಬೆಳಗು ದುಡಿದು ತಿನ್ನುವವನ ಬರಿದಾದ
ಕೂಳಿನ ಪಾತ್ರೆ,
ಸಾಲುಗಟ್ಟಿದ ಮೌನ,
ಮಡುಗಟ್ಟಿದ ಶೋಕಯಾತ್ರೆ….

ಭೂಮಂಡಲವೇ ಸ್ತಭ್ದ, ನಿಶ್ಯಭ್ಧ
ನಿಲ್ಲದ ವ್ಯಾಧಿ
ಎಲ್ಲಿಗೋ ಪಯಣ
ಜೀವಕ್ಕಾಗಿ ಹೋರಾಟ
ಸೂತಕದ ಬಯಲಲ್ಲಿ
ಉಳಿದವರೆಷ್ಟೋ?
ಇನ್ನೂ ಲೆಕ್ಕ ಹಾಕಬೇಕಿದೆ..

‍ಲೇಖಕರು avadhi

27 March, 2020

1 Comment

  1. prathibha nandakumar

    VERY good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading