ಇಪ್ಪತ್ತೊಂದರ ಹುಡುಗಿ ಬಂದರೆ ಓಡಿಸುವಿರೇ?

ಮೂಲ: ರಾಲ್ಫ್ ಬೋಲ್ಡ್ರೆವುಡ್

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ರಾಲ್ಫ್ ಬೋಲ್ಡ್ರೆವುಡ್, 1869ರಲ್ಲಿ ಪ್ರಕಟಿಸಿದ “ಓಲ್ಡ್ ಮೆಲ್ಬರ್ನ್ ಮೆಮೊರಿಸ್” ಗ್ರಂಥದಲ್ಲಿ ಸೇರಿಸಿದ ಕೆಲವು ಕವನಗಳಲ್ಲಿ ಇದೊಂದು.

ರಾಲ್ಫ್ ಬೋಲ್ಡ್ರೆವುಡ್ ಅನ್ನುವುದು ಥಾಮಸ್ ಅಲೆಕ್ಸಾಂಡರ್ ಬ್ರೌನ್ ಅನ್ನುವವನ ಕಾವ್ಯನಾಮ.

 

ಬೇಕಾಗಿದ್ದಾರೆ

ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು  ಇಪ್ಪತ್ತಮೂರು ವರ್ಷದ ಯುವತಿ ಬೇಕಾಗಿದ್ದಾರೆ.

ತೃಪ್ತಿಕರ ಶಿಫಾರಸಿನ ಅಗತ್ಯವಿದೆ

– ಟೈಮ್ಸ್ ಪತ್ರಿಕೆಯ ಜಾಹಿರಾತು, 1869

 

ನನಗೆ ಯಾಕೆ ಇಪ್ಪತ್ತಮೂರೇ  ಆಗಿರಬೇಕು?

ಆ ಇಪ್ಪತ್ತಮೂರರ ಮಾಂತ್ರಿಕ ವಯಸ್ಸಿನಲ್ಲಿ

ನನ್ನಲ್ಲಿ ಚಿಗುರೊಡೆಯುವ ಯಾವ ಸದ್ಗುಣಗಳು

ಅವರಿಗೆ ಗೋಚರಿಸುತ್ತವೆ?

ಅಂದಚೆಂದದ ತರುಣಿ

ಇಪ್ಪತ್ತಮೂರರಲ್ಲಿ ಜಾಣೆಯಾಗುತ್ತಾಳೆಯೇ?

ಯಾವ ಘನಂದಾರಿ ಕಾರಣಕ್ಕೆ ಅವರಿಗೆ

ಇಪ್ಪತ್ತಮೂರರ ಯುವತಿಯೇ ಬೇಕಂತೆ?

 

ಗೌರವಾನ್ವಿತ ಮೇಟ್ರನ್ ಅವರೇ, ನೀವು ಯಾರಾದರಾಗಿರಲಿ,

ನಿಮಗೆ ಇಪ್ಪತ್ತ ಎರಡು ಆಗಿಬರುವುದಿಲ್ಲವೇ?

ಇಪ್ಪತ್ತೊಂದರ ಹುಡುಗಿ ಬಂದರೆ ಓಡಿಸುವಿರೇ?

ಮತ್ತು ಇಪ್ಪತ್ತರ ಚೆದುರೆ ಬರಲಪ್ಪಣೆಯಿಲ್ಲವೇ?

ಹತ್ತೊಂಭತ್ತು ಬಹುಶಃ ಅನರ್ಹಳು

ಹದಿನೆಂಟು ಚೆಲ್ಲು ಎನ್ನಿಸಬಹುದು

ಅದಕ್ಕೇ ನೀವು ಹುಡುಕುತ್ತಿರುವಿರೇ?

ಸಕಲ ನೆಲ ಜಲದಾಚೆ

ಆ ಸುವರ್ಣ ವಯಸ್ಸಿನ ಇಪ್ಪತ್ತ ಮೂರಕ್ಕೆ?

ಆದರೂ ವಯಸ್ಸು ಜಾರುತ್ತವೆ – ನಿಮಗೂ ಮತ್ತು ನನಗೂ

ಇಪ್ಪತ್ತ ಮೂರರ ಆಜುಬಾಜಿನಲ್ಲಿ ಅಥವಾ ಬಹುದೂರದಲ್ಲಿ.

ಸಂಜೆ ಐದರ ಚಹಾ ಕುಡಿಯುತ್ತ ನಾನು ಚಿಂತಿಸುತ್ತೇನೆ

ಅವಳು ಅಲ್ಲಿಗೆ ತಲುಪಿದಳೇ, ಇಪ್ಪತ್ತ ಮೂರರ ಚೆಲುವೆ?

ಗೆಳೆಯರು ಶೀತಲ, ನಿರ್ದಯರಾದಾಗ ಅನ್ನಿಸುತ್ತದೆ

ಇಪ್ಪತ್ತ ಮೂರರ ವಯಸ್ಸಿನಲ್ಲಿ ಆಸರೆಯಿದೆ.

ನನ್ನ ಹುಟ್ಟುಹಬ್ಬದ ದಿನ ಬರೆಯುತ್ತೇನೆ ನಿನಗೆ, ಅಪರಿಚಿತ ಗೆಳೆಯನೇ

“ಇಗೋ, ತಗೋ, ನನಗೆ ಇಪ್ಪತ್ತ ಮೂರು!”

 

********

WANTED

A young Lady of twenty-three years of age, as a teacher in a Ladies’ School. Satisfactory references required.— ” Times ” Advertisement.

 

Why should I be twenty-three ?

What are the virtues they can see

Just about to bloom in me

In the magical year of twenty-three ?

Does a maiden, fair and free,

Get prudent just at twenty-three ?

Whatever can the reason be

That they want a girl just twenty-three ?

 

Dignified matron, whoever you be,

Would not twenty-two do for thee ?

Would twenty-one be shown to the door,

And twenty told to come no more?

Nineteen, perhaps, would hardly be fit,

Eighteen strikes one as rather a chit.

Why must you search o’er land and sea

For the golden age of twenty-three?

 

Still the years glide on—for you and for me,

We’re nearer, or farther from, twenty-three.

Oft, as I sit over my five o’clock tea,

I think, did she get her ? age twenty-three !

When friends are cold and unkind to me,

I think there’s a refuge when twenty-three.

On my birthday I’ll write, unknown friend, to thee,

Exclaiming, ” Here, take me, I’m twenty-three.

******

 

OLD MELBOURNE MEMORIES

BY ROLF BOLDREWOOD

London MACMILLAN AND CO, Ltd. NEW YORK : MACMILLAN & CO. I896

 

Thomas Alexander Browne

Australian author who published many of his works under the pseudonym Rolf Boldrewood.

‍ಲೇಖಕರು avadhi

March 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: